ಗಣಿನಾಡಿನಲ್ಲಿ ಕೊರೊನಾ ಕಂಟ್ರೋಲ್‌ಗೆ ಹೊಸ ಪ್ರಯೋಗ

ಬಳ್ಳಾರಿ: ಗಣಿನಾಡು ಬಳ್ಳಾರಿಯಲ್ಲಿ ಕೊರೊನಾ ವೈರಸ್‌ ದಿನೇದಿನೆ ಸ್ಫೋಟಗೊಳ್ಳುತ್ತಲೇ ಇದೆ. ಸೋಂಕಿತರ ಸಂಖ್ಯೆ 1 ಸಾವಿರದ ಗಡಿ ದಾಟಿದ್ದು, ಈವರೆಗೆ 34 ಜನ ಬಲಿಯಾಗಿದ್ದಾರೆ. ಕೊರೊನಾ ನಿಯಂತ್ರಣಕ್ಕೆ ಜಿಲ್ಲಾಡಳಿತ ಎಷ್ಟೇ ಪ್ರಯತ್ನಿಸಿದ್ರೂ ಕಂಟ್ರೋಲ್‌ಗೇ ಬರ್ತಿಲ್ಲ. ಹೀಗಾಗಿ ಜಿಲ್ಲಾಡಳಿತ ರಾಜ್ಯದಲ್ಲೇ ಮೊದಲ ಬಾರಿಗೆ ವೇಗವಾಗಿ ಕೊರೊನಾ ಸೋಂಕು ಪತ್ತೆ ಹಚ್ಚೋಕೆ ಱಪಿಡ್‌ ಆ್ಯಂಟಿಜೆನ್‌ ಕಿಟ್‌ಗಳನ್ನ ಬಳಸೋಕೆ ಮುಂದಾಗಿದೆ. ಕೊರೊನಾ ವೈರಸ್ ಕಂಟ್ರೋಲ್‌ಗೆ ಹೊಸ ಪ್ರಯೋಗ..! ಹೌದು, ಇದುವರೆಗೆ ದೆಹಲಿಯಲ್ಲಿ ಮಾತ್ರ ಱಪಿಡ್‌ ಆ್ಯಂಟಿಜೆನ್ ಕಿಟ್‌ಗಳನ್ನ ಬಳಕೆ ಮಾಡಲಾಗುತ್ತಿತ್ತು. ಇದರಿಂದ […]

ಗಣಿನಾಡಿನಲ್ಲಿ ಕೊರೊನಾ ಕಂಟ್ರೋಲ್‌ಗೆ ಹೊಸ ಪ್ರಯೋಗ
Follow us
KUSHAL V
| Updated By: ಸಾಧು ಶ್ರೀನಾಥ್​

Updated on:Jul 04, 2020 | 10:40 AM

ಬಳ್ಳಾರಿ: ಗಣಿನಾಡು ಬಳ್ಳಾರಿಯಲ್ಲಿ ಕೊರೊನಾ ವೈರಸ್‌ ದಿನೇದಿನೆ ಸ್ಫೋಟಗೊಳ್ಳುತ್ತಲೇ ಇದೆ. ಸೋಂಕಿತರ ಸಂಖ್ಯೆ 1 ಸಾವಿರದ ಗಡಿ ದಾಟಿದ್ದು, ಈವರೆಗೆ 34 ಜನ ಬಲಿಯಾಗಿದ್ದಾರೆ. ಕೊರೊನಾ ನಿಯಂತ್ರಣಕ್ಕೆ ಜಿಲ್ಲಾಡಳಿತ ಎಷ್ಟೇ ಪ್ರಯತ್ನಿಸಿದ್ರೂ ಕಂಟ್ರೋಲ್‌ಗೇ ಬರ್ತಿಲ್ಲ. ಹೀಗಾಗಿ ಜಿಲ್ಲಾಡಳಿತ ರಾಜ್ಯದಲ್ಲೇ ಮೊದಲ ಬಾರಿಗೆ ವೇಗವಾಗಿ ಕೊರೊನಾ ಸೋಂಕು ಪತ್ತೆ ಹಚ್ಚೋಕೆ ಱಪಿಡ್‌ ಆ್ಯಂಟಿಜೆನ್‌ ಕಿಟ್‌ಗಳನ್ನ ಬಳಸೋಕೆ ಮುಂದಾಗಿದೆ.

