ಬೆಂಗಳೂರಿನ ‘ಪಂಚ’ ರಣಕಣದಲ್ಲಿ ಅಡಗಿದೆ ಅಭ್ಯರ್ಥಿಗಳ ಭವಿಷ್ಯ

ಬೆಂಗಳೂರು: ಬರೀ ಬೈ ಎಲೆಕ್ಷನ್ ಅಲ್ಲ. ಇದೊಂದು ಮಿನಿ ಕುರುಕ್ಷೇತ್ರ. ಮೂರು ಪಕ್ಷಗಳ ಜಿದ್ದಾಜಿದ್ದಿನ ಸಮರ. ಪ್ರತಿಷ್ಠೆಗಾಗಿ ನಡೆದ ಕಾದಾಟ. ಇರೋ 15 ಸೀಟ್​ಗಳಲ್ಲಿ ಹೆಚ್ಚು ಸ್ಥಾನ ಗೆಲ್ಲೋಕೆ ನಡೆದ ಹೋರಾಟ. ಅಂಥಾ ರಣರೋಚಕ. ಕುತೂಹಲದ ಕಾದಾಟದ ಭವಿಷ್ಯ ಇಂದು ಹೊರಬೀಳಲಿದೆ. ಕಣದಲ್ಲಿ ಮಿಂಚಿನಂತೆ ಕಾದಾಡಿದ್ದ ಅಭ್ಯರ್ಥಿಗಳ ಎದೆಯಲ್ಲಿ ಡವಡವ ಶುರುವಾಗಿದೆ. ಅದ್ರಲ್ಲೂ ಬೆಂಗಳೂರಿನ 5 ಕ್ಷೇತ್ರಗಳ ಅಭ್ಯರ್ಥಿಗಳು ಏನಾಗುತ್ತೋ ಏನೋ ಅಂತಾ ಫಲಿತಾಂಶದತ್ತ ಚಿತ್ತ ನೆಟ್ಟು ಕೂತಿದ್ದಾರೆ. ಬೆಂಗಳೂರಿನ 5 ವಿಧಾನಸಭಾ ಕ್ಷೇತ್ರಗಳಲ್ಲಿ ಬಲಾಢ್ಯ ಅಭ್ಯರ್ಥಿಗಳು […]

ಬೆಂಗಳೂರಿನ ‘ಪಂಚ’ ರಣಕಣದಲ್ಲಿ ಅಡಗಿದೆ ಅಭ್ಯರ್ಥಿಗಳ ಭವಿಷ್ಯ
Follow us
ಸಾಧು ಶ್ರೀನಾಥ್​
|

Updated on:Dec 09, 2019 | 7:56 AM

ಬೆಂಗಳೂರು: ಬರೀ ಬೈ ಎಲೆಕ್ಷನ್ ಅಲ್ಲ. ಇದೊಂದು ಮಿನಿ ಕುರುಕ್ಷೇತ್ರ. ಮೂರು ಪಕ್ಷಗಳ ಜಿದ್ದಾಜಿದ್ದಿನ ಸಮರ. ಪ್ರತಿಷ್ಠೆಗಾಗಿ ನಡೆದ ಕಾದಾಟ. ಇರೋ 15 ಸೀಟ್​ಗಳಲ್ಲಿ ಹೆಚ್ಚು ಸ್ಥಾನ ಗೆಲ್ಲೋಕೆ ನಡೆದ ಹೋರಾಟ. ಅಂಥಾ ರಣರೋಚಕ. ಕುತೂಹಲದ ಕಾದಾಟದ ಭವಿಷ್ಯ ಇಂದು ಹೊರಬೀಳಲಿದೆ. ಕಣದಲ್ಲಿ ಮಿಂಚಿನಂತೆ ಕಾದಾಡಿದ್ದ ಅಭ್ಯರ್ಥಿಗಳ ಎದೆಯಲ್ಲಿ ಡವಡವ ಶುರುವಾಗಿದೆ. ಅದ್ರಲ್ಲೂ ಬೆಂಗಳೂರಿನ 5 ಕ್ಷೇತ್ರಗಳ ಅಭ್ಯರ್ಥಿಗಳು ಏನಾಗುತ್ತೋ ಏನೋ ಅಂತಾ ಫಲಿತಾಂಶದತ್ತ ಚಿತ್ತ ನೆಟ್ಟು ಕೂತಿದ್ದಾರೆ.

