ಬಂಡೆಮಠದ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ: ಡೆತ್ನೋಟ್ನಲ್ಲಿ ಕೆಲವು ವ್ಯಕ್ತಿಗಳ ಹೆಸರು ಉಲ್ಲೇಖ- ಎಸ್ಪಿ ಸಂತೋಷ್ ಬಾಬು
ಬಂಡೆ ಮಠದ ಬಸವಲಿಂಗ ಸ್ವಾಮೀಜಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣಕ್ಕೆ ಸಂಬಧಿಸಿದಂತೆ ಮಠದ ಕಡೆಯವರು ದೂರು ದಾಖಲಿಸಿದ್ದಾರೆ.
ರಾಮನಗರ: ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನಲ್ಲಿ ದೊಡ್ಡ ಮಠ ಅಂತಾನೇ ಹೆಸರು ಪಡೆದಿರುವ ಬಂಡೆ ಮಠದ (Bande mutt) ಬಸವಲಿಂಗ ಸ್ವಾಮೀಜಿ (Basavling Swamiji) ಅವರು ನೇಣು ಬಿಗಿದು ಆತ್ಮಹತ್ಯೆ (Suicide) ಮಾಡಿಕೊಂಡಿರುವ ಪ್ರಕರಣಕ್ಕೆ ಸಂಬಧಿಸಿದಂತೆ ಮಠದ ಕಡೆಯವರು ದೂರು ನೀಡಿದ್ದಾರೆ ಎಂದು ರಾಮನಗರದಲ್ಲಿ ಎಸ್ಪಿ ಸಂತೋಷ್ ಬಾಬು ಹೇಳಿದ್ದಾರೆ. ಸತ್ತಿರುವ ಜಾಗದಲ್ಲಿ 3 ಪುಟಗಳ ಡೆತ್ನೋಟ್ ಪತ್ತೆಯಾಗಿದೆ. ಡೆತ್ ನೋಟ್ನಲ್ಲಿ ಹಲವು ವಿಚಾರಗಳ ಪ್ರಸ್ತಾಪ ಮಾಡಿದ್ದಾರೆ. ಡೆತ್ನೋಟ್ನಲ್ಲಿ ಕೆಲವು ವ್ಯಕ್ತಿಗಳ ಹೆಸರು ಉಲ್ಲೇಖವಾಗಿದೆ. ತನಿಖೆಯ ದೃಷ್ಟಿಯಿಂದ ಅವರ ಹೆಸರನ್ನು ಬಹಿರಂಪಡಿಸಲ್ಲ ಎಂದು ತಿಳಿಸಿದರು.
ಶ್ರೀಗಳಿಗೆ ಸಂಬಂಧಿಸಿದ 2 ಮೊಬೈಲ್ ವಶಕ್ಕೆ ಪಡೆಯಲಾಗಿದ್ದು, ಮೊಬೈಲ್ಗಳು ಕೂಡ ಲಾಕ್ ಆಗಿವೆ. ವೈರಲ್ ಆಗಿರುವ ಡೆತ್ನೋಟ್ ಶ್ರೀಗಳಿಗೆ ಸಂಬಂಧಿಸಿದ್ದಲ್ಲ. ಡೆತ್ನೋಟ್ಗೂ ವೈರಲ್ ಆದ ಫೋಟೋಗೂ ವ್ಯತ್ಯಾಸವಿದೆ. ಡೆತ್ನೋಟ್ ಸಿಕ್ಕರೂ ನಮ್ಮ ಗಮನಕ್ಕೆ ತರದಿದ್ದಕ್ಕೆ ಕೇಸ್ ಹಾಕುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಮಠದ ಯಾರ ಮೇಲೂ ಸಂಶಯ ವ್ಯಕ್ತಪಡಿಸಿಲ್ಲ. ಬೆದರಿಕೆ ಕರೆಗಳ ಬಗ್ಗೆ ಜನರು ಮಾತನಾಡುತ್ತಿದ್ದಾರೆ. ತನಿಖೆ ನಂತರ ಸಂಪೂರ್ಣ ಮಾಹಿತಿ ನೀಡುತ್ತೇವೆ. ವಿಡಿಯೋ ಇದೆ ಎಂದು ಜನ ಮಾತನಾಡುತ್ತಿದ್ದಾರೆ ಅದರ ಬಗ್ಗೆ ಮಾಹಿತಿ ಇಲ್ಲ. ನಾವು ಎಲ್ಲ ಆಯಾಮಗಳಲ್ಲಿ ತನಿಖೆ ಮಾಡುತ್ತಿದ್ದೇವೆ. ಪೊಲೀಸರ ಮೇಲೆ ಯಾವುದೇ ಒತ್ತಡ ಇಲ್ಲ. ಸಾಕಷ್ಟು ಗಂಭೀರ ಪ್ರಕರಣವಾಗಿದ್ದು, ಕಾನೂನು ಪ್ರಕಾರ ತನಿಖೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಡೆತ್ ನೋಟ್ ಹಾಗೂ ಮೊಬೈಲ್ನ್ನು ಎಫ್.ಎಸ್.ಎಲ್ ಕಳುಹಿಸಲಾಗುತ್ತಿದೆ. ಎರಡು ಫೋನ್ಗಳು ಉಪಯೋಗಿಸುತ್ತಿದ್ದರು. ಮಠದ ಒಳಗೆ ಏನು ನಡೆಯುತ್ತಿತ್ತು ಅದರ ಬಗ್ಗೆ ವಿಚಾರಣೆ ಮಾಡುವುದಿಲ್ಲ. ಆತ್ಮಹತ್ಯೆಗೆ ಕಾರಣಕರ್ತರು ಯಾರು ಎಂದು ತನಿಖೆ ಮಾಡುತ್ತಿದ್ದೇವೆ. ಸಾಕಷ್ಟು ಜನ ಸ್ವಾಮೀಜಿ ಅವರನ್ನು ಭೇಟಿ ಮಾಡಲು ಬರುತ್ತಿದ್ದರು. ಕೆಲ ದಿನಗಳಲ್ಲಿ ಏನಾಗಿತ್ತು ಎಂದು ತಿಳಿಯುತ್ತೇವೆ ಎಂದು ಮಾಹಿತಿ ನೀಡಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:57 pm, Tue, 25 October 22