ಉಡುಪಿ: ಓವನ್ ಸ್ಫೋಟ, ಬೇಕರಿ ಮಾಲೀಕ ಸ್ಥಳದಲ್ಲೇ ಸಾವು

ಉಡುಪಿ: ತಾಲೂಕಿನ ಮಾಬುಕಳದಲ್ಲಿ ಬೇಕರಿ ಉತ್ಪನ್ನಗಳ ತಯಾರಿಕಾ ಘಟಕದಲ್ಲಿ ಅವಘಡ ಸಂಭವಿಸಿದ್ದು, ಬೇಕರಿ ಮಾಲೀಕ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಬೇಕರಿಲ್ಲಿನ ದೊಡ್ಡ ಗಾತ್ರದ ಓವನ್‌ ಸ್ಫೋಟದಿಂದ ಈ ದುರ್ಘಟನೆ ನಡೆದಿದೆ. ಬೇಕರಿಯ ಮಾಲೀಕ ರಾಬರ್ಟ್ ಪುಟಾರ್ಡೋ ಸ್ಥಳದಲ್ಲೇ ಸಾವನ್ನಪ್ಪಿದ ದುರ್ದೈವಿ. ಓವನ್ ಬಾಗಿಲು ಬಡಿದು ದೇಹ ಛಿದ್ರ: ಓವನ್ ನಿರ್ವಹಣೆಗೆಂದು ಮಾಲೀಕ ರಾಬರ್ಟ್ ಅದರ ಸಮೀಪ ಹೋದಾಗ ದಿಢೀರನೆ ಸ್ಫೋಟ ಸಂಭವಿಸಿದೆ. ಓವನ್ ಬಾಗಿಲು ಬಡಿದು ಅವರ ದೇಹ ಸಂಪೂರ್ಣ ಛಿದ್ರವಾಗಿದೆ. ಸ್ಥಳಕ್ಕೆ ಕೋಟ ಪೊಲೀಸರು ದೌಡಾಯಿಸಿದ್ದಾರೆ.

ಉಡುಪಿ: ಓವನ್ ಸ್ಫೋಟ, ಬೇಕರಿ ಮಾಲೀಕ ಸ್ಥಳದಲ್ಲೇ ಸಾವು
ಸಾಧು ಶ್ರೀನಾಥ್​

Updated on: Aug 10, 2020 | 9:43 AM

ಉಡುಪಿ: ತಾಲೂಕಿನ ಮಾಬುಕಳದಲ್ಲಿ ಬೇಕರಿ ಉತ್ಪನ್ನಗಳ ತಯಾರಿಕಾ ಘಟಕದಲ್ಲಿ ಅವಘಡ ಸಂಭವಿಸಿದ್ದು, ಬೇಕರಿ ಮಾಲೀಕ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಬೇಕರಿಲ್ಲಿನ ದೊಡ್ಡ ಗಾತ್ರದ ಓವನ್‌ ಸ್ಫೋಟದಿಂದ ಈ ದುರ್ಘಟನೆ ನಡೆದಿದೆ. ಬೇಕರಿಯ ಮಾಲೀಕ ರಾಬರ್ಟ್ ಪುಟಾರ್ಡೋ ಸ್ಥಳದಲ್ಲೇ ಸಾವನ್ನಪ್ಪಿದ ದುರ್ದೈವಿ.

ಓವನ್ ಬಾಗಿಲು ಬಡಿದು ದೇಹ ಛಿದ್ರ:
ಓವನ್ ನಿರ್ವಹಣೆಗೆಂದು ಮಾಲೀಕ ರಾಬರ್ಟ್ ಅದರ ಸಮೀಪ ಹೋದಾಗ ದಿಢೀರನೆ ಸ್ಫೋಟ ಸಂಭವಿಸಿದೆ. ಓವನ್ ಬಾಗಿಲು ಬಡಿದು ಅವರ ದೇಹ ಸಂಪೂರ್ಣ ಛಿದ್ರವಾಗಿದೆ. ಸ್ಥಳಕ್ಕೆ ಕೋಟ ಪೊಲೀಸರು ದೌಡಾಯಿಸಿದ್ದಾರೆ.

Published On - 9:32 am, Mon, 10 August 20

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Loading...
Unable to load recommendations.
Follow Us