ಕಸ ನಿರ್ವಹಣೆ ನಷ್ಟ ಭರಿಸಲು BBMP ಮಾಸ್ಟರ್​ ಪ್ಲಾನ್​, ಜನರ ಜೇಬಿಗೆ ಕತ್ತರಿ ಬೀಳಲಿದೆಯಾ?

|

Updated on: Nov 18, 2020 | 8:18 AM

ಬೆಂಗಳೂರು: ನಗರದಲ್ಲಿ ಕಸ ವಿಲೇವಾರಿ ಸಮಸ್ಯೆ ಬಿಬಿಎಂಪಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಅಲ್ಲದೆ ನಷ್ಟದಲ್ಲಿ ನೆಡೆಯುತ್ತಿರುವ ಬಿಬಿಎಂಪಿ ಕಸ ವಿಲೇವಾರಿಯಲ್ಲಾಗುತ್ತಿರುವ ನಷ್ಟ ಬರಿಸಲು ಭರ್ಜರಿ ಪ್ಲಾನ್ ಮಾಡಿದೆ. ಗಾರ್ಬೆಜ್ ಸೆಸ್ ಕೇವಲ 50-54 ಕೋಟಿ ಬರುತ್ತಿದೆ.. ಹೌದು, ಕಸ ವಿಲೇವಾರಿಯಲ್ಲಾಗುತ್ತಿರುವ ನಷ್ಟ ಬರಿಸಲು ಭರ್ಜರಿ ಪ್ಲಾನ್ ಮಾಡಿರುವ ಬಿಬಿಎಂಪಿ ನಗರದ ಪ್ರತಿ ಮನೆಯಿಂದ ಗಾರ್ಬೆಜ್ ಸೆಸ್ ಜೊತೆಗೆ ಕಸ ನಿರ್ವಹಣೆಗೆ ಹೆಚ್ಚುವರಿಯಾಗಿ 200 ರೂ. ಪಡೆಯಲು ಯೋಚನೆ ನೆಡೆಸಿದೆ. ನಗರದಲ್ಲಿ ಕಸ ನಿರ್ವಹಣೆಗೆ ಪ್ರತಿ ವರ್ಷ 1 […]

ಕಸ ನಿರ್ವಹಣೆ ನಷ್ಟ ಭರಿಸಲು BBMP ಮಾಸ್ಟರ್​ ಪ್ಲಾನ್​, ಜನರ ಜೇಬಿಗೆ ಕತ್ತರಿ ಬೀಳಲಿದೆಯಾ?
ಬಿಬಿಎಂಪಿ ಮುಖ್ಯ ಕಚೇರಿ
Follow us on

ಬೆಂಗಳೂರು: ನಗರದಲ್ಲಿ ಕಸ ವಿಲೇವಾರಿ ಸಮಸ್ಯೆ ಬಿಬಿಎಂಪಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಅಲ್ಲದೆ ನಷ್ಟದಲ್ಲಿ ನೆಡೆಯುತ್ತಿರುವ ಬಿಬಿಎಂಪಿ ಕಸ ವಿಲೇವಾರಿಯಲ್ಲಾಗುತ್ತಿರುವ ನಷ್ಟ ಬರಿಸಲು ಭರ್ಜರಿ ಪ್ಲಾನ್ ಮಾಡಿದೆ.

ಗಾರ್ಬೆಜ್ ಸೆಸ್ ಕೇವಲ 50-54 ಕೋಟಿ ಬರುತ್ತಿದೆ..
ಹೌದು, ಕಸ ವಿಲೇವಾರಿಯಲ್ಲಾಗುತ್ತಿರುವ ನಷ್ಟ ಬರಿಸಲು ಭರ್ಜರಿ ಪ್ಲಾನ್ ಮಾಡಿರುವ ಬಿಬಿಎಂಪಿ ನಗರದ ಪ್ರತಿ ಮನೆಯಿಂದ ಗಾರ್ಬೆಜ್ ಸೆಸ್ ಜೊತೆಗೆ ಕಸ ನಿರ್ವಹಣೆಗೆ ಹೆಚ್ಚುವರಿಯಾಗಿ 200 ರೂ. ಪಡೆಯಲು ಯೋಚನೆ ನೆಡೆಸಿದೆ. ನಗರದಲ್ಲಿ ಕಸ ನಿರ್ವಹಣೆಗೆ ಪ್ರತಿ ವರ್ಷ 1 ಸಾವಿರ ಕೋಟಿ ವೆಚ್ಚವಾಗುತ್ತಿದ್ದು, ಗಾರ್ಬೆಜ್ ಸೆಸ್ ಕೇವಲ 50-54 ಕೋಟಿ ಬರುತ್ತಿದೆ. ಹೀಗಾಗಿ ನಗರದಲ್ಲಿರುವ ಮನೆಗಳ ಆಧಾರದ ಮೇಲೆ, ಬಾಡಿಗೆದಾರರಿಂದಲೂ 200 ರೂ. ಪಡೆಯಲು ಪ್ಲಾನ್ ಮಾಡಿದೆ.

ಬೆಸ್ಕಾಂ ಸಹಾಯ ಪಡೆಯಲು ಮುಂದಾಗಿರುವ ಬಿಬಿಎಂಪಿ. ಎಷ್ಟು ವಿದ್ಯುತ್ ಸಂಪರ್ಕ ನೀಡಲಾಗಿದೆ. ಮೀಟರ್​ಗಳ ಸಂಖ್ಯೆ ಎಷ್ಟಿದೆ ಎಂಬ ಮಾಹಿತಿ ಪಡೆದು ಕಸ ನಿರ್ವಹಣೆಗೆ ಅನುದಾನ ಕೃಢಿಕರಣಕ್ಕೆ ಬಿಬಿಎಂಪಿ ಚಿಂತನೆ ಮಾಡಿತ್ತಿದೆ. ಸಧ್ಯ 200 ರೂ. ವಸೂಲಿ ಪ್ಲಾನ್ ಚರ್ಚಾ ಹಂತದಲ್ಲಿದೆ.

Published On - 7:35 am, Wed, 18 November 20