ವೋಟ್ ಹಾಕುವವರಿಗೆ ಫ್ರೀ ಆಟೋ ಸರ್ವೀಸ್.. ಎಲ್ಲಿ?

ಬೆಂಗಳೂರು: ಉಪ ಚುನಾವಣೆ ಹಿನ್ನೆಲೆಯಲ್ಲಿ ಯಶವಂತಪುರದ ಆಟೋ ಚಾಲಕ ಆರೀಫ್ ವಿಶೇಷ ಸೇವೆ ಸಲ್ಲಿಸ್ತಿದ್ದಾರೆ. ಮತದಾರರಿಗೆ ಉಚಿತ ಆಟೋ ಸರ್ವಿಸ್ ನೀಡ್ತಿದ್ದಾರೆ. ವೋಟ್ ಮಾಡಿ ಆಟೋದಲ್ಲಿ ಮನೆಗೆ ಹೋಗಬೇಕಿದ್ದರೆ, ಅಥವಾ ಮನೆಯಿಂದ ಮತಗಟ್ಟೆಗೆ ಬರಬೇಕಿದ್ದರೆ ಉಚಿತವಾಗಿ ಸೇವೆ ನೀಡುತ್ತಿದ್ದಾರೆ. ಕಳೆದ ಎರಡು ಚುನಾವಣೆಗಳಿಂದಲೂ ಆರೀಫ್​ರಿಂದ ಈ ಸೇವೆ ವಾರ್ಡ್-37 ಯಶವಂತಪುರದಲ್ಲಿ ಸೇವೆ ನೀಡುತ್ತಿರುವ ಆರೀಫ್ ಆಟೋ ಹಿಂಭಾಗದಲ್ಲಿ ಕಡ್ಡಾಯವಾಗಿ ಮತದಾನ ಮಾಡುವವರಿಗೆ ಮತಗಟ್ಟೆವರೆಗೂ ಉಚಿತ ಸೇವೆ ಅಂತ ಬೋರ್ಡ್ ಹಾಕಿಕೊಂಡು ಆಟೋ ಓಡಿಸ್ತಿದ್ದಾರೆ. ಬೆಳಿಗ್ಗೆ ಮತದಾನ ಶುರುವಾದಾಗಿನಿಂದಲೂ […]

ವೋಟ್ ಹಾಕುವವರಿಗೆ ಫ್ರೀ ಆಟೋ ಸರ್ವೀಸ್.. ಎಲ್ಲಿ?
ಆಯೇಷಾ ಬಾನು

Updated on: Nov 03, 2020 | 9:49 AM

ಬೆಂಗಳೂರು: ಉಪ ಚುನಾವಣೆ ಹಿನ್ನೆಲೆಯಲ್ಲಿ ಯಶವಂತಪುರದ ಆಟೋ ಚಾಲಕ ಆರೀಫ್ ವಿಶೇಷ ಸೇವೆ ಸಲ್ಲಿಸ್ತಿದ್ದಾರೆ. ಮತದಾರರಿಗೆ ಉಚಿತ ಆಟೋ ಸರ್ವಿಸ್ ನೀಡ್ತಿದ್ದಾರೆ. ವೋಟ್ ಮಾಡಿ ಆಟೋದಲ್ಲಿ ಮನೆಗೆ ಹೋಗಬೇಕಿದ್ದರೆ, ಅಥವಾ ಮನೆಯಿಂದ ಮತಗಟ್ಟೆಗೆ ಬರಬೇಕಿದ್ದರೆ ಉಚಿತವಾಗಿ ಸೇವೆ ನೀಡುತ್ತಿದ್ದಾರೆ.

ಕಳೆದ ಎರಡು ಚುನಾವಣೆಗಳಿಂದಲೂ ಆರೀಫ್​ರಿಂದ ಈ ಸೇವೆ
ವಾರ್ಡ್-37 ಯಶವಂತಪುರದಲ್ಲಿ ಸೇವೆ ನೀಡುತ್ತಿರುವ ಆರೀಫ್ ಆಟೋ ಹಿಂಭಾಗದಲ್ಲಿ ಕಡ್ಡಾಯವಾಗಿ ಮತದಾನ ಮಾಡುವವರಿಗೆ ಮತಗಟ್ಟೆವರೆಗೂ ಉಚಿತ ಸೇವೆ ಅಂತ ಬೋರ್ಡ್ ಹಾಕಿಕೊಂಡು ಆಟೋ ಓಡಿಸ್ತಿದ್ದಾರೆ.

ಬೆಳಿಗ್ಗೆ ಮತದಾನ ಶುರುವಾದಾಗಿನಿಂದಲೂ ಈ ಸೇವೆಯಲ್ಲಿ ನಿರತರಾಗಿದ್ದು, ಈಗಾಗಲೇ ಅನೇಕರಿಗೆ ಉಚಿತ ಡ್ರಾಪ್ ಮಾಡಿದ್ದಾರೆ. ಅಲ್ಲದೆ ಆರೀಫ್ ಕಳೆದ ಎರಡು ಚುನಾವಣೆಗಳಿಂದಲೂ ಇದೇ ರೀತಿಯ ಸೇವೆ ನೀಡಿಕೊಂಡು ಬಂದಿದ್ದಾರೆ. ಯಾರೇ ಕಾಲ್ ಮಾಡಿದ್ರು ಮನೆ ಬಾಗಿಲಿಗೆ ತೆರಳಿ ಪಿಕ್ ಮಾಡ್ತಾರಂತೆ.

Published On - 9:48 am, Tue, 3 November 20

Ayesha Banu

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

Follow Us