ಅಬ್ಕಾರಿ ಸಚಿವರ ತವರು ಜಿಲ್ಲೆಯಲ್ಲೇ ಮದ್ಯ ದಂಧೆ.. ಎಣ್ಣೆ ಖರೀದಿಗೆ ಆಂಧ್ರ, ತಮಿಳ್ನಾಡಿಂದ ಬರುತ್ತಾರೆ!

ಕೋಲಾರ: ಅದು ಅಬಕಾರಿ ಸಚಿವರ ತವರು ಜಿಲ್ಲೆ, ಜೊತೆಗೆ ಆಂಧ್ರ ಹಾಗೂ ತಮಿಳುನಾಡಿನ ಗಡಿಗೆ ಹೊಂದಿಕೊಂಡಿರುವ ಜಿಲ್ಲೆ. ಅಲ್ಲಿ ಹೊರ ರಾಜ್ಯಗಳ ಮದ್ಯದ ಹೊಸ ನೀತಿ ನಿಯಮ, ಅಬಕಾರಿ ಸಚಿವರ ತವರಲ್ಲೇ ಅಕ್ರಮ ಮದ್ಯದ ಮಾಫಿಯಾ ಮಾಡೋದಕ್ಕೊಂದು ದಾರಿ ಮಾಡಿಕೊಟ್ಟಿದೆ. ಕರ್ನಾಟಕದ ಬಾರ್​ಗಳಿಗೆ ಮುಗಿ ಬೀಳುವ ಹೊರ ರಾಜ್ಯದ ಜನ! ಆಂಧ್ರದ ಗಡಿ ಪ್ರದೇಶದಲ್ಲಿ ಮದ್ಯದಂಗಡಿಗಳ ಮುಂದೆ ಜನ ತುಂಬಿ ಹೋಗಿರ್ತಾರೆ. ಎಲ್ಲೆಂದರಲ್ಲಿ ಕುಳಿತು ಎಣ್ಣೆನ ಹೊಟ್ಟೆಗಿಳಿಸ್ತಿರ್ತಾರೆ. ಮತ್ತೊಂದೆಡೆ ಬಾರ್​ಗಳ ಮುಂದೆ ನಿಂತು ಆಟೋಗಳಲ್ಲಿ ಕೇಸ್​ಗಟ್ಟಲೆ ಎಣ್ಣೆಯನ್ನು […]

ಅಬ್ಕಾರಿ ಸಚಿವರ ತವರು ಜಿಲ್ಲೆಯಲ್ಲೇ ಮದ್ಯ ದಂಧೆ.. ಎಣ್ಣೆ ಖರೀದಿಗೆ ಆಂಧ್ರ, ತಮಿಳ್ನಾಡಿಂದ ಬರುತ್ತಾರೆ!
Edited By:

Updated on: Sep 22, 2020 | 2:47 PM

ಕೋಲಾರ: ಅದು ಅಬಕಾರಿ ಸಚಿವರ ತವರು ಜಿಲ್ಲೆ, ಜೊತೆಗೆ ಆಂಧ್ರ ಹಾಗೂ ತಮಿಳುನಾಡಿನ ಗಡಿಗೆ ಹೊಂದಿಕೊಂಡಿರುವ ಜಿಲ್ಲೆ. ಅಲ್ಲಿ ಹೊರ ರಾಜ್ಯಗಳ ಮದ್ಯದ ಹೊಸ ನೀತಿ ನಿಯಮ, ಅಬಕಾರಿ ಸಚಿವರ ತವರಲ್ಲೇ ಅಕ್ರಮ ಮದ್ಯದ ಮಾಫಿಯಾ ಮಾಡೋದಕ್ಕೊಂದು ದಾರಿ ಮಾಡಿಕೊಟ್ಟಿದೆ.

