ಸಜ್ಜನ್ ರಾವ್ ಸರ್ಕಲ್​ನಲ್ಲಿ ಅವರೆ ಮೇಳ, ಆದ್ರೆ ಕಸ, ಟ್ರಾಫಿಕ್​ನದ್ದೇ ಪ್ರಾಬ್ಲಂ

ಬೆಂಗಳೂರು: ಸ್ವೀಟ್ಸ್ ಅಂದ್ರೆ ಸ್ವೀಟ್ಸ್​ಗೂ ಸೈ.. ಸ್ನ್ಯಾಕ್ಸ್ ಅಂದ್ರೆ ಸ್ನಾಕ್ಸ್​ಗೂ ಜೈ.. ತಿಂಡಿಗೂ ಓಕೆ.. ಅಡಿಗೆಗೂ ಓಕೆ.. ಟೋಟಲಿ ಅವರೇಕಾಯ್ ಇದ್ರೆ ವೆರೈಟಿ ಖಾದ್ಯಗಳು ರೆಡಿಯಾಗುತ್ತೆ. ಹಿಂಗಾಗೇ ಜನವರಿ ಬಂದ್ರೆ ಬೆಂಗಳೂರಿನ ವಿವಿಪುರಂನಲ್ಲಿ ಸುಪ್ರಸಿದ್ಧ ಅವರೆಕಾಯಿ ಮೇಳ ನಡೆಯುತ್ತೆ. ಆದ್ರೀಗ ಇದೇ ಮೇಳಕ್ಕಾಗಿ ಬಿಜೆಪಿಯಲ್ಲಿ ವಾರ್ ನಡೀತಿದೆ. ‘ಅವರೆ’ ಮೇಳದಿಂದ ಕಸ, ಟ್ರಾಫಿಕ್​ನದ್ದೇ ಪ್ರಾಬ್ಲಂ: ವಿವಿಪುರಂನ ಸಜ್ಜನ್ ರಾವ್ ಸರ್ಕಲ್​ನಲ್ಲಿ ಪ್ರತೀ ವರ್ಷದ ಜನವರಿ ತಿಂಗಳಲ್ಲಿ ಒಂದು ವಾರದವರೆಗೂ ಅವರೆ ಮೇಳ ನಡೆಯುತ್ತೆ. ಎಲ್ಲಾ ಅಂದುಕೊಂಡಂತೆ ಆಗಿದ್ರೆ […]

ಸಜ್ಜನ್ ರಾವ್ ಸರ್ಕಲ್​ನಲ್ಲಿ ಅವರೆ ಮೇಳ, ಆದ್ರೆ ಕಸ, ಟ್ರಾಫಿಕ್​ನದ್ದೇ ಪ್ರಾಬ್ಲಂ
ಸಾಧು ಶ್ರೀನಾಥ್​

Updated on: Jan 17, 2020 | 3:06 PM

ಬೆಂಗಳೂರು: ಸ್ವೀಟ್ಸ್ ಅಂದ್ರೆ ಸ್ವೀಟ್ಸ್​ಗೂ ಸೈ.. ಸ್ನ್ಯಾಕ್ಸ್ ಅಂದ್ರೆ ಸ್ನಾಕ್ಸ್​ಗೂ ಜೈ.. ತಿಂಡಿಗೂ ಓಕೆ.. ಅಡಿಗೆಗೂ ಓಕೆ.. ಟೋಟಲಿ ಅವರೇಕಾಯ್ ಇದ್ರೆ ವೆರೈಟಿ ಖಾದ್ಯಗಳು ರೆಡಿಯಾಗುತ್ತೆ. ಹಿಂಗಾಗೇ ಜನವರಿ ಬಂದ್ರೆ ಬೆಂಗಳೂರಿನ ವಿವಿಪುರಂನಲ್ಲಿ ಸುಪ್ರಸಿದ್ಧ ಅವರೆಕಾಯಿ ಮೇಳ ನಡೆಯುತ್ತೆ. ಆದ್ರೀಗ ಇದೇ ಮೇಳಕ್ಕಾಗಿ ಬಿಜೆಪಿಯಲ್ಲಿ ವಾರ್ ನಡೀತಿದೆ.

