ಸಹಪಾಠಿಗಳಿಗೆ ಮಾದಕ ವಸ್ತು ಮಾರಾಟ ಮಾಡ್ತಿದ್ದ MCA ವಿದ್ಯಾರ್ಥಿ ಸೇರಿ ಐವರ ಬಂಧನ

ಸಹಪಾಠಿಗಳಿಗೆ ಮಾದಕ ವಸ್ತು ಮಾರಾಟ ಮಾಡ್ತಿದ್ದ MCA ವಿದ್ಯಾರ್ಥಿ ಸೇರಿ ಐವರ ಬಂಧನ

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮಾದಕವಸ್ತು ಮಾರುತ್ತಿದ್ದ ವಿದೇಶಿ ಪ್ರಜೆಯ ಜತೆ ಸ್ಥಳೀಯ ಡ್ರಗ್ಸ್ ಪೆಡ್ಲರ್‌ಗಳನ್ನು ಹೆಣ್ಣೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಅಹಮ್ಮದ್ ಓಮರ್, ತಬಶೀರ್, ಲಸೀಮ್, ನಾಸೀರ್, ಸೈಯದ್ ಶಾಕೀರ್, ಮೊಹಮ್ಮದ್ ಸೀಹಂ ಬಂಧಿತರು.

ಬಂಧಿತ ಆರೋಪಿ ಅಹಮ್ಮದ್ ಓಮರ್ ಎಂಸಿಎ ವಿದ್ಯಾರ್ಥಿ. ಈತ ಒತ್ತಡ ನಿವಾರಣೆಗಾಗಿ ಡ್ರಗ್ ಸೇವನೆ ಮಾಡುತ್ತಿದ್ದ. ತನ್ನ ಕುಟುಂಬದಿಂದಲೂ ದೂರವಾಗಿದ್ದ. ಈ ನಡುವೆ ರೂಂನಲ್ಲಿ ಒಬ್ಬನೇ ವಾಸವಾಗಿದ್ದ.. ಡ್ರಗ್ ಸೇವನೆ ಗೀಳಿಗೆ ಬಿದ್ದಿದ್ದ. ಈ ಮಧ್ಯೆ ಹಣಕಾಸಿನ ತೊಂದರೆ ಉಂಟಾಗಿತ್ತು. ಹೀಗಾಗಿ ಇನ್ನುಳಿದ ಆರೋಪಿಗಳ ಜೊತೆ ಸೇರಿ ಸಹಪಾಠಿಗಳಿಗೆ ಮಾದಕ ವಸ್ತು ಮಾರಾಟ ಮಾಡುತ್ತಿದ್ದ.

ಡ್ರಗ್ಸ್ ತರಿಸಿ ಸಂಗ್ರಹಿಸ್ತಿದ್ದ. ಸದ್ಯ ಖಚಿತ ಮಾಹಿತಿ ಮೇರೆಗೆ ಓಮರ್​ನನ್ನ ಬಂಧಿಸಲಾಗಿತ್ತು. ಆತ ಕೊಟ್ಟ ಮಾಹಿತಿ ಮೇರೆಗೆ ಇನ್ನುಳಿದ ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರಿಂದ 50 ಗ್ರಾಂ ತೂಕದ 100 ಜುರಾಸಿಸ್ ಟಾಬ್ಲೆಟ್.  10 ಗ್ರಾಂ MDMA ಕ್ರಿಸ್ಟಲ್ ಸೇರಿ 5 ಲಕ್ಷ ರೂ. ಮೌಲ್ಯದ ಮಾದಕವಸ್ತು ಜಪ್ತಿ ಮಾಡಲಾಗಿದೆ.

Click on your DTH Provider to Add TV9 Kannada