ಕರ್ನಾಟಕದ ಬಾರ್​ಗಳಿಗೆ ಮುಗಿ ಬೀಳುವ ಹೊರ ರಾಜ್ಯದ ಜನ!
ಆಂಧ್ರದ ಗಡಿ ಪ್ರದೇಶದಲ್ಲಿ ಮದ್ಯದಂಗಡಿಗಳ ಮುಂದೆ ಜನ ತುಂಬಿ ಹೋಗಿರ್ತಾರೆ. ಎಲ್ಲೆಂದರಲ್ಲಿ ಕುಳಿತು ಎಣ್ಣೆನ ಹೊಟ್ಟೆಗಿಳಿಸ್ತಿರ್ತಾರೆ. ಮತ್ತೊಂದೆಡೆ ಬಾರ್​ಗಳ ಮುಂದೆ ನಿಂತು ಆಟೋಗಳಲ್ಲಿ ಕೇಸ್​ಗಟ್ಟಲೆ ಎಣ್ಣೆಯನ್ನು ತುಂಬಿಕೊಂಡು ಹೋಗುತ್ತಿರುತ್ತಾರೆ. ಈ ರೀತಿಯ ದೃಶ್ಯ ಕೋಲಾರ ಜಿಲ್ಲೆಯ ಗಡಿ ಭಾಗದಲ್ಲಿ ಸಾಮಾನ್ಯ.

ಆಂಧ್ರಕ್ಕೆ ಹೊಂದಿಕೊಂಡಂತೆ ಇರುವ ರಾಜ್​ಪೇಟೆ ರಸ್ತೆಯ ಜೆ.ಕೆ.ಪುರಂ ಹಾಗೂ ಪಂತನಹಳ್ಳಿ ಬಳಿ ಕರ್ನಾಟಕಕ್ಕೆ ಸೇರಿದ ಸುಮಾರು 25ಕ್ಕೂ ಹೆಚ್ಚು ಬಾರ್​ಗಳಿವೆ ಅಷ್ಟೂ ಬಾರ್​ಗಳಲ್ಲಿ ಮುಂಜಾನೆ 9 ರಿಂದ ಸಂಜೆ 10 ಗಂಟೆವರೆಗೆ ಬಿಡುವಿಲ್ಲದೆ ವ್ಯಾಪಾರ ನಡೆಯುತ್ತದೆ.

ಅದರಲ್ಲೂ ಬರೀ ಆಂಧ್ರ ಹಾಗೂ ತಮಿಳು ನಾಡಿನ ಜನರಿಂದಲೇ ಭರ್ಜರಿ ವ್ಯಾಪಾರ ನಡೆಯುತ್ತೆ. ಕೇವಲ ಬಾರ್​ಗೆ ಬಂದು ಕುಡಿಯೋದಷ್ಟೇ ಅಲ್ಲಾ ಆಟೋ, ಟೆಂಪೋಗಳನ್ನು ತಂದು ತುಂಬಿ ಕೊಂಡು ಹೋಗುತ್ತಾರೆ. ಆಂಧ್ರ ಪ್ರದೇಶದಲ್ಲಿ ಹೀಗೆ ಕರ್ನಾಟಕದ ಮದ್ಯ ಮಾರಾಟಕ್ಕೆ ನಿಷೇಧವಿದ್ದರೂ ಕಳ್ಳದಾರಿಗಳ ಮೂಲಕ ಸರಬರಾಜು ಮಾಡಲಾಗುತ್ತಿದೆ.

ನಿತ್ಯ ಲಕ್ಷಾಂತರ ರೂಪಾಯಿ ಕರ್ನಾಟಕದ ಮದ್ಯವನ್ನು ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿದೆ. ಅಷ್ಟಕ್ಕೂ ಇಂಥಾದೊಂದು ದಂಧೆ ರಾಜ್ಯದ ಅಬಕಾರಿ ಸಚಿವ ಹೆಚ್​.ನಾಗೇಶ್​ ರವರ ತವರು ಜಿಲ್ಲೆಯಲ್ಲೇ ನಡೆಯುತ್ತಿದ್ದು, ಅವರ ಹೆಸರೇ ಬಳಸಿಕೊಂಡು ಈ ಕೃತ್ಯ ಎಸಗುತ್ತಿರುವುದು ಮಹಾ ದುರಂತವಾಗಿದೆ. ಇದನ್ನು ಸ್ವತ: ಅಬಕಾರಿ ಸಚಿವರೇ ಹೇಳಿಕೊಂಡಿದ್ದಾರೆ.

