AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಂಡೆಮಠ ಸ್ವಾಮೀಜಿ ಆತ್ಮಹತ್ಯೆ ಪ್ರಕರಣ: ವಿಡಿಯೋ ಚಾಟ್​ನಲ್ಲಿದ್ದ ಮಹಿಳೆಯ ಫೋಟೊ ಬಹಿರಂಗ, ತನಿಖೆ ಚುರುಕು

ಸ್ವಾಮೀಜಿಯ ಜೊತೆ ವಿಡಿಯೋ ಕಾಲ್​ನಲ್ಲಿದ್ದ ಮಹಿಳೆಯ ಫೋಟೋ ಈಗ ಲೀಕ್ ಆಗಿದೆ. ಪೊಲೀಸರು ವಿಡಿಯೋಗಳ ಆಧಾರದಲ್ಲಿ ಆಕೆಯ ಫೋಟೊವನ್ನು ಸಂಗ್ರಹಿಸಿದ್ದಾರೆ.

ಬಂಡೆಮಠ ಸ್ವಾಮೀಜಿ ಆತ್ಮಹತ್ಯೆ ಪ್ರಕರಣ: ವಿಡಿಯೋ ಚಾಟ್​ನಲ್ಲಿದ್ದ ಮಹಿಳೆಯ ಫೋಟೊ ಬಹಿರಂಗ, ತನಿಖೆ ಚುರುಕು
ಬಂಡೆಮಠದ ಬಸವಲಿಂಗ ಸ್ವಾಮೀಜಿ
TV9 Web
| Edited By: |

Updated on:Oct 28, 2022 | 12:02 PM

Share

ರಾಮನಗರ: ಬಂಡೆಮಠದ ಸ್ವಾಮೀಜಿ ಆತ್ಮಹತ್ಯೆ ಕೇಸ್‌ಗೆ ಬಿಗ್ ಟ್ವಿಸ್ಟ್‌ ಸಿಕ್ಕಿದೆ. ನಿನ್ನೆ ಅಷ್ಟೇ ಸ್ವಾಮೀಜಿ ಅವರ ಜೊತೆ ವಿಡಿಯೋ ಚಾಟ್ ಮಾಡಿದ್ದ ಮಹಿಳೆಯ ವಿಡಿಯೋ ಬಿಡುಗಡೆಯಾಗಿತ್ತು. ಇಂದು ಹನಿಟ್ರ್ಯಾಪ್ ಮಾಡಿದ್ದ ಮಹಿಳೆಯ ಫೋಟೋ ಲಭ್ಯವಾಗಿದೆ. ಮತ್ತೊಂದು ಕಡೆ ಸ್ವಾಮೀಜಿ ಅವರಿಗೆ ಹನಿಟ್ರ್ಯಾಪ್ ಮಾಡುವುದರಲ್ಲಿ ಭಾಗಿಯಾಗಿದ್ದ ಇನ್ನೋರ್ವ ಸ್ವಾಮೀಜಿಯ ಸುಳಿವು ಸುಕ್ಕಿದೆ. ಸದ್ಯ ಪೊಲೀಸರ ತನಿಕೆ ಮತ್ತಷ್ಟು ಜೋರಾಗಿದೆ.

ಬಂಡೆ ಮಠ ಶ್ರೀಗಳು ತನ್ನನ್ನು ಹನಿ ಟ್ರ್ಯಾಪ್‌ ಮಾಡಲಾಗಿದೆ ಎಂದು ಡೆತ್ ನೋಟ್‌ನಲ್ಲಿ ಬರೆದುಕೊಂಡಿದ್ದರು. ಅದರಲ್ಲಿ ಬೆಂಗಳೂರು ಮೂಲದ ಒಬ್ಬ ಮಹಿಳೆಯ ಬಗ್ಗೆ ಉಲ್ಲೇಖಿಸಲಾಗಿತ್ತು. ಅದರಂತೆ ಎರಡನೇ ವಿಡಿಯೋ ಕೂಡ ಗುರುವಾರ ಲೀಕ್ ಆಗಿದೆ. ವಿಡಿಯೋದಲ್ಲಿ ಕೆಲವು ದೃಶ್ಯದ ವಿಡಿಯೋ ತೋರಿಸಿ ಅದರಂತೆ ಮುದ್ದಾಡೋಣ ಎಂದು ಮಹಿಳೆಗೆ ಹೇಳುವ ದೃಶ್ಯಗಳಿವೆ. ಎರಡು ಮೊಬೈಲ್ ಬಳಕೆ ಮಾಡುತ್ತಿದ್ದ ಬಸವಲಿಂಗ ಸ್ವಾಮೀಜಿ, ವಿಡಿಯೋಗಳನ್ನು ಒಂದು ಮೊಬೈಲ್‌ನಲ್ಲಿ ತೋರಿಸಿ ಮತ್ತೊಂದು ಮೊಬೈಲ್‌ನಲ್ಲಿ ವಿಡಿಯೊ ಕಾಲ್ ಮಾಡುತ್ತಿರುವುದು ಬೆಳಕಿಗೆ ಬಂದಿದೆ.

