Cricket ಹೃದಯಾಘಾತದಿಂದ ಮೈದಾನದಲ್ಲಿ ಮೃತನಾದ ಕ್ರಿಕೆಟಿಗ
ಕ್ರಿಕೆಟ್ ಪಂದ್ಯದ ವೇಳೆ ಬ್ಯಾಟ್ಸ್ಮನ್ ಓರ್ವ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ. ಪುಣೆ ಬಳಿಯಿರುವ ಜುನ್ನಾರ್ ಪಟ್ಟಣದಲ್ಲಿ ನಡೆದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಘಟನೆ ಸಂಭವಿಸಿದೆ.
ಮುಂಬೈ: ಕ್ರಿಕೆಟ್ ಪಂದ್ಯದ ವೇಳೆ ಬ್ಯಾಟ್ಸ್ಮನ್ ಓರ್ವ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ. ಪುಣೆ ಬಳಿಯಿರುವ ಜುನ್ನಾರ್ ಪಟ್ಟಣದಲ್ಲಿ ನಡೆದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಘಟನೆ ಸಂಭವಿಸಿದೆ. ಮೃತ ಬ್ಯಾಟ್ಸ್ಮನ್ನನ್ನು 47 ವರ್ಷದ ಬಾಬು ನಲವಾಡೆ ಎಂದು ಗುರುತಿಸಲಾಗಿದೆ.
ನಾನ್ ಸ್ಟ್ರೈಕರ್ ಎಂಡ್ ಬಳಿ ಕಾಯುತ್ತಿದ್ದ ವೇಳೆ ಬಾಬು ನಲವಾಡೆ ಇದಕ್ಕಿದ್ದತೆ ಕುಸಿದುಬಿದ್ದಿದ್ದಾರೆ. ಈ ವೇಳೆ, ಹೃದಯಾಘಾತದಿಂದ ಅಸುನೀಗಿದ್ದಾರೆ. ಅಂದ ಹಾಗೆ, ಕುಸಿ ಬೀಳುವ ಕೆಲವೇ ನಿಮಿಷಗಳ ಮುಂಚೆ ಬಾಬು ಅಂಪೈರ್ ಬಳಿ ಓವರ್ನಲ್ಲಿ ಇನ್ನೆಷ್ಟು ಬಾಲ್ ಉಳಿದಿದೆ ಎಂದು ವಿಚಾರಿಸಿದ್ದರಂತೆ. ಇದಾದ ಕೆಲವೇ ಸೆಕೆಂಡ್ಗಳಲ್ಲಿ ಆತ ಕುಸಿದು ಬಿದ್ದು ಕೊನೆಯುಸಿರೆಳೆದಿದ್ದಾರೆ. ಮ್ಯಾಚ್ ವೇಳೆ ಬ್ಯಾಟ್ಸ್ಮನ್ ಕುಸಿದು ಬೀಳುವ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಇದನ್ನೂ ಓದಿ: ಮೆಡಿಕಲ್-ಇಂಜಿನಿಯರಿಂಗ್ ಸೀಟ್ ಗೋಲ್‌ಮಾಲ್: IT ದಾಳಿಯಲ್ಲಿ 402 ಕೋಟಿ ರೂ. ತೆರಿಗೆ ವಂಚನೆ ಪತ್ತೆ
Published On - 11:48 pm, Thu, 18 February 21