ಆಂಧ್ರ ಮತ್ತು ತಮಿಳುನಾಡಿಗೆ ಮದ್ಯಕ್ಕೆ ನಿರ್ಬಂಧ ಗಡಿಯಲ್ಲಿ ಕುಡುಕರ ಅಬ್ಬರ?
ಆಂಧ್ರ ಮತ್ತು ತಮಿಳುನಾಡಿನಲ್ಲಿ ಮದ್ಯ ಅಂಗಡಿಗಳನ್ನು ಸರ್ಕಾರ ತನ್ನ ಹಿಡಿತಕ್ಕೆ ಪಡೆದುಕೊಂಡು ಮದ್ಯ ಮಾರಾಟಕ್ಕೆ ಸಾಕಷ್ಟು ನಿರ್ಬಂಧವನ್ನು ಹೇರಿದೆ. ಜೊತೆಗೆ ಜನರ ಆರೋಗ್ಯದ ದೃಷ್ಟಿಯಿಂದ ಎಣ್ಣೆ ಕಿಕ್​ ಕೂಡಾ ಕಡಿಮೆ ಮಾಡಿದ್ದಾರೆ.

ಹಾಗಾಗಿ ಜನರಿಗೆ ಆಂಧ್ರದ ಎಣ್ಣೆಗಿಂತ ಕರ್ನಾಟಕದ ಎಣ್ಣೆ ಕಡಿಮೆ ಬೆಲೆಗೆ ಹಾಗೂ ಒಳ್ಳೆ ಕಿಕ್ ಕೊಡುತ್ತೆ ಅನ್ನೋ ಕಾರಣಕ್ಕೆ ಆಂಧ್ರ ಮತ್ತು ತಮಿಳುನಾಡಿನ ಮದ್ಯಪ್ರಿಯರು ಗಡಿಯ ಬಾರ್​ಗಳಿಗೆ ಮುಗಿಬಿದ್ದಿದ್ದಾರೆ. ಈ ಪರಿಣಾಮ ಮದ್ಯದ ಬೆಲೆ ಎಂಆರ್​ಪಿ ಬೆಲೆಗಿಂತ ಹೆಚ್ಚಿನ ಹಣಕ್ಕೆ ಬಾರ್​ನವರು ಮಾರಾಟ ಮಾಡುತ್ತಿದ್ದಾರೆ.

ಕಣ್ಮುಚ್ಚಿ ಕುಳಿತಿರುವ ಅಬಕಾರಿ ಇಲಾಖೆ!
ಇಷ್ಟೆಲ್ಲಾ ಆದ್ರೂ ಇದ್ಯಾವುದನ್ನು ಗಮನಕ್ಕೆ ತೆಗೆದುಕೊಳ್ಳದ ಅಬಕಾರಿ ಇಲಾಖೆ ಅಧಿಕಾರಿಗಳು ಈ ಎಲ್ಲಾ ದಂಧೆಯಲ್ಲಿ ತಮ್ಮ ಪಾಲು ಉಳಿಸಿಕೊಂಡಿದ್ದಾರೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಇನ್ನು ಈ ಬಗ್ಗೆ ಅಬಕಾರಿ ಇಲಾಖೆ ಅಧಿಕಾರಿಗಳು ಹೇಳೋದು.. ಹೊರ ರಾಜ್ಯಕ್ಕೆ ಮದ್ಯ ಸಾಗಾಟ ಮಾಡುವಂತಿಲ್ಲ.

ಅಂತಹ ಪ್ರಕರಣ ಕಂಡು ಬಂದರೆ ಬಾರ್​ ನವರ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ ಜೊತೆಗೆ ಆಂಧ್ರದ ಅಬಕಾರಿ ಅಧಿಕಾರಿಗಳ ಜೊತೆಗೆ ಸಂಪರ್ಕ ಸಾಧಿಸಿ ನಿಯಮ ಉಲ್ಲಂಘನೆ ವಿಚಾರ ಚರ್ಚೆ ಮಾಡುವುದಾಗಿ ತಿಳಿಸಿದ್ದಾರೆ. ಜೊತೆಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವ ಬಗ್ಗೆ ಪರಿಶೀಲನೆ ಮಾಡುವುದಾಗಿ ಹೇಳಿ ಜಾರಿಕೊಳ್ತಾರೆ.