‘ಅವರೆ’ ಮೇಳದಿಂದ ಕಸ, ಟ್ರಾಫಿಕ್​ನದ್ದೇ ಪ್ರಾಬ್ಲಂ:

ವಿವಿಪುರಂನ ಸಜ್ಜನ್ ರಾವ್ ಸರ್ಕಲ್​ನಲ್ಲಿ ಪ್ರತೀ ವರ್ಷದ ಜನವರಿ ತಿಂಗಳಲ್ಲಿ ಒಂದು ವಾರದವರೆಗೂ ಅವರೆ ಮೇಳ ನಡೆಯುತ್ತೆ. ಎಲ್ಲಾ ಅಂದುಕೊಂಡಂತೆ ಆಗಿದ್ರೆ ನಾಳೆಯಿಂದ ಈ ವರ್ಷದ ಮೇಳ ಶುರುವಾಗ್ಬೇಕಿತ್ತು. ಆದ್ರೆ ಈ ಬಾರಿ ಮೇಳಕ್ಕೆ ಪರ್ಮಿಷನ್ ಕೊಡ್ಬಾರ್ದು ಅಂತಾ ಬಿಜೆಪಿ ಶಾಸಕ ಉದಯ್ ಗರುಡಾಚಾರ್ ಹಾಗೂ ಬಿಜೆಪಿ ಕಾರ್ಪೊರೇಟರ್ ವಾಣಿ ರಾವ್ ಸೇರಿದಂತೆ ಸ್ಥಳೀಯರು ವಿರೋಧ ವ್ಯಕ್ತಪಡಿಸ್ತಿದ್ದಾರೆ. ಮೇಳದಿಂದ ಸ್ಥಳೀಯ ನಿವಾಸಿಗಳಿಗೆ ಕಿರಿಕಿರಿ ಉಂಟಾಗ್ತಿದ್ದು, ಹೆಚ್ಚು ಕಸ ಉತ್ಪತ್ತಿಯಾಗ್ತಿದೆ. ಹಾಗೇ ಟ್ರಾಫಿಕ್ ಜಾಮ್ ಉಂಟಾಗ್ತಿದೆ. ಹೀಗಾಗಿ ಮೇಳವನ್ನ ಯಾವ್ದಾದ್ರೂ ಚೌಟ್ರಿಯಲ್ಲಿ ಮಾಡಿಕೊಳ್ಳಲಿ ಅಂತಿದ್ದಾರೆ ಶಾಸಕರು.

ಇತ್ತ ಬಿಜೆಪಿ ಕಾರ್ಪೊರೇಟರ್ ವಾಣಿ ರಾವ್ ಕೂಡ ಮೇಳದಲ್ಲಿ ಒಳ್ಳೆ ಗುಣಮಟ್ಟದ ಆಹಾರ ನೀಡ್ತಿಲ್ಲ. ಹೀಗಾಗೇ ಬೇರೆ ಕಡೆ ಮೇಳ ಮಾಡ್ಲಿ ಅಂತಿದ್ದಾರೆ. ಆದ್ರೆ ಮೇಯರ್ ಗೌತಮ್ ಕುಮಾರ್ ಹಾಗೂ ಡಿಸಿಎಂ ಅಶ್ವತ್ಥ್ ನಾರಾಯಣ್ ಅವರೆ ಮೇಳದ ಪರ ಬ್ಯಾಟಿಂಗ್ ಮಾಡ್ತಿದ್ದಾರೆ. ಮೇಳಕ್ಕೆ ಅನುಮತಿ ನೀಡುವಂತೆ ಪಾಲಿಕೆ ಆಯುಕ್ತರ ಮೇಲೆ ಒತ್ತಡ ಹೇರ್ತಿದ್ದಾರೆ. ಈ ಬಗ್ಗೆ ಮಾತಾಡಿರೋ ಮೇಯರ್ ಮೇಳಕ್ಕೆ ಒಂದು ದಿನದ ಅನುಮತಿ ಕೊಡಿಸುವ ಬಗ್ಗೆ ಚರ್ಚೆ ಮಾಡೋದಾಗಿ ಹೇಳಿದ್ರು.

ಸದ್ಯ ಮೇಳ ನಡೆಸ್ಬೇಕೋ ಬೇಡ್ವೋ ಅನ್ನೋ ಬಗ್ಗೆ ಬಿಜೆಪಿ ನಾಯಕರ ನಡುವೆಯೇ ಗೊಂದಲವಿದೆ. ಹೀಗಾಗಿ ಈ ಗೊಂದಲ ಅವರೆಮೇಳದ ಮೇಲೆ ಎಫೆಕ್ಟ್ ಆಗುತ್ತಾ ಅನ್ನೋದೇ ಪ್ರಶ್ನೆಯಾಗಿದೆ.

Published On - 12:53 pm, Fri, 17 January 20

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Loading...
Unable to load recommendations.
Follow Us