ಸ್ವಾಮೀಜಿಯ ಜೊತೆ ವಿಡಿಯೋ ಕಾಲ್​ನಲ್ಲಿದ್ದ ಮಹಿಳೆಯ ಫೋಟೋ ಈಗ ಲೀಕ್ ಆಗಿದೆ. ಪೊಲೀಸರು ವಿಡಿಯೋಗಳ ಆಧಾರದಲ್ಲಿ ಆಕೆಯ ಫೋಟೊವನ್ನು ಸಂಗ್ರಹಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಮೂವರು ಮಹಿಳೆಯರನ್ನು ಪೊಲೀಸರು ವಿಚಾರಣಿ ಮಾಡಿದ್ದಾರೆ. ಮತ್ತೊಂದೆಡೆ ಈ ಪ್ರಕರಣದಲ್ಲಿ ಮತ್ತೋರ್ವ ಸ್ವಾಮೀಜಿಯ ಪಾಲಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಬಂಡೆಮಠದ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ: ಡೆತ್​ನೋಟ್​​ನಲ್ಲಿ ಕೆಲವು ವ್ಯಕ್ತಿಗಳ ಹೆಸರು ಉಲ್ಲೇಖ- ಎಸ್​ಪಿ ಸಂತೋಷ್ ಬಾಬು

ಸ್ವಾಮೀಜಿಯ ಮಾನ ಹರಾಜಿಗೆ ತಯಾರಿ ನಡೆಸಿದ್ದ ಗ್ಯಾಂಗ್

ಆಕ್ಟೋಬರ್ 26 ರಂದು ಮಠದ ಆವರಣದಲ್ಲಿ ದೊಡ್ಡ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ವಿದ್ಯಾರ್ಥಿ ನಿಲಯ, ಪ್ರಸಾದ ನಿಲಯ‌ ಹಾಗೂ ಅತಿಥಿ ಗೃಹ ಕಟ್ಟಡದ ಶಂಕುಸ್ಥಾಪನೆಗೆ ಸಿದ್ಧತೆ ನಡೆದಿತ್ತು. ಅಂದೇ ಈ ವಿಡಿಯೋಗಳನ್ನ ವೈರಲ್ ಮಾಡಲು ಹನಿಟ್ರ್ಯಾಪ್ ಗ್ಯಾಂಗ್ ಪ್ಲಾನ್‌ ಮಾಡಿಕೊಂಡಿತ್ತು. ಕಾರ್ಯಕ್ರಮ ‌ನಡೆಯುವ ಮೊದಲೇ ಆಕ್ಟೋಬರ್ 24 ರಂದು ಸ್ವಾಮೀಜಿ ಆತ್ಮಹತ್ಯೆ ‌ಮಾಡಿಕೊಂಡಿದ್ದರು. ಕಾರ್ಯಕ್ರಮಕ್ಕೆ ಅದೊಬ್ಬ ಸಮಾಜದ ನಾಯಕನ್ನ ಕರೆಯದೆ ಕಾರ್ಯಕ್ರಮ ಹಮ್ಮಿಕೊಂಡಿದ್ದ ಹಿನ್ನೆಲೆ ಕಾರ್ಯಕ್ರಮದಲ್ಲಿ ಭಕ್ತರ ಮುಂದೆ ವಿಡಿಯೋಗಳನ್ನ ವೈರಲ್ ಮಾಡುವುದಾಗಿ ಹನಿಟ್ರ್ಯಾಪ್ ಗ್ಯಾಂಗ್ ಬೆದರಿಕೆ ಹಾಕಿತ್ತು. ಜೊತೆಗೆ ಕಾರ್ಯಕ್ರಮದ ಮೊದಲೇ ಕೆಲ ಮಠಾಧೀಶರು, ವೀರಶೈವ ಸಮಾಜದ ಮುಖಂಡರುಗಳ ಮನೆಗೆ ಸಿಡಿಗಳನ್ನ ಈ ಗ್ಯಾಂಗ್ ಕಳಿಸಿತ್ತು. ಇದರಿಂದ ಆತಂಕಕ್ಕೆ ಒಳಗಾದ ಸ್ವಾಮೀಜಿಗಳು ಆತ್ಮಹತ್ಯೆಗೆ ಶರಣಾದರು. ಸದ್ಯ ಈಗ ಈ ಕೇಸ್​ಗೆ ಸಂಬಂಧಿಸಿ ಇದರ ಹಿಂದಿರುವ ಮತ್ತೋರ್ವ ಸ್ವಾಮೀಜಿಯನ್ನು ಹಾಗೂ ವಿಡಿಯೋದಲ್ಲಿರುವ ಮಹಿಳೆಯನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.

Published On - 12:02 pm, Fri, 28 October 22

ಸ್ಫೋಟಕ ಬ್ಯಾಟರ್​ಗಳನ್ನು ಪೆವಿಲಿಯನ್​ಗಟ್ಟಿದ ಶ್ರೇಯಾಂಕ
ಸ್ಫೋಟಕ ಬ್ಯಾಟರ್​ಗಳನ್ನು ಪೆವಿಲಿಯನ್​ಗಟ್ಟಿದ ಶ್ರೇಯಾಂಕ
ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ; ಬಜರಂಗದಳದ ವ್ಯಕ್ತಿಯಿಂದ ಬೆದರಿಕೆ
ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ; ಬಜರಂಗದಳದ ವ್ಯಕ್ತಿಯಿಂದ ಬೆದರಿಕೆ
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಹಿಮಾಚಲದ ಕಟ್ಟಡದಲ್ಲಿ ಬೆಂಕಿ ಅವಘಡ; 8 ವರ್ಷದ ಮಗು ಸಾವು, ಹಲವರಿಗೆ ಗಾಯ
ಹಿಮಾಚಲದ ಕಟ್ಟಡದಲ್ಲಿ ಬೆಂಕಿ ಅವಘಡ; 8 ವರ್ಷದ ಮಗು ಸಾವು, ಹಲವರಿಗೆ ಗಾಯ