
2-3 ವರ್ಷಗಳ ಹಿಂದೆ ಕೋವಿಡ್ (Covid-19) ಮಹಾಮಾರಿ ಬಂದು ಇಡೀ ಪ್ರಪಂಚವನ್ನೇ ತಲ್ಲಣಗೊಳಿಸಿತ್ತು. ಆ ಸೋಂಕು ಕಡಿಮೆಯಾಗುತ್ತಿದ್ದಂತೆ ಈಗ ಅದರ ಹೊಸ ರೂಪಾಂತರವಾದ ಆರ್ಕ್ಟುರಸ್ (Arcturus) ಅಥವಾ XBB.1.16 ಎಂಬ ಹೆಸರಿನ ಸೋಂಕುಗಳು ಕಾಣಿಸಿಕೊಳ್ಳುತ್ತಿದೆ. ಭಾರತದಲ್ಲಿಯೂ ಈ ಸೋಂಕಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ತೀವ್ರವಾದ ಏರಿಕೆ ಕಂಡು ಬಂದಿದೆ. ಕಳೆದ 24 ಗಂಟೆಗಳಲ್ಲಿ ಭಾರದಲ್ಲಿ ಕೋವಿಡ್ನ ಹೊಸ ರೂಪಾಂತರವಾದ ಆರ್ಕ್ಟುರಸ್ ಗೆ ಸಂಬಂಧಿಸಿದಂತೆ 11,692 ಪ್ರಕರಣಗಳು ದಾಖಲಾಗಿವೆ. ಕಳೆದ ಕೆಲವು ವಾರಗಳಿಂದಲೂ ದೇಶದಲ್ಲಿ ಈ ಸೋಂಕಿನ ದೈನಂದಿನ ಪ್ರಕರಣಗಳಲ್ಲಿ ತೀವ್ರ ಏರಿಕೆ ಕಂಡುಬಂದಿದೆ. ಆರೋಗ್ಯ ಸಚಿವಾಲಯದ ಅಂಕಿ ಅಂಶಗಳ ಪ್ರಕಾರ, ಪ್ರಸ್ತುತ ದೇಶದಲ್ಲಿ 66,170 ಸಕ್ರಿಯ ಕೋವಿಡ್ ಪ್ರಕರಣಗಳು ದಾಖಲಾಗಿವೆ. ವರದಿಗಳ ಪ್ರಕಾರ, ಈ ರೂಪಾಂತರವು ಇಲ್ಲಿಯವರೆಗೆ 29 ದೇಶಗಳಲ್ಲಿ ಪತ್ತೆಯಾಗಿದೆ. ಕೋವಿಡ್-19 ಸೋಂಕಿನ ಹೊಸ ರೂಪಾಂತರವಾದ ಇದನ್ನು ಆರ್ಕ್ಟುರಸ್ ಎಂದೂ ಕರೆಯುತ್ತಾರೆ.
ಆರ್ಕ್ಟುರಸ್ ಎಂಬ ಕೋವಿಡ್ನ ಹೊಸ ರೂಪಾಂತರವನ್ನು ಜನವರಿಯಲ್ಲಿ ಪತ್ತೆಹಚ್ಚಲಾಯಿತು. ಇದು ಓಮಿಕ್ರಾನ್ ಉಪ ರೂಪಾಂತರವಾಗಿದ್ದು, ಅದು ಸುಲಭವಾಗಿ ಹರಡಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಆದರೆ ಇದು ಯಾವುದೇ ತೀವ್ರ ರೋಗ ಲಕ್ಷಣವನ್ನು ಉಂಟು ಮಾಡುವುದಿಲ್ಲ. ಇದು ಪ್ರಾಣಕ್ಕೆ ಅಪಾಯಕಾರಿಯಾಗಿಲ್ಲ.
ಇದನ್ನೂ ಓದಿ:Covid 19: ಕೋವಿಡ್-19ನ ವೈರಸ್ ಹುಟ್ಟಿದ್ದು ಮಾನವನಿಂದ ಎಂದ ಚೀನಾದ ವಿಜ್ಞಾನಿ
ವಿಶ್ವ ಆರೋಗ್ಯ ಸಂಸ್ಥೆಯ ವರದಿಯ ಪ್ರಕಾರ ಈ ಹೊಸ ರೂಪಾಂತರ ಭಾರತದಲ್ಲಿ ತ್ವರಿತವಾಗಿ ಹರಡುತ್ತಿದೆ. ಆದರೆ ರೋಗಿಗಳು ಆಸ್ಪತ್ರೆಗೆ ದಾಖಲಾಗುವ ಪ್ರಮಾಣ ಕಡಿಮೆ ಇದೆ. ಈ ರೂಪಾಂತರವು ಅಷ್ಟೇನು ತೀವ್ರವಾಗಿಲ್ಲ ಇದು ಸೌಮ್ಯವಾದ ರೋಗಲಕ್ಷಣಗಳನ್ನು ಹೊಂದಿದೆ ಮತ್ತು ಇಲ್ಲಿಯವರೆಗೆ ಯಾವುದೇ ತೀವ್ರವಾದ ತೊಡಕುಗಳು ಉಂಟಾಗಿಲ್ಲ.
ಜ್ವರ, ತಲೆನೋವು, ಗಂಟಲು ಕೆರೆತ, ಮೂಗಿನಲ್ಲಿ ಸ್ರವಿಸುವಿಕೆ, ಆಯಾಸ, ಹೊಟ್ಟೆ ಸಂಬಂಧಿ ಸಮಸ್ಯೆಗಳು, ಕೆಮ್ಮು ಇತ್ಯಾದಿ ರೋಗ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಆರ್ಕ್ಟುರಸ್ಗೆ ತ್ತುತ್ತಾದ ರೋಗಿಗಳಲ್ಲಿ ಕಣ್ಣಿನಲ್ಲಿ ತುರಿಕೆ, ಕಣ್ಣು ಗುಲಾಬಿ ಬಣ್ಣಕ್ಕೆತಿರುಗುವುದು ಈ ರೀತಿಯ ಕಣ್ಣಿಗೆ ಸಂಬಂಧಿಸಿದ ರೋಗಲಕ್ಷಣಗಳೂ ಕಂಡು ಬಂದಿದೆ ಎಂದು ತಜ್ಞರು ಹೇಳಿದ್ದಾರೆ.
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