ಬೆಂಗಳೂರಿನ 5 ವಿಧಾನಸಭಾ ಕ್ಷೇತ್ರಗಳಲ್ಲಿ ಬಲಾಢ್ಯ ಅಭ್ಯರ್ಥಿಗಳು ಅಖಾಡದಲ್ಲಿದ್ದಾರೆ. ಅವರ ಮಧ್ಯೆ ದೊಡ್ಡ ಕದನವೇ ಏರ್ಪಟ್ಟಿತ್ತು. ಆ ರೋಚಕ ಫೈಟ್ ಮಾಡ್ತಿರೋ ಬೆಂಗಳೂರಿನ 5 ಕ್ಷೇತ್ರಗಳು:

‘ಪಂಚ’ ಕ್ಷೇತ್ರಗಳು * ಯಶವಂತಪುರ * ಮಹಾಲಕ್ಷ್ಮೀ ಲೇಔಟ್ * ಹೊಸಕೋಟೆ * ಕೆ.ಆರ್. ಪುರಂ * ಶಿವಾಜಿನಗರ

ಯಶವಂತಪುರ ವಿಧಾನಸಭಾ ಕ್ಷೇತ್ರ ಎಸ್.ಟಿ. ಸೋಮಶೇಖರ್ v/s ಟಿ.ಎನ್. ಜವರಾಯಿಗೌಡ v/s ಪಿ.ನಾಗರಾಜ್ ಬೆಂಗಳೂರಿನಲ್ಲಿ ಯಶವಂತಪುರ ಹೈವೋಲ್ಟೇಜ್ ಕ್ಷೇತ್ರ. ಇಲ್ಲಿ ಬಿಜೆಪಿ ಅಭ್ಯರ್ಥಿ ಆಗಿರುವ ಅನರ್ಹ ಶಾಸಕ ಎಸ್.ಟಿ. ಸೋಮಶೇಖರ್ ಪ್ರಬಲ ಅಭ್ಯರ್ಥಿ. 2 ಬಾರಿಯೂ ಸೋಮಶೇಖರ್ ವಿರುದ್ಧ ಪರಾಜಿತರಾಗಿದ್ದ ಟಿ.ಎನ್. ಜವರಾಯಿಗೌಡ ಜೆಡಿಎಸ್ ಅಭ್ಯರ್ಥಿಯಾಗಿ 3ನೇ ಬಾರಿಗೆ ಅದೃಷ್ಟ ಪರೀಕ್ಷೆಗಿಳಿದಿದ್ದು, ಈ ಬಾರಿ ಇಬ್ಬರ ಮಧ್ಯೆ ನೇರಾನೇರ ಫೈಟ್ ಇದೆ. ಇಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಹೊಸ ಮುಖ ಪಿ. ನಾಗರಾಜ್ ಮೊದಲ ಬಾರಿಗೆ ಚುನಾವಣಾ ಕಣದಲ್ಲಿದ್ದಾರೆ.

ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಕ್ಷೇತ್ರ ಕೆ.ಗೋಪಾಲಯ್ಯ v/s ಎಂ. ಶಿವರಾಜು v/s ಗಿರೀಶ್ ನಾಶಿ ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಕ್ಷೇತ್ರವೂ ಅಷ್ಟೇ.. ಭಾರಿ ಜಿದ್ದಾಜಿದ್ದಿನಿಂದ ಕೂಡಿದ ಕ್ಷೇತ್ರ.. 2 ಬಾರಿ ಜೆಡಿಎಸ್ ಪಕ್ಷದಿಂದ ಶಾಸಕರಾಗಿದ್ದ ಕೆ. ಗೋಪಾಲಯ್ಯ ಈ ಬಾರಿ ಬಿಜೆಪಿ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಯಾಗಿ ಬಿಬಿಎಂಪಿ ಆಡಳಿತ ಪಕ್ಷದ ನಾಯಕರಾಗಿದ್ದ ಎಂ. ಶಿವರಾಜು ಮೊದಲ ಬಾರಿಗೆ ಅಖಾಡದಲ್ಲಿದ್ದಾರೆ. ಇನ್ನು ಕಾಂಗ್ರೆಸ್ ತೊರೆದಿದ್ದ ಗಿರೀಶ್ ನಾಶಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ.

