AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾಗೆ ಅಂಜದೇ, ಸಾಂಸ್ಥಿಕ ಕ್ವಾರಂಟೈನ್​ನಲ್ಲಿದ್ದ ಕಲಾವಿದ ಏನು ಮಾಡಿದ ನೋಡಿ?

ಬಾಗಲಕೋಟೆ: ಯಾವ ಕೊರೊನಾ ಕ್ರಿಮಿಯೂ ನನ್ನ ಕೈಗಳನ್ನು ಕಟ್ಟಿ ಹಾಕಲು ಸಾಧ್ಯವಿಲ್ಲ. ನಾನಾಯಿತು ನನ್ನ ಕಲೆಯಾಯಿತು. ಯಃಕಶ್ಚಿತ್ ಕೊರೊನಾಗೆ ಡೋಂಟ್ ಕೇರ್​ ಎಂದು ಶಿಲ್ಪಕಲಾವಿದರುಬ್ಬರು ಕ್ವಾರಂಟೈನ್ ಕಾಲದಲ್ಲಿ ಅತ್ಯಂತ ಸೃಜನಾತ್ಮಕವಾಗಿ ಸಮಯ ಕಳೆದಿದ್ದಾರೆ. ಆರಾಮ್​ ಹರಾಮ್​ ಹೈ ಅನ್ನುವ ಮಾತನ್ನು ಪಾಲಿಸುತ್ತಾ.. ಆರಾಮವಾಗಿ ಅದೇ ಕೊರೊನಾ ಚಿಂತೆಯಲ್ಲೇ ಸಮಯ ಕಳೆಯುತ್ತಾ ಮತ್ತಷ್ಟು ಧೃತಿಗೆಡದೆ ಆ ವಿಘ್ನ ನಿವಾರಕನನ್ನೇ ಚಿತ್ರಿಸಿದ ಕಲಾವಿದನ ಬಗ್ಗೆ ಅಧಿಕಾರಿಗಳೂ, ಸ್ಥಳೀಯರು ಹೆಮ್ಮೆಯ ಮಾತನ್ನಾಡಿದ್ದಾರೆ. ವೃಥಾ ಟೈಂ ಯಾಕೆ ವೇಸ್ಟ್ ಮಾಡೋದು ಅಂತಾ.. ಆದಿದ್ದೇನೆಂದ್ರೆ […]

ಕೊರೊನಾಗೆ ಅಂಜದೇ, ಸಾಂಸ್ಥಿಕ ಕ್ವಾರಂಟೈನ್​ನಲ್ಲಿದ್ದ ಕಲಾವಿದ ಏನು ಮಾಡಿದ ನೋಡಿ?
ಸಾಧು ಶ್ರೀನಾಥ್​
| Edited By: |

Updated on:Jun 10, 2020 | 2:39 PM

Share

ಬಾಗಲಕೋಟೆ: ಯಾವ ಕೊರೊನಾ ಕ್ರಿಮಿಯೂ ನನ್ನ ಕೈಗಳನ್ನು ಕಟ್ಟಿ ಹಾಕಲು ಸಾಧ್ಯವಿಲ್ಲ. ನಾನಾಯಿತು ನನ್ನ ಕಲೆಯಾಯಿತು. ಯಃಕಶ್ಚಿತ್ ಕೊರೊನಾಗೆ ಡೋಂಟ್ ಕೇರ್​ ಎಂದು ಶಿಲ್ಪಕಲಾವಿದರುಬ್ಬರು ಕ್ವಾರಂಟೈನ್ ಕಾಲದಲ್ಲಿ ಅತ್ಯಂತ ಸೃಜನಾತ್ಮಕವಾಗಿ ಸಮಯ ಕಳೆದಿದ್ದಾರೆ. ಆರಾಮ್​ ಹರಾಮ್​ ಹೈ ಅನ್ನುವ ಮಾತನ್ನು ಪಾಲಿಸುತ್ತಾ.. ಆರಾಮವಾಗಿ ಅದೇ ಕೊರೊನಾ ಚಿಂತೆಯಲ್ಲೇ ಸಮಯ ಕಳೆಯುತ್ತಾ ಮತ್ತಷ್ಟು ಧೃತಿಗೆಡದೆ ಆ ವಿಘ್ನ ನಿವಾರಕನನ್ನೇ ಚಿತ್ರಿಸಿದ ಕಲಾವಿದನ ಬಗ್ಗೆ ಅಧಿಕಾರಿಗಳೂ, ಸ್ಥಳೀಯರು ಹೆಮ್ಮೆಯ ಮಾತನ್ನಾಡಿದ್ದಾರೆ.

