ಎಲ್ಜಿಬಿಟಿಕ್ಯೂಐಅ+ ಸಮುದಾಯದವರು ವಿಶ್ವದಾದ್ಯಂತ ಪ್ರತಿ ವರ್ಷದ ಜೂನ್ ತಿಂಗಳನ್ನು ಪ್ರೈಡ್ ಮಂತ್ ಅಂತ ಆಚರಿಸಿ ಸಮಾನತೆ ಮತ್ತು ತಮ್ಮ ಸಮುದಾಯದ ಅಸ್ತಿತ್ವದ ಬಗ್ಗೆ ಜಾಗೃತಿ ಮೂಡಿಸುತ್ತಾರೆ. ಸಮುದಾಯದ ಸಮಾನ ಹಕ್ಕುಗಳಿಗಾಗಿ ಪ್ರತಿಪಾದಿಸುತ್ತಿರುವ ಮತ್ತು ಹೋರಾಡುತ್ತಿರುವವರನ್ನು ಜೂನ್ ತಿಂಗಳಲ್ಲಿ ಗೌರವಿಸಲಾಗುತ್ತದೆ. ಸದರಿ ಸಮುದಾಯದವರು ಜೂನ್ ಆಗಮನವನ್ನು ಸಂಭ್ರಮಿಸುತ್ತಿದ್ದರೆ ಒಬ್ಬ ವ್ಯಕ್ತಿಯು ತನ್ನ 73 ನೇ ವಯಸ್ಸಿನಲ್ಲಿ ತಾನು ಈ ಗುಂಪಿಗೆ ಸೇರಿದವನೆಂನ ಅಂಶ ಮನವರಿಕೆಯಾಗಿ ಅದನ್ನು ಹೇಳಿಕೊಳ್ಳುತ್ತಿರುವ ವಿಡಿಯೋ ನೆಟ್ಟಿಗರ ಮನಗೆಲ್ಲುತ್ತಿದೆ ಮತ್ತು ಅವರು ಆ ವ್ಯಕ್ತಿಯನ್ನು ಪ್ರಶಂಸಿಸುತ್ತಿದ್ದಾರೆ.
ಹಾಗೆ ನೋಡಿದರೆ, ಈ ವಿಡಿಯೋ ಕ್ಲಿಪ್ ಅನ್ನು ಮೊದಲ ಬಾರಿಗೆ ಟಿಕ್ಟಾಕ್ನಲ್ಲಿ ಶೇರ್ ಮಾಡಲಾಗಿತ್ತು. ಈಗ ಆದನ್ನು ನೆಕ್ಸ್ಟ್ಡೋರ್ ಪೇಜಲ್ಲಿ, ‘ಪ್ರೀತಿ ಮತ್ತು ಬೆಂಬಲಕ್ಕೆ ಯಾವತ್ತೂ ಸೋಲಿಲ್ಲ’ ಎಂದ ಶೀರ್ಷಿಕೆಯೊಂದಿಗೆ ರೀ-ಶೇರ್ ಮಾಡಲಾಗಿದೆ.
ಸದರಿ ಕಿರು ಆವಧಿಯ ಕ್ಲಿಪ್ನಲ್ಲಿ ಒಬ್ಬ ವ್ಯಕ್ತಿ ಎಲ್ಜಿಬಿಟಿ ಆಂದೋಲನದ ಸಂಕೇತವಾಗಿರುವ ಕಾಮನಬಿಲ್ಲಿನ ಧ್ವಜಗಳನ್ನು ಬೇಲಿಯಂತೆ ಬಳಸಲು ಬೆಳೆಸುವ ಮರಗಳಿಗೆ ನೇತುಹಾಕುವುದು ಕಾಣುತ್ತಿದೆ, ಕ್ಲಿಪ್ನ ಮೇಲ್ಭಾಗದಲ್ಲಿ, ‘ನನ್ನ ಡ್ಯಾಡಿಯ 73 ವರ್ಷ ವಯಸ್ಸಿನ ನೆರೆಮನೆಯಾತ ಈಗಷ್ಟೇ ತಾನು ಸಲಿಂಗಿ ಎಂಬ ಅಂಶವನ್ನು ಕಂಡುಕೊಂಡಿದ್ದಾನೆ,’ ಅಂತ ಟೆಕ್ಸ್ಟ್ ಇದೆ. ಈ ಕ್ಲಿಪ್ ಅನ್ನು ಆನ್ಲೈನ್ನಲ್ಲಿ ಶೇರ್ ಮಾಡಿರುವುದರಿಂದ ಅದು ಸಾಮಾಜಿಕ ಜಾಲತಾಣಗಳ ಹಲವಾರು ಪ್ಲಾಟ್ಫಾರ್ಮ್ಗಳಲ್ಲಿ ವೈರಲ್ ಆಗಿದ್ದು ನೆಟ್ಟಿಗರು ಹೃದಯ ತುಂಬಿ ಬರುವಂಥ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ,
‘ನೀವಂದುಕೊಳ್ಳುವ ಹಾಗೆ ಬದುಕಲು ಸಮಯದ ಮಿತಿ ಇಲ್ಲ. ನಿಮಗೆ ಸರಿಯೆನಿಸುವುದನ್ನು ನಿಮಗೆ ಸೂಕ್ತವೆನಿಸುವ ಸಮಯದಲ್ಲಿ ಮಾಡಬಹುದು,’ ಅಂತ ಒಬ್ಬರು ಪ್ರತಿಕ್ರಿಯಿಸಿದ್ದರೆ ಇನ್ನೊಬ್ಬರು, ‘ಎಂಥ ಅದ್ಭುತವಾದ ವಿಷಯ,’ ನಿಜಕ್ಕೂ ಒಬ್ಬ ನಿಜವಾದ ಸ್ನೇಹಿತ, ಎಂದು ಹೇಳಿದ್ದಾರೆ.
