ಐಶಾರಾಮಿ ಮಲ್ಟಿಪ್ಲೆಕ್ಸ್​ ನಿರ್ಮಿಸಿದ ಅಲ್ಲು ಅರ್ಜುನ್: ಹೆಸರೇನು? ಎಲ್ಲಿದೆ? ಮೊದಲ ಸಿನಿಮಾ ಯಾವುದು?

Allu Arjun: ಸ್ಟಾರ್ ನಟ ಅಲ್ಲು ಅರ್ಜುನ್ ಒಳ್ಳೆಯ ಉದ್ಯಮಿ ಸಹ ಹೌದು. ಇದೀಗ ಅಲ್ಲು ಅರ್ಜುನ್ ಹೊಸ ಐಶಾರಾಮಿ, ಆಧುನಿಕ ತಂತ್ರಜ್ಞಾನವುಳ್ಳ ಮಲ್ಟಿಪ್ಲೆಕ್ಸ್ ಒಂದನ್ನು ನಿರ್ಮಿಸಿದ್ದಾರೆ.

ಐಶಾರಾಮಿ ಮಲ್ಟಿಪ್ಲೆಕ್ಸ್​ ನಿರ್ಮಿಸಿದ ಅಲ್ಲು ಅರ್ಜುನ್: ಹೆಸರೇನು? ಎಲ್ಲಿದೆ? ಮೊದಲ ಸಿನಿಮಾ ಯಾವುದು?
ಅಲ್ಲು ಅರ್ಜುನ್
Follow us
ಮಂಜುನಾಥ ಸಿ.
|

Updated on: Jun 14, 2023 | 9:28 AM

ನಟ ಅಲ್ಲು ಅರ್ಜುನ್ (Allu Arjun) ತೆಲುಗು ಚಿತ್ರರಂಗದ (Tollywood) ಟಾಪ್ ಸ್ಟಾರ್​ಗಳಲ್ಲಿ ಒಬ್ಬರು. ಅಲ್ಲು ಅರ್ಜುನ್ ಒಳ್ಳೆಯ ನಟರಾಗಿರುವ ಜೊತೆಗೆ ಒಳ್ಳೆಯ ಉದ್ಯಮಿ ಸಹ ಹೌದು. ಕೆಲವು ಐಶಾರಾಮಿ ಹೋಟೆಲ್, ಪಬ್ ಹಾಗೂ ರಿಯಲ್ ಎಸ್ಟೇಟ್​ ಮೇಲೆ ಅಲ್ಲು ಹೂಡಿಕೆ ಮಾಡಿದ್ದಾರೆ. ಇವುಗಳ ಜೊತೆಗೆ ನಿರ್ಮಾಣ ಸಂಸ್ಥೆ, ಒಟಿಟಿಯಲ್ಲಿ ತಂದೆಯೊಟ್ಟಿಗೆ ಪಾಲುದಾರಿಕೆ ಹೊಂದಿದ್ದಾರೆ. ಇದೀಗ ಹೊಸದಾಗಿ ಸ್ಟುಡಿಯೋ ಸಹ ನಿರ್ಮಾಣ ಮಾಡುತ್ತಿದ್ದಾರೆ. ಇವುಗಳ ಜೊತೆಗೆ ಅಂತರಾಷ್ಟ್ರೀಯ ಗುಣಮಟ್ಟದ ಮಲ್ಟಿಪ್ಲೆಕ್ಸ್ (Multiplex) ಅನ್ನು ನಿರ್ಮಾಣ ಮಾಡಿದ್ದಾರೆ. ಜೊತೆಗೆ ಫುಡ್ ಕೋರ್ಟ್ ಸಹ ನಿರ್ಮಿಸಿದ್ದಾರೆ.

ಹೈದರಾಬಾದ್​ನ ಅಮೀರ್ ಪೇಟ್​ನ ಮಧ್ಯ ಭಾಗದಲ್ಲಿ ಅಲ್ಲು ಅರ್ಜುನ್ ಹಾಗೂ ಏಸಿಯನ್ ಸಂಸ್ಥೆ ಸೇರಿಕೊಂಡು ಸತ್ಯಂ ಚಿತ್ರಮಂದಿರವನ್ನು ಏಷಿಯನ್ ಸತ್ಯಂ ಮಾಲ್ ಆಗಿ ಬದಲಾಯಿಸಿದ್ದು ಮಾಲ್ ಒಳಗೆ ಉತ್ತಮ ಗುಣಮಟ್ಟದ ಮಲ್ಟಿಪ್ಲೆಕ್ಸ್ ಅನ್ನು ಅಲ್ಲು ಅರ್ಜುನ್ ನಿರ್ಮಿಸಿದ್ದಾರೆ. ಮಲ್ಟಿಪ್ಲೆಕ್ಸ್​ಗೆ ಎಎಎ ಸಿನಿಮಾಸ್ ಎಂದು ಹೆಸರಿಡಲಾಗಿದೆ. ಏಷಿಯನ್ ಸತ್ಯಮ್ ಮಾಲ್ ಹಾಗೂ ಮಲ್ಟಿಪ್ಲೆಕ್ಸ್​ ಇಂದು (ಜೂನ್ 15) ಉದ್ಘಾಟನೆಗೊಳ್ಳಲಿದೆ. ತೆಲಂಗಾಣ ಸಿನಿಮಾಟೊಗ್ರಫಿ ಸಚಿವ ತಲಸಾನಿ ಶ್ರೀನಿವಾಸ ಯಾದವ್ ಹಾಗೂ ಅಲ್ಲಿ ಅರ್ಜುನ್ ಅವರು ಉದ್ಘಾಟನೆ ಮಾಡಲಿದ್ದಾರೆ. ಎಎಎ ಮಲ್ಟಿಪ್ಲೆಕ್ಸ್​ನಲ್ಲಿ ಮೊದಲ ಸಿನಿಮಾ ಪ್ರಭಾಸ್ ನಟನೆಯ ಆದಿಪುರುಷ್ ಪ್ರದರ್ಶಿತಗೊಳ್ಳಲಿದೆ.