ವೃಥಾ ಟೈಂ ಯಾಕೆ ವೇಸ್ಟ್ ಮಾಡೋದು ಅಂತಾ.. ಆದಿದ್ದೇನೆಂದ್ರೆ ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ಲೋಕಾಪುರ ಗ್ರಾಮದ ಮಲ್ಲಪ್ಪ ಬಡಿಗೇರ ಮಹಾರಾಷ್ಟ್ರದಿಂದ ಆಗಮಿಸಿದ್ದರು. ಹೇಳಿಕೇಳಿ ಮಹಾರಾಷ್ಟ್ರ ಕೊರೊನಾ ಹಾಟ್​ಸ್ಪಾಟ್​. ಹಾಗಾಗಿ ಅಧಿಕಾರಿಗಳು ತಲ್ಷಣ ಅವರನ್ನು ಗ್ರಾಮದಲ್ಲಿ ಇನ್ಸ್ಟಿಟ್ಯೂಶನಲ್ ಕ್ವಾರಂಟೈನ್​ಗೆ ಸೇರಿಸಿದರು. ಗ್ರಾಮ ಪಂಚಾಯಿತಿ ಸಿಬ್ಬಂದಿ ಅಗತ್ಯ ವಸ್ತುಗಳ ಪೂರೈಕೆ ಮಾಡುತ್ತಾ, ಕೇಂದ್ರದಲ್ಲಿದ್ದ ಕೊರೊನಾ ಬಾಧಿತರ ಬಗ್ಗೆ ಮುತುವರ್ಜಿ ವಹಿಸಿ ನೋಡಿಕೊಂಡರು. ಇದರಿಂದ ಅಲ್ಲಿದ್ದವರೂ ಅಷ್ಟೇ ಸ್ವಲ್ಪ ನಿರಾಳರಾಗಿದ್ದರು. ಆದ್ರೆ ಒಬ್ಬ ಮಲ್ಲಪ್ಪ ಬಡಿಗೇರ ಮಾತ್ರ ವೃಥಾ ಟೈಂ ಯಾಕೆ ವೇಸ್ಟ್ ಮಾಡೋದು ಅಂತಾ.. ತಾನು ಕರಗತ ಮಾಡಿಕೊಂಡಿದ್ದ ಕಲೆಯಲ್ಲಿ ಏನಾದರೂ ಸಾಧಿಸಿ ತೋರಿಸಬೇಕು ಎಂದು ಕುಂಚವನ್ನು ಕೈಗೆತ್ತಿಕೊಂಡರು. ಅದಕ್ಕೂ ಮುನ್ನ ಕಲ್ಲು ಕೆತ್ತನೆಯಲ್ಲಿ ತನಗೆ ಆಸಕ್ತಿ ಇರುವುದು ಬಗ್ಗೆ ಅಧಿಕಾರಿಗಳ ಬಳಿ ಹೇಳಿಕೊಂಡಿದ್ದರು.

ಕೆತ್ತನೆಯಲ್ಲಿ ವಿಘ್ನ ನಿವಾರಕ, ಮೊಗದಲ್ಲಿ ಮಂದಹಾಸ! ಅಧಿಕಾರಿಗಳೂ ಅಷ್ಟೇ… ಮಲ್ಲಪ್ಪನ ಇಡೀ ಕುಟುಂಬ ಸಾಂಸ್ಥಿಕ ಕ್ವಾರಂಟೈನ್ ನಲ್ಲಿದೆ. ಜೊತೆಗೆ ಬಡತನ ಬೇರೆ ಅವರ ಜೊತೆಯಲ್ಲೇ ಇದೆ. ಹಾಗಾಗಿ 14 ದಿನಗಳ ಕ್ವಾರಂಟೈನ್ ಅವಧಿಯಲ್ಲಿ ಈತನಿಗೆ ಏನಾದರೂ ಕೆಲಸ ಹಚ್ಚುವುದೇ ಒಳ್ಳೇಯದು ಎಂದು ಆತನನ್ನು ಪ್ರೋತ್ಸಾಹಿಸಿದರು. ಜಿಪಂ ಸಿಇಒ ಗಂಗೂಬಾಯಿ‌ ಮಾನಕರ್ ಭೇಟಿ ನೀಡಿ, ಮಲ್ಲಪ್ಪ ಬಡಿಗೇರರ ಬೆನ್ನುತಟ್ಟಿದರು! ಆಗ ಮೂಡಿತು ಸುಂದರವಾದ ಕಲ್ಲಿನ ಗಣೇಶ ಮೂರ್ತಿ ಕೆತ್ತನೆ…ಪಂಚಾಯಿತಿ ಪಿಡಿಒ ಅವರೂ ಸಹ ಕಲಾವಿದನಿಗೆ 10,000 ರೂಪಾಯಿ ಪ್ರೋತ್ಸಾಹ ಧನ ಕೊಟ್ಟು ಮೂರ್ತಿ ಖರೀದಿಸಿದರು. ಆಗ ಮೂಡಿತು ಮಲ್ಲಪ್ಪ ಬಡಿಗೇರರ ಮೊಗದಲ್ಲಿ ಮಂದಹಾಸ!

Published On - 2:23 pm, Wed, 10 June 20