AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಮುದ್ರ ದಡಕ್ಕೆ ಬಂದು ಬಿದ್ದ ರಾಶಿ ರಾಶಿ ತಿಮಿಂಗಿಲಗಳು! ಆಮೇಲೇನಾಯ್ತು?

ಜಗತ್ತಿನ ಅತಿ ದೊಡ್ಡ ಜೀವಿ ತಿಮಿಂಗಿಲ. ಇದು ಸಮುದ್ರದಲ್ಲೇ ಇದ್ದು, ಜನರ ಕಣ್ಣಿಗೆ ಅಷ್ಟಾಗಿ ಬೀಳುವುದಿಲ್ಲ. ಆದರೆ ಆಸ್ಟ್ರೇಲಿಯಾದ ತಾಸ್ಮೇನಿಯಾ ದ್ವೀಪದ ಸಮುದ್ರ ದಂಡೆಯಲ್ಲಿ ಬಂದು ಬಿದ್ದಿದ್ದ ಸುಮಾರು 270 ತಿಮಿಂಗಿಲಗಳನ್ನು ಸಾಗರ ಜೈವಿಕ ತಜ್ಞರು ರಕ್ಷಿಸಲು ಹರಸಾಹಸ ಪಟ್ಟಿರುವ ರೋಚಕ ಪ್ರಕರಣ ನಡೆದಿದೆ. ಆ 270 ತಿಮಿಂಗಿಲಗಳ ಪೈಕಿ ಪೈಲಟ್ ತಿಮಿಂಗಿಲಗಳು ಎಂದು ಕರೆಯಲ್ಪಡುವ 25 ತಿಮಿಂಗಿಲಗಳು ಮೃತಪಟ್ಟಿವೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಒಟ್ಟು 90 ತಿಮಿಂಗಿಲಗಳು ಸತ್ತಿವೆ. ಪೈಲಟ್ ತಿಮಿಂಗಿಲಗಳು ಡಾಲ್ಫಿನ್ ಪ್ರಭೇದಕ್ಕೆ ಸೇರಿವೆ. […]

ಸಮುದ್ರ ದಡಕ್ಕೆ ಬಂದು ಬಿದ್ದ ರಾಶಿ ರಾಶಿ ತಿಮಿಂಗಿಲಗಳು! ಆಮೇಲೇನಾಯ್ತು?
ಆಯೇಷಾ ಬಾನು
| Edited By: |

Updated on: Sep 22, 2020 | 3:38 PM

Share

ಜಗತ್ತಿನ ಅತಿ ದೊಡ್ಡ ಜೀವಿ ತಿಮಿಂಗಿಲ. ಇದು ಸಮುದ್ರದಲ್ಲೇ ಇದ್ದು, ಜನರ ಕಣ್ಣಿಗೆ ಅಷ್ಟಾಗಿ ಬೀಳುವುದಿಲ್ಲ. ಆದರೆ ಆಸ್ಟ್ರೇಲಿಯಾದ ತಾಸ್ಮೇನಿಯಾ ದ್ವೀಪದ ಸಮುದ್ರ ದಂಡೆಯಲ್ಲಿ ಬಂದು ಬಿದ್ದಿದ್ದ ಸುಮಾರು 270 ತಿಮಿಂಗಿಲಗಳನ್ನು ಸಾಗರ ಜೈವಿಕ ತಜ್ಞರು ರಕ್ಷಿಸಲು ಹರಸಾಹಸ ಪಟ್ಟಿರುವ ರೋಚಕ ಪ್ರಕರಣ ನಡೆದಿದೆ.

ಆ 270 ತಿಮಿಂಗಿಲಗಳ ಪೈಕಿ ಪೈಲಟ್ ತಿಮಿಂಗಿಲಗಳು ಎಂದು ಕರೆಯಲ್ಪಡುವ 25 ತಿಮಿಂಗಿಲಗಳು ಮೃತಪಟ್ಟಿವೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಒಟ್ಟು 90 ತಿಮಿಂಗಿಲಗಳು ಸತ್ತಿವೆ. ಪೈಲಟ್ ತಿಮಿಂಗಿಲಗಳು ಡಾಲ್ಫಿನ್ ಪ್ರಭೇದಕ್ಕೆ ಸೇರಿವೆ. ಅದು 7 ಮೀಟರ್ (23 ಅಡಿ) ಉದ್ದ ಮತ್ತು 3 ಟನ್ ತೂಕ ಹೊಂದಿರುತ್ತವೆ. ರಾಜ್ಯ ರಾಜಧಾನಿ ಹೊಬಾರ್ಟ್‌ನ ವಾಯವ್ಯ ದಿಕ್ಕಿನಲ್ಲಿ ಸುಮಾರು 200 ಕಿ.ಮೀ (120 ಮೈಲಿ) ದೂರದಲ್ಲಿರುವ ಮ್ಯಾಕ್ವಾರಿ ಹೆಡ್ಸ್‌ನಲ್ಲಿ ತಿಮಿಂಗಿಲಗಳು ಮೂರು ಗುಂಪುಗಳಲ್ಲಿ ಆಳವಿಲ್ಲದ ನೀರಿನಲ್ಲಿ ಸಿಲುಕಿಕೊಂಡಿವೆ ಎಂದು ತಾಸ್ಮೇನಿಯಾದ ಪ್ರಾಥಮಿಕ ಕೈಗಾರಿಕೆ, ಉದ್ಯಾನಗಳು, ನೀರು ಮತ್ತು ಪರಿಸರ ಇಲಾಖೆ ತಿಳಿಸಿದೆ.