ಎಎಎ ಮಲ್ಟಿಪ್ಲೆಕ್ಸ್​ ಐದು ಸ್ಕ್ರೀನ್​ಗಳನ್ನು ಒಳಗೊಂಡಿದ್ದು ಅತ್ಯುತ್ತಮ ಸೌಂಡ್ ಸಿಸ್ಟಂ, ಸ್ಕ್ರೀನ್ ಹಾಗೂ ಆಸನ ವ್ಯವಸ್ಥೆಯನ್ನು ಒಳಗೊಂಡಿದೆ. ಇದೇ ಮಾಲ್​ನಲ್ಲಿ ಎಎಎ ಫುಡ್ ಕೋರ್ಟ್ ಸಹ ಇದ್ದು, ಒಂದೀಡಿ ಫ್ಲೋರ್​ ಅನ್ನು ಫುಡ್ ಕೋರ್ಟ್​ಗಾಗಿ ಮೀಸಲಿಡಲಾಗಿದ್ದು ಇದರ ಮಾಲೀಕರು ಸಹ ಅಲ್ಲು ಅರ್ಜುನ್ ಅವರೇ ಆಗಿದ್ದಾರೆ. ಫುಡ್ ಕೋರ್ಟ್​ನಲ್ಲಿ ತೆಲಂಗಾಣದ ಮೊದಲ ಪೋಪೇಸ್ ಚಿಕನ್ ಬ್ರ್ಯಾಂಡ್​ನಿಂದ ಹಿಡಿದು ಹಲ್ದಿರಾಮ್ಸ್, ಕೃತುಂಗಾ, ಪಿಸ್ತಾ ಹೌಸ್, ನಂದಿನಿ, ಡೋಮಿನೋಜ್, ಪಿಡ್ಜಾ ಹಟ್ ಇನ್ನೂ ಹಲವು ಜನಪ್ರಿಯ ಬ್ರ್ಯಾಂಡ್​ಗಳು.

ಒಟ್ಟು ಮೂರು ಲಕ್ಷ ಚದರ ಅಡಿ ವಿಸ್ತೀರ್ಣದ ಮಾಲ್ ಇದಾಗಿದ್ದು, ಮೂರು ಫ್ಲೋರ್​ಗಳನ್ನು ಕೇವಲ ಕಾರ್ ಪಾರ್ಕಿಂಗ್​ಗೆ ಮೀಸಲಿಡಲಾಗಿದೆ. ಮೊದಲೆರಡು ಫ್ಲೋರ್​ಗಳಲ್ಲಿ ಶಾಪಿಂಗ್ ಮಾಲ್​ ಇದ್ದು, ಮೂರನೇ ಫ್ಲೋರ್​​ನಲ್ಲಿ ಎಎಎ ಫುಡ್ ಕೋರ್ಟ್ ಇದೆ. ನಾಲ್ಕನೇ ಫ್ಲೋರ್​ನಲ್ಲಿ ಎಎಎ ಮಲ್ಟಿಪ್ಲೆಕ್ಸ್​ ಇದೆ. ಜೂನ್ 14 ರಂದು ಪೂಜೆಯನ್ನು ನೆರವೇರಿಸಲಾಗಿದ್ದು ಜೂನ್ 15 ರಂದು ಉದ್ಘಾಟನೆ ಆಗಿ ಸಾರ್ವಜನಿಕರ ಪ್ರವೇಶಕ್ಕೆ ಪ್ರವೇಶ ಕಲ್ಪಿಸಲಾಗುತ್ತದೆ. ಆದರೆ ಮಲ್ಟಿಪ್ಲೆಕ್ಸ್​ಗಳು ಜೂನ್ 16ಕ್ಕೆ ಕಾರ್ಯಾರಂಭ ಮಾಡಲಿದ್ದು ಮೊದಲ ಸಿನಿಮಾ ಆಗಿ ಪ್ರಭಾಸ್ ನಟನೆಯ ಆದಿಪುರುಷ್ ಪ್ರದರ್ಶನಗೊಳ್ಳಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