ಹೊಸಕೋಟೆ ವಿಧಾನಸಭಾ ಕ್ಷೇತ್ರ ಎಂಟಿಬಿ ನಾಗರಾಜ್ v/s ಶರತ್ ಬಚ್ಚೇಗೌಡ v/s ಪದ್ಮಾವತಿ ಸುರೇಶ್ ಹೊಸಕೋಟೆ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಇದೆ. ಕಾಂಗ್ರೆಸ್​ಗೆ ಕೈ ಕೊಟ್ಟು ಹೋಗಿರೋ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ಮತ್ತು ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ಮಧ್ಯೆ ನೇರಾನೇರ ಫೈಟ್ ಇದೆ. ಇವರಿಬ್ಬರ ಅಲೆ ಮಧ್ಯೆ ಕಾಂಗ್ರೆಸ್ ಪದ್ಮಾವತಿ ಸುರೇಶ್ ಪುಟಿದೇಳುವ ತವಕದಲ್ಲಿದ್ದಾರೆ.

ಕೆ.ಆರ್. ಪುರಂ ವಿಧಾನಸಭಾ ಕ್ಷೇತ್ರ ಭೈರತಿ ಬಸವರಾಜ್ v/s ಎಂ.ನಾರಾಯಣಸ್ವಾಮಿ v/s ಸಿ. ಕೃಷ್ಣಮೂರ್ತಿ ಕೆ.ಆರ್.ಪುರಂ ಕ್ಷೇತ್ರದಿಂದ 2 ಬಾರಿ ಶಾಸಕರಾಗಿದ್ದ ಭೈರತಿ ಬಸವರಾಜ್ ಬಿಜೆಪಿಯ ಬಲಿಷ್ಠ ಕ್ಯಾಂಡಿಡೇಟ್. ಇವರಿಗೆ ಎದುರಾಳಿಯಾಗಿ ಕಾಂಗ್ರೆಸ್​ನ ಎಂ.ನಾರಾಯಣಸ್ವಾಮಿ ಮತ್ತು ಜೆಡಿಎಸ್​ನ ಸಿ.ಕೃಷ್ಣಮೂರ್ತಿ ಕಣದಲ್ಲಿದ್ದಾರೆ. ಇವ್ರಿಬ್ಬರೂ ಭೈರತಿ ಬಸವರಾಜ್​ಗೆ ಟಫ್ ಫೈಟ್ ನೀಡದಿದ್ರೂ ಹೋರಾಟ ಮಾಡೋ ಕೆಪಾಸಿಟಿ ಹೊಂದಿದ್ದಾರೆ.

ಶಿವಾಜಿನಗರ ವಿಧಾನಸಭಾ ಕ್ಷೇತ್ರ ರಿಜ್ವಾನ್ ಅರ್ಷದ್ v/s ಎಂ.ಸರವಣ v/s ತನ್ವೀರ್ ಅಹ್ಮದ್ ಶಿವಾಜಿನಗರ ಕ್ಷೇತ್ರದಲ್ಲಿ ಮುಸ್ಲಿಂರ ಪ್ರಾಬಲ್ಯ ಜಾಸ್ತಿ ಇದೆ. ಹೀಗಾಗಿ, ಹಾಲಿ ಎಂಎಲ್​ಸಿ ಆಗಿರುವ ಕಾಂಗ್ರೆಸ್​ ಅಭ್ಯರ್ಥಿ ರಿಜ್ವಾನ್ ಅರ್ಷದ್ ಗೆಲ್ಲೋ ಚಾನ್ಸಸ್ ಹೆಚ್ಚಾಗಿದೆ.. ಅರ್ಷದ್​ಗೆ ಬಿಜೆಪಿ ಅಭ್ಯರ್ಥಿ ಎಂ.ಸರವಣ ಪೈಪೋಟಿ ನೀಡೋ ಸಾಧ್ಯತೆ ಇದೆ. ಇದ್ರ ಮಧ್ಯೆ ಜೆಡಿಎಸ್ ಅಭ್ಯರ್ಥಿ ತನ್ವೀರ್ ಅಹ್ಮದ್ ಕೂಡ ಪ್ರತಿರೋಧ ಒಡ್ಡೋ ಶಕ್ತಿ ಹೊಂದಿದ್ದಾರೆ.

Published On - 7:22 am, Mon, 9 December 19

‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?