ಜಮೀನಿನಲ್ಲೇ ಸ್ವಯಂ ಕ್ವಾರಂಟೈನ್​ ಆದ ಯೋಧ! ಗ್ರಾಮಸ್ಥರು ಶಹಬ್ಬಾಸ್​ ಅಂದ್ರು..

ಗದಗ: ದೇಶದ ಗಡಿ ಕಾಯೋ ಯೋಧನೊಬ್ಬ ಮರಳಿ ತನ್ನ ಊರಿಗೆ ಹಿಂದಿರುಗಿದ ನಂತರ ತನ್ನ ಜಮೀನಿನಲ್ಲೇ ಸ್ವಯಂ ಕ್ವಾರಂಟೈನ್​ ಆಗಿರೋ ಪ್ರಸಂಗ ಜಿಲ್ಲೆಯ ಅಂತೂರ ಬೆಂತೂರ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಹೊರವಲಯದಲ್ಲಿರುವ ತನ್ನ ಜಮೀನಿನಲ್ಲಿ ಯೋಧ ಪ್ರಕಾಶ್ ಹೈಗರ್ ಸ್ವಯಂ ಕ್ವಾರಂಟೈನ್ ಮಾಡಿಕೊಂಡಿದ್ದಾರೆ. ಭಾರತೀಯ ಸೇನೆಯ 49 ಬಟಾಲಿಯನ್​ನಲ್ಲಿ ಕಳೆದ 14 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಪ್ರಕಾಶ್​ರನ್ನು ಅರುಣಾಚಲ ಪ್ರದೇಶದ ಭಾರತ- ಚೀನಾ ಗಡಿಯಲ್ಲಿ ನಿಯೋಜಿಸಲಾಗಿತ್ತು. ಈ ವೇಳೆ ಜುಲೈ 2ರಂದು ಅರುಣಾಚಲ ಪ್ರದೇಶದಿಂದ ತಮ್ಮ ಗ್ರಾಮಕ್ಕೆ […]

ಜಮೀನಿನಲ್ಲೇ ಸ್ವಯಂ ಕ್ವಾರಂಟೈನ್​ ಆದ ಯೋಧ! ಗ್ರಾಮಸ್ಥರು ಶಹಬ್ಬಾಸ್​ ಅಂದ್ರು..
Follow us
KUSHAL V
| Updated By:

Updated on:Jul 09, 2020 | 4:07 PM

ಗದಗ: ದೇಶದ ಗಡಿ ಕಾಯೋ ಯೋಧನೊಬ್ಬ ಮರಳಿ ತನ್ನ ಊರಿಗೆ ಹಿಂದಿರುಗಿದ ನಂತರ ತನ್ನ ಜಮೀನಿನಲ್ಲೇ ಸ್ವಯಂ ಕ್ವಾರಂಟೈನ್​ ಆಗಿರೋ ಪ್ರಸಂಗ ಜಿಲ್ಲೆಯ ಅಂತೂರ ಬೆಂತೂರ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಹೊರವಲಯದಲ್ಲಿರುವ ತನ್ನ ಜಮೀನಿನಲ್ಲಿ ಯೋಧ ಪ್ರಕಾಶ್ ಹೈಗರ್ ಸ್ವಯಂ ಕ್ವಾರಂಟೈನ್ ಮಾಡಿಕೊಂಡಿದ್ದಾರೆ. ಭಾರತೀಯ ಸೇನೆಯ 49 ಬಟಾಲಿಯನ್​ನಲ್ಲಿ ಕಳೆದ 14 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಪ್ರಕಾಶ್​ರನ್ನು ಅರುಣಾಚಲ ಪ್ರದೇಶದ ಭಾರತ- ಚೀನಾ ಗಡಿಯಲ್ಲಿ ನಿಯೋಜಿಸಲಾಗಿತ್ತು. ಈ ವೇಳೆ ಜುಲೈ 2ರಂದು ಅರುಣಾಚಲ ಪ್ರದೇಶದಿಂದ ತಮ್ಮ ಗ್ರಾಮಕ್ಕೆ ರಜೆ ಮೇಲೆ ಮರಳಿದ್ದಾರೆ‌.

ಈ ಮಧ್ಯೆ ಗ್ರಾಮದೆಲ್ಲೆಡೆ ಸೋಂಕಿನ ಭೀತಿ ಹರಡಿರುವ ಕಾರಣ ಯಾರಿಗೂ ತೊಂದರೆ ಕೊಡಲು ಬಯಸದ ಯೋಧ ತನ್ನ ಜಮೀನಿನಲ್ಲಿ ಟ್ರ್ಯಾಕ್ಟರ್​ ಮೇಲೆ ಟೆಂಟ್ ನಿರ್ಮಿಸಿಕೊಂಡು ಕ್ವಾರಂಟೈನ್​ಗೆ ಒಳಗಾಗಿದ್ದಾರೆ.

ಸರ್ಕಾರದ ಮಾರ್ಗಸೂಚಿಯಂತೆ ಯೋಧ ಕ್ವಾರಂಟೈನ್​ ಸರಕಾರದ ಮಾರ್ಗಸೂಚಿಯಂತೆ ತಮ್ಮ ಕ್ವಾರಂಟೈನ್ ಅವಧಿ ಪೂರೈಸಲು ಮುಂದಾಗಿದ್ದಾರೆ. ಸದ್ಯಕ್ಕೆ ಆರೋಗ್ಯ ಇಲಾಖೆಯ ಸಿಬ್ಬಂದಿ ಯೋಧನ ಪರೀಕ್ಷೆ ನಡೆಸಿದ್ದಾರೆ. ಆದರೆ ಯೋಧನಿಗೆ ಸೋಂಕಿನ ಯಾವುದೇ ಲಕ್ಷಣಗಳು ಕಂಡು ಬಂದಿಲ್ಲ.

ಆದರೂ ನನ್ನಿಂದ ಗ್ರಾಮಸ್ಥರಿಗೆ ಆತಂಕ ಉಂಟಾಗೋದು ಬೇಡ ಅಂತಾ ಖುದ್ದು ತಾವೇ ದಿನ ನಿತ್ಯ ಮನೆಯಿಂದ ಊಟವನ್ನ ತರಿಸಿಕೊಂಡು ಹೊಲದಲ್ಲಿ ಕಾಲ‌ ಕಳೆಯುತ್ತಿದ್ದಾರೆ. ಯೋಧನ ನಿರ್ಧಾರಕ್ಕೆ ಗ್ರಾಮಸ್ಥರಿಂದ ಭಾರೀ  ಶಹಬ್ಬಾಸ್​ಗಿರಿ ಸಿಕ್ಕಿದೆ.

Published On - 1:32 pm, Thu, 9 July 20

ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