ಪರಿಸ್ಥಿತಿಯನ್ನು ನಿಭಾಯಿಸಲು ವಿಶೇಷ ರಕ್ಷಣಾ ತಂಡ ಸ್ಥಳಕ್ಕೆ ಧಾವಿಸಿ ತಿಮಿಂಗಿಲಗಳನ್ನು ರಕ್ಷಿಸುವ ಕಾರ್ಯದಲ್ಲಿ ಭಾಗಿಯಾಗಿತ್ತು. ಆದರೆ ಈ ಕಾರ್ಯಾಚರಣೆ ಭಾರಿ ರೋಚಕವಾಗಿದೆ. ಇನ್ನು ಸಾಮಾನ್ಯವಾಗಿ ಡಾಲ್ಫಿನ್ ಮತ್ತು ವೇಲ್​ಗಳು ತಾಸ್ಮೇನಿಯಾ ದಡದಲ್ಲಿ ಪ್ರತಿ 2-3ವಾರಗಳಿಗೊಮ್ಮೆ ಬಂದು ಬೀಳುತ್ತವೆ ಎಂದು ತಿಳಿದುಬಂದಿದೆ.

VIDEO: 6 ಎಸೆತಗಳಲ್ಲಿ 7 ರನ್​: ಡೆಲ್ಲಿ ಕ್ಯಾಪಿಟಲ್ಸ್​ಗೆ ಇದೆಂಥ ಸೋಲು..!
VIDEO: 6 ಎಸೆತಗಳಲ್ಲಿ 7 ರನ್​: ಡೆಲ್ಲಿ ಕ್ಯಾಪಿಟಲ್ಸ್​ಗೆ ಇದೆಂಥ ಸೋಲು..!
ನಂದಿ ಹಿಲ್ಸ್ ರಸ್ತೆ ಬಳಿ ಚಿರತೆ ಪ್ರತ್ಯಕ್ಷ: ಪ್ರವಾಸಿಗರೇ ಎಚ್ಚರ
ನಂದಿ ಹಿಲ್ಸ್ ರಸ್ತೆ ಬಳಿ ಚಿರತೆ ಪ್ರತ್ಯಕ್ಷ: ಪ್ರವಾಸಿಗರೇ ಎಚ್ಚರ
ಜಮ್ಮು-ಕಾಶ್ಮೀರದ ಗಡಿಯಲ್ಲಿ 5 ಪಾಕಿಸ್ತಾನಿ ಡ್ರೋನ್​ಗಳು ಪತ್ತೆ, ಹೈ ಅಲರ್ಟ್​
ಜಮ್ಮು-ಕಾಶ್ಮೀರದ ಗಡಿಯಲ್ಲಿ 5 ಪಾಕಿಸ್ತಾನಿ ಡ್ರೋನ್​ಗಳು ಪತ್ತೆ, ಹೈ ಅಲರ್ಟ್​
ಪತಿಯ ಅಂತ್ಯಕ್ರಿಯೆಗೆ ಕಂದನ ಜತೆ ಸ್ಟ್ರೆಚರ್​ನಲ್ಲಿ ಬಂದ ಸೈನಿಕನ ಪತ್ನಿ
ಪತಿಯ ಅಂತ್ಯಕ್ರಿಯೆಗೆ ಕಂದನ ಜತೆ ಸ್ಟ್ರೆಚರ್​ನಲ್ಲಿ ಬಂದ ಸೈನಿಕನ ಪತ್ನಿ
ಶುಕ್ರವಾರದಂದು ಹುಳಿ ಪದಾರ್ಥ ತಿನ್ನಲೇಬಾರದು ಯಾಕೆ ಗೊತ್ತಾ?
ಶುಕ್ರವಾರದಂದು ಹುಳಿ ಪದಾರ್ಥ ತಿನ್ನಲೇಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್