ಬಂಧಿತ Spa ಯುವತಿ ಆಸ್ಕಾ ಇನ್ನೂ ನಶೆಯಲ್ಲಿ ತೇಲಾಡ್ತಿದಾಳೆ.. ನಶೆ ಇಳಿದ ಮೇಲಷ್ಟೇ ವಿಚಾರಣೆ!
ಮಂಗಳೂರು: ಡ್ಯಾನ್ಸರ್ ಕಮ್ ಬಾಲಿವುಡ್ ನಟ ಕಿಶೋರ್ ಶೆಟ್ಟಿ ಬಂಧನ ಪ್ರಕರಣ ಸಂಬಂಧ ಕಿಶೋರ್ ಶೆಟ್ಟಿ ಜೊತೆ ಪಾರ್ಟಿ ಮಾಡಿದ್ದ ಯುವತಿಯನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಮಣಿಪುರ ಮೂಲದ ಯುವತಿ ಆಸ್ಕಾ ಡ್ರಗ್ಸ್ ಸೇವಿಸಿದಾಗಲೇ ರೆಡ್ ಹ್ಯಾಂಡಾಗಿ ಸಿಕ್ಕಿ ಬಿದ್ದಿದ್ದಾಳೆ. ಇದು ನಿಜಕ್ಕೂ ರೆಡ್ ಹ್ಯಾಂಡ್ ಕೇಸೇ! ಖಾಕಿಗೆ ಶಾಕ್ ಆಸ್ಕಾ ಡ್ರಗ್ಸ್ ನಶೆಯಲ್ಲಿ ತೇಲುತ್ತಿರುವುದರಿಂದ ಆಕೆಯನ್ನು ವಿಚಾರಣೆಗೆ ಒಳಪಡಿಸಲು ಸಾಧ್ಯವಾಗುತ್ತಿಲ್ಲ. ಆಸ್ಕಾ ಪೊಲೀಸ್ ಕಸ್ಟಡಿಯಲ್ಲೇ ನಶೆಯಲ್ಲಿ ತೇಲಾಡುತ್ತಿದ್ದಾಳೆ. ಕಳೆದೊಂದು ದಿನದಿಂದ ಡ್ರಗ್ಸ್ ಗುಂಗಿನಿಂದ ಆಚೆ ಬಂದಿಲ್ಲ. […]

ಮಂಗಳೂರು: ಡ್ಯಾನ್ಸರ್ ಕಮ್ ಬಾಲಿವುಡ್ ನಟ ಕಿಶೋರ್ ಶೆಟ್ಟಿ ಬಂಧನ ಪ್ರಕರಣ ಸಂಬಂಧ ಕಿಶೋರ್ ಶೆಟ್ಟಿ ಜೊತೆ ಪಾರ್ಟಿ ಮಾಡಿದ್ದ ಯುವತಿಯನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಮಣಿಪುರ ಮೂಲದ ಯುವತಿ ಆಸ್ಕಾ ಡ್ರಗ್ಸ್ ಸೇವಿಸಿದಾಗಲೇ ರೆಡ್ ಹ್ಯಾಂಡಾಗಿ ಸಿಕ್ಕಿ ಬಿದ್ದಿದ್ದಾಳೆ.
ಇದು ನಿಜಕ್ಕೂ ರೆಡ್ ಹ್ಯಾಂಡ್ ಕೇಸೇ! ಖಾಕಿಗೆ ಶಾಕ್ ಆಸ್ಕಾ ಡ್ರಗ್ಸ್ ನಶೆಯಲ್ಲಿ ತೇಲುತ್ತಿರುವುದರಿಂದ ಆಕೆಯನ್ನು ವಿಚಾರಣೆಗೆ ಒಳಪಡಿಸಲು ಸಾಧ್ಯವಾಗುತ್ತಿಲ್ಲ. ಆಸ್ಕಾ ಪೊಲೀಸ್ ಕಸ್ಟಡಿಯಲ್ಲೇ ನಶೆಯಲ್ಲಿ ತೇಲಾಡುತ್ತಿದ್ದಾಳೆ. ಕಳೆದೊಂದು ದಿನದಿಂದ ಡ್ರಗ್ಸ್ ಗುಂಗಿನಿಂದ ಆಚೆ ಬಂದಿಲ್ಲ. ನಶೆಯಲ್ಲಿ ತೇಲಾಡುತ್ತಿರುವ ಆಸ್ಕಾಳನ್ನ ನೋಡಿ ಖಾಕಿ ಶಾಕ್ ಆಗಿದೆ.
ವಿಚಾರಣೆ ವಿಳಂಬ ಈ ಬಗ್ಗೆ ಟಿವಿ9 ಜೊತೆ ಮಾತನಾಡಿದ ಮಂಗಳೂರು ಪೊಲೀಸ್ ಕಮಿಷನರ್ ವಿಕಾಸ್ ಕುಮಾರ್ ಆಕೆಯನ್ನು ಇನ್ನೂ ವಿಚಾರಣೆ ಮಾಡಲಾಗಿಲ್ಲ. ಆಕೆಯ ಡ್ರಗ್ ಟೆಸ್ಟ್ ರಿಪೋರ್ಟ್ ಪಾಸಿಟಿವ್ ಬಂದಿದೆ. ಆಕೆ ಡ್ರಗ್ ತೆಗೆದುಕೊಂಡಿದ್ರಿಂದ ಸರಿಯಾಗಿ ಮಾತನಾಡೋ ಸ್ಥಿತಿಯಲ್ಲಿಲ್ಲ. ಆದ್ದರಿಂದ ನಶೆ ಇಳಿದ ಮೇಲೆ ಆಕೆಯ ವಿಚಾರಣೆಯನ್ನು ಮಾಡಲಾಗುತ್ತೆ. ಬಂಧಿತ ಆರೋಪಿ ಕಿಶೋರ್ ಶೆಟ್ಟಿ ಪ್ರಕರಣದಲ್ಲಿ ಆಕೆಯನ್ನು ಅರೆಸ್ಟ್ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದ್ರು.
Published On - 2:14 pm, Tue, 22 September 20