ಕೊರೊನಾ ವೈರಸ್ ಕಂಟ್ರೋಲ್‌ಗೆ ಹೊಸ ಪ್ರಯೋಗ..! ಹೌದು, ಇದುವರೆಗೆ ದೆಹಲಿಯಲ್ಲಿ ಮಾತ್ರ ಱಪಿಡ್‌ ಆ್ಯಂಟಿಜೆನ್ ಕಿಟ್‌ಗಳನ್ನ ಬಳಕೆ ಮಾಡಲಾಗುತ್ತಿತ್ತು. ಇದರಿಂದ ಕೇವಲ 30 ನಿಮಿಷದೊಳಗೆ ಕೊವಿಡ್ ಪರೀಕ್ಷೆಯ ರಿಪೋರ್ಟ್ ಸಿಗುತ್ತದೆ. ಸಾಮಾನ್ಯವಾಗಿ ಲ್ಯಾಬ್‌ಗಳಲ್ಲಿ ಒಬ್ಬರಿಗೆ ಕೊವಿಟ್ ಟೆಸ್ಟ್ ಮಾಡಸಿ ವರದಿ ಸಿಗಲು ಸುಮಾರು 8 ತಾಸುಗಳು ಬೇಕಾಗುತ್ತೆ. ಆದ್ರೆ ಈ ಕಿಟ್‌ನಲ್ಲಿ ಕೇವಲ 30 ನಿಮಿಷದಲ್ಲೇ ರಿಪೋರ್ಟ್ ಕೈಸೇರುತ್ತೆ. ಹಾಗಾಗಿ ಜಿಲ್ಲಾಡಳಿತ ಱಪಿಡ್‌ ಆ್ಯಂಟಿಜೆನ್ ಕಿಟ್‌ ಬಳಕೆಗೆ ಮುಂದಾಗಿದೆ.

ಈಗಾಗಲೇ 10 ಸಾವಿರ ಕಿಟ್‌ಗಳನ್ನ ತರಿಸಲಾಗಿದ್ದು, ಟೆಸ್ಟಿಂಗ್‌ ಕಾರ್ಯ ಭರದಿಂದ ಸಾಗಿದೆ. ಜಿಲ್ಲೆಯ ಎಲ್ಲಾ ತಾಲೂಕು ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರ, ವಿಮ್ಸ್ ಮತ್ತು ಜಿಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಈ ಕಿಟ್‌ಗಳನ್ನ ಬಳಕೆ ಮಾಡಲಾಗ್ತಿದೆ.

ಈ ಕಿಟ್​ನ ಬಳಕೆಯಿಂದ ಶೀಘ್ರವೇ ವರದಿ ಸಿಗುವ ಕಾರಣ ಕೂಡಲೇ ಸೋಂಕಿತರನ್ನ ಕೊವಿಡ್ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ನೀಡಬಹುದು. ಒಂದು ಕಿಟ್‌ನಿಂದ ಸುಮಾರು 25 ಜನರಿಗೆ ಕೊರೊನಾ ಟೆಸ್ಟ್ ಮಾಡುವ ಸಾಧ್ಯತೆಯಿದೆ. ಸದ್ಯಕ್ಕೆ ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿ ಜಿಲ್ಲೆಯಲ್ಲಿ ಸರ್ವೆ ನಡೆಸ್ತಿದ್ದಾರೆ. ಸೋಂಕಿನ ಲಕ್ಷಣಗಳು ಇರೋರು ಹಾಗೂ ವೃದ್ಧರು ಜೊತೆಗೆ ಬೇರೆ ಬೇರೆ ಕಾಯಿಲೆಗಳಿಂದ ಬಳಲುತ್ತಿರೋರನ್ನ ಪತ್ತೆ ಹಚ್ಚಿ ಅವರಿಗೆ ಈ ಱಪಿಡ್‌ ಆ್ಯಂಟಿಜೆನ್‌ ಕಿಟ್‌ ಮೂಲಕ ಟೆಸ್ಟಿಂಗ್‌ ಮಾಡಲಾಗುತ್ತಿದೆ. ಹೆಚ್ಚೆಚ್ಚು ಟೆಸ್ಟ್‌ಗಳನ್ನ ಮಾಡೋ ಮೂಲಕ ಕೊರೊನಾ ಮಹಾಮಾರಿಯನ್ನ ಹತೋಟಿಗೆ ತರಲು ಜಿಲ್ಲಾಡಳಿತ ಮುಂದಾಗಿದೆ.

Published On - 7:33 am, Sat, 4 July 20

Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