ರಾಮನಗರ: ಬಂಡೇಮಠದ ಬಸವಲಿಂಗ ಶ್ರೀ ಗಳ ಆತ್ಮಹತ್ಯೆ ಪ್ರಕರಣ ದಿನದಿಂದ ದಿನಕ್ಕೆ ಒಂದೊಂದು ತಿರುವುಗಳನ್ನ ಪಡೆಯುತ್ತಿದೆ. ಕೇಸ್ ದಾಖಲಿಸಿಕೊಂಡಿದ್ದ ಪೊಲೀಸರು, ಎಲ್ಲ ಆಯಾಮಗಳಲ್ಲೂ ತನಿಖೆ ನಡೆಸಿದರು, ಹನಿಟ್ರ್ಯಾಪ್ ನಡೆಸಿದ ಮದನಾರಿಯನ್ನ ಪಚ್ಚ ಹಚ್ಚೋದು ದೊಡ್ಡ ಚಾಲೆಂಜ್ ಆಗಿ ಪರಿಣಮಿಸಿದೆ. ಮತ್ತೊಂಡೆದೆ ಡೆತ್ ನೋಟ್ ನಲ್ಲಿ ಇರುವ ಸ್ವಾಮೀಜಿ ಒಬ್ಬರು ಎಸ್ಕೇಪ್ ಆಗಿದ್ದು, ಬಂಧನ ಭೀತಿಯಲ್ಲಿ ನಿರೀಕ್ಷಣಾ ಜಾಮೀನು ಮೊರೆ ಹೋಗಲು ಮುಂದಾಗಿದ್ದಾರೆ.
ಹೌದು ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಶ್ರೀ ಕಂಚುಗಲ್ ಬಂಡೇಮಠದ ಸ್ವಾಮೀಜಿ, ಆಕ್ಟೋಬರ್ 24ರಂದು ತಮ್ಮ ವೈಯಕ್ತಿಯ ಕೊಠಡಿಯಲ್ಲಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದು. ಈ ವಿಚಾರ ಸಾಕಷ್ಟು ಆತಂಕಕ್ಕೂ ಕೂಡ ಕಾರಣವಾಗಿತ್ತು. ಇನ್ನು ಡೆತ್ ನೊಟ್ ನಲ್ಲಿ ಸ್ವಾಮೀಜಿಯೊಬ್ಬರ ಹೆಸರನ್ನು ಕೂಡ ಪ್ರಸ್ತಾಪ ಮಾಡಿದ್ದರು.
ಬಂಡೆಮಠ ಸ್ವಾಮೀಜಿ ಆತ್ಮಹತ್ಯೆ ಪ್ರಕರಣ: ವಿಡಿಯೋ ಚಾಟ್ನಲ್ಲಿದ್ದ ಮಹಿಳೆಯ ಫೋಟೊ ಬಹಿರಂಗ, ತನಿಖೆ ಚುರುಕು
ಆನಂತರ ಸ್ವಾಮೀಜಿಯ ವಿಡಿಯೋಗಳು ಕೂಡ ವೈರಲ್ ಆಗಿದ್ದವು. ಸ್ವಾಮೀಜಿಯ ಆತ್ಮಹತ್ಯೆಗೆ ಸುಂದರಿಯೊಬ್ಬಳ ಕರಿನೆರಳು ಇರುವುದು ಗೊತ್ತಾಗಿತ್ತು. ಈ ನಿಟ್ಟಿನಲ್ಲಿ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ಕೂಡ ನಡೆಸುತ್ತಿದ್ದಾರೆ. ಆದರೆ ಶ್ರೀಗಳು ಡೆತ್ ನೋಟ್ ನಲ್ಲಿ ಪ್ರಸ್ತಾಪ ಮಾಡಿರೋ ಸ್ವಾಮೀಜಿಯೊಬ್ಬರು ಕಳೆದಎರಡು ದಿನಗಳಿಂದ ಮಠದಿಂದ ಎಸ್ಕೇಪ್ ಆಗಿದ್ದಾರೆ ಎನ್ನಲಾಗುತ್ತಿದೆ. ಅಷ್ಟೇ ಅಲ್ಲದೆ ಬಂಧನದ ಭೀತಿಯಲ್ಲಿ ನಿರೀಕ್ಷಣಾ ಜಾಮೀನು ಮೊರೆಹೋಗಲು ಸಿದ್ದತೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.
ಮದನಾರಿಯ ಪತ್ತೆಗಾಗಿ ಪೊಲೀಸರ ಪರದಾಟ
ಅಂದಹಾಗೆ ಬಂಡೇಮಠದ ಸ್ವಾಮೀಜಿ ಆತ್ಮಹತ್ಯೆ ನಂತರ ವಿಡಿಯೋಗಳು ವೈರಲ್ ಆದ ಮೇಲೆ ಹನಿಟ್ರ್ಯಾಪ್ ಜಾಲಕ್ಕೆ ಸ್ವಾಮೀಜಿ ಸಿಲುಕಿದ್ರು ಎಂಬ ಅಂಶ ಗೊತ್ತಾಗಿತ್ತು. ಬೆಂಗಳೂರು ಮೂಲದ ಮದನಾರಿಯನ್ನ ಬಿಟ್ಟು ಹನಿಟ್ರ್ಯಾಪ್ ಮಾಡಲಾಗಿದೆ ಎಂಬುದು ತಿಳಿದುಬಂದಿತ್ತು. ಇದೇ ವಿಚಾರವನ್ನ ಮುಂದೆ ಇಟ್ಟುಕೊಂಡು ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಆದರೆ ಆ ಮದನಾರಿ ಯಾರು ಎಂಬುದನ್ನ ಪತ್ತೆ ಹಚ್ಚಲು ಪೊಲೀಸರಿಗೆ ದೊಡ್ಡ ತಲೆನೋವಾಗಿದೆ.
ಸ್ವಾಮೀಜಿಗಳ 20ಕ್ಕೂ ಹೆಚ್ಚು ವಿಡಿಯೋಗಳು ಇದ್ದು, ಶ್ರೀ ಗಳ ಜೊತೆ ಸಾಕಷ್ಟು ಮಹಿಳೆಯರು ಅನ್ಯೋನ್ಯವಾಗಿ ಇದ್ದರು. ಅದರಲ್ಲೂ ಯಾವ ಯುವತಿ ಹನಿಟ್ರ್ಯಾಪ್ ಮಾಡಿದ್ದಾಳೆ ಎಂಬುದು ತಿಳಿಯಲು ಕಷ್ಟವಾಗುತ್ತಿದೆ. ಹೀಗಾಗಿ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದ್ರು, ಮದನಾರಿಯನ್ನ ಪತ್ತೆಹಚ್ಚುವುದು ಪೊಲೀಸರಿಗೆ ಕಷ್ಟವಾಗಿದೆ.
ಒಟ್ಟಾರೆ ಸ್ವಾಮೀಜಿ ಆತ್ಮಹತ್ಯೆ ಪ್ರಕರಣ ಪೊಲೀಸರಿಗೆ ಕಗ್ಗಂಟಾಗಿದ್ರೆ, ಮತ್ತೊಂದೆಡೆ ಬಂಧನದ ಭೀತಿಯಲ್ಲಿ ಮತ್ತೊಬ್ಬ ಸ್ವಾಮೀಜಿ ನಿರೀಕ್ಷಣಾ ಜಾಮೀನು ಪಡೆಯಲು ಮುಂದಾಗಿದ್ದಾರೆ.
Published On - 7:01 pm, Sat, 29 October 22