ಆನೇಕಲ್: ವಾಹನಕ್ಕೆ ಸಿಕ್ಕಿ ಮೃತಪಟ್ಟ ಚಿರತೆ ಮರಿ ಪತ್ತೆ
ಆನೇಕಲ್: ರಸ್ತೆಬದಿಯಲ್ಲಿ ಮೃತ ಚಿರತೆ ಮರಿ ದೇಹ ಪತ್ತೆಯಾಗಿದೆ. ಬೆಂಗಳೂರು ನಗರ ಜಿಲ್ಲೆ ಆನೇಕಲ್ ನ ಜಿಗಣಿ ಸಮೀಪದ ಕಲ್ಲುಬಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಹಂತಲಿಂಗಾಪುರ ಸಮೀಪದ ರಸ್ತೆ ಪಕ್ಕದಲ್ಲಿ ಸತ್ತ ಸ್ಥಿತಿಯಲ್ಲಿ ಚಿರತೆ ಮರಿ ದೇಹ ಸಿಕ್ಕಿದೆ. ವಾಹನಕ್ಕೆ ಸಿಲುಕಿ ಮರಿ ಮೃತಪಟ್ತಾ? ಇತ್ತೀಚೆಗೆ ಜಿಗಣಿ ಬಳಿಯ ಕೃಷ್ಣದೊಡ್ಡಿ ಬಳಿ ತಾಯಿ ಚಿರತೆ ಜೊತೆ ಎರಡು ಚಿರತೆ ಮರಿಗಳು ಕಾಣಿಸಿಕೊಂಡಿದ್ದವು. ಸ್ಥಳೀಯರು ಚಿರತೆ ಮರಿಗಳು ತಾಯಿ ಜೊತೆ ಆಟವಾಡುತ್ತಿರುವುದನ್ನು ನೋಡಿ ಅರಣ್ಯ ಅಧಿಕಾರಿಗಳಿಗೆ ತಿಳಿಸಿದ್ದರು. ಇದೀಗ […]

ಆನೇಕಲ್: ರಸ್ತೆಬದಿಯಲ್ಲಿ ಮೃತ ಚಿರತೆ ಮರಿ ದೇಹ ಪತ್ತೆಯಾಗಿದೆ. ಬೆಂಗಳೂರು ನಗರ ಜಿಲ್ಲೆ ಆನೇಕಲ್ ನ ಜಿಗಣಿ ಸಮೀಪದ ಕಲ್ಲುಬಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಹಂತಲಿಂಗಾಪುರ ಸಮೀಪದ ರಸ್ತೆ ಪಕ್ಕದಲ್ಲಿ ಸತ್ತ ಸ್ಥಿತಿಯಲ್ಲಿ ಚಿರತೆ ಮರಿ ದೇಹ ಸಿಕ್ಕಿದೆ.
ವಾಹನಕ್ಕೆ ಸಿಲುಕಿ ಮರಿ ಮೃತಪಟ್ತಾ? ಇತ್ತೀಚೆಗೆ ಜಿಗಣಿ ಬಳಿಯ ಕೃಷ್ಣದೊಡ್ಡಿ ಬಳಿ ತಾಯಿ ಚಿರತೆ ಜೊತೆ ಎರಡು ಚಿರತೆ ಮರಿಗಳು ಕಾಣಿಸಿಕೊಂಡಿದ್ದವು. ಸ್ಥಳೀಯರು ಚಿರತೆ ಮರಿಗಳು ತಾಯಿ ಜೊತೆ ಆಟವಾಡುತ್ತಿರುವುದನ್ನು ನೋಡಿ ಅರಣ್ಯ ಅಧಿಕಾರಿಗಳಿಗೆ ತಿಳಿಸಿದ್ದರು.
ಇದೀಗ ಅದೇ ವ್ಯಾಪ್ತಿಯ ಮಹಂತಲಿಂಗಾಪುರ ಬಳಿ ಮೃತಪಟ್ಟಿರುವ ಚಿರತೆ ಮರಿ ಸಿಕ್ಕಿದೆ. ವಾಹನಕ್ಕೆ ಸಿಕ್ಕಿ ಮರಿ ಮೃತ ಪಟ್ಟಿರಬಹುದಾ ಎಂಬ ಅನುಮಾನ ಉಂಟಾಗಿದೆ. ಐದು ತಿಂಗಳ ಚಿರತೆ ಮರಿ ಎಂದು ಗುರುತಿಸಲಾಗಿದೆ.