ಲಾರಿಸ್ ಹ್ಯೂಸ್ ಎನ್ನವವರು, ‘ನೀವಿರುವ ಹಾಗೆಯೇ ನಿಮ್ಮನ್ನು ನೀವು ಅಂಗೀಕರಿಸಿಕೊಳ್ಳವುದು ಒಂದು ದಿವ್ಯ ಅನುಭೂತಿ. ನಿಮ್ಮನ್ನು ನೀವು ಪ್ರೀತಿಸಿಕೊಳ್ಳಲಾರಂಭಿಸಿದ ನಂತರ ಜನ ತಾವಾಗಿಯೇ ನಿಮ್ಮನ್ನು ಅನುಸರಿಸುತ್ತಾರೆ. ನೀವಿರುವ ಹಾಗೆಯೇ ನಿಮ್ಮನ್ನು ಸ್ವೀಕರಿಲು ರಕ್ತ ಸಂಬಂಧಿಳೇ ಆಗಿರಬೇಕು ಅಂತೇನಿಲ್ಲ. ನಿಮ್ಮನ್ನು ಪ್ರೀತಿಸಿವವರು ಹೃದಯ ಸಂಬಂಧಿಗಳಾಗಿರುತ್ತಾರೆ. ಅದೇ ಮುಖ್ಯವಾದದ್ದು,’ ಎಂದು ಹೇಳಿದ್ದಾರೆ. ಟ್ರಕ್ಕರ್ ಜಾರ್ಜಿಯಾ ಅನ್ನುವವರು, ‘ಒಳ್ಳೆಯದನ್ನೇ ಮಾಡಿರುವಿರಿ, ಇದಕ್ಕೆ ಸಮಯದ ಪರಿಮಿತಿ ಇಲ್ಲ. ನಿಮ್ಮನ್ನು ಪ್ರೀತಿಸಿಕೊಳ್ಳುತ್ತಾ ಸಂತೋಷವೆನಿಸುವವರೆಗೆ ನಿಮಗೆ ಯಾವುದು ಸರಿ ಅನಿಸುತ್ತೋ ಅದನ್ನು ಮಾಡಿ, ನಿಮ್ಮ ಬಗ್ಗೆ ನನಗೆ ಬಹಳ ಸಂತೋಷವಾಗುತ್ತಿದೆ,’ ಎಂದಿದ್ದಾರೆ.
ವಿಶ್ವದ ನಾನಾ ಮೂಲೆಗಳಲ್ಲಿ ಈ ಸಮುದಾಯದವರನ್ನು ಜನ ಅಂಗೀಕರಿಸುತ್ತಿಲ್ಲ, ಹಾಗೆ ನೋಡಿದರೆ, ಕೋರ್ಟ್ಗಳು ಪ್ರತಿಯೊಬ್ಬ ವ್ಯಕ್ತಿಗೆ ತನಗೆ ಸರಿಯೆನಿಸುಬ ರೀತಿಯಲ್ಲಿ ಬದುಕುವ ಹಕ್ಕಿದೆ ಎಂದು ಹೇಳಿದರೂ ಸಮುದಾಯದ ಜನರ ಬಗ್ಗೆ ಅಸಡ್ಡೆ, ಔದಾಸೀನ್ಯ, ಹೇವರಿಕೆ ಇದೆ. ಎಷ್ಟೋ ಜನ ಸ್ಭಬಾವತ: ಸಲಿಂಗಿಗಳಾಗಿದ್ದರೂ ಸಮಾಜ ತಮ್ಮನ್ನು ಕಳಂಕಿತರಂತೆ ಮತ್ತು ಅಸ್ಪೃಶ್ಯರ ರೀತಿಯಲ್ಲಿ ನೋಡುತ್ತದೆ ಎಂಬ ಭಯದಿಂದ ಕೊನೆವರೆಗೂ ತಮ್ಮ ಭಾನೆನಗಳನ್ನು ಅದುಮಿಟ್ಟುಕೊಂಡು ಜೀವಿಸುತ್ತಾರೆ.
ಅಂಥವರಿಗೆಲ್ಲ ಈ 73 ವರ್ಷದ ವ್ಯಕ್ತಿ ಪ್ರೇರಣೆಯಾದರೆ ಉತ್ಪ್ರೇಕ್ಷೆಯೆನಿಸದು
ಇದನ್ನೂ ಓದಿ: ಅಂಜಲಿ ರಾಮಣ್ಣ ಬರಹ | ಲೈಂಗಿಕ ಅಲ್ಪಸಂಖ್ಯಾತರಿಗೆ ಅವರ ಹಕ್ಕು ಸಿಗುವಂತಾಗಲು ಪೊಲೀಸರು ಬದಲಾಗಬೇಕು