ಕೊರೊನಾ ಅಟ್ಟಹಾಸದ ನಡುವೆ ಬೆಂಗಳೂರಿಗೆ ಶಾಕ್.. ರಾಜಧಾನಿಯಲ್ಲಿ ಐಸಿಯು ಬೆಡ್​ಗಳಿಗೆ ಹಾಹಾಕಾರ

ಕೊರೊನಾ ಅಟ್ಟಹಾಸ ಮುಂದುವರಿದಿರುವ ಬೆನ್ನಲ್ಲೇ ಬೆಂಗಳೂರಿಗರಿಗೆ ಶಾಕಿಂಗ್ ಸುದ್ದಿಯೊಂದು ಹೊರಬಿದ್ದಿದೆ. ಸದ್ಯ ಬೆಂಗಳೂರಿನಲ್ಲಿ ಐಸಿಯು ಬೆಡ್​ಗಳಿಗೆ ಆಹಾಕಾರ ಎದುರಾಗಿದೆ. ಮತ್ತೊಂದ್ಕಡೆ ಬ್ರಿಟನ್​ನಿಂದ ಮಹಾಮಾರಿಯನ್ನು ಹೊತ್ತು ತಂದವರು ಕ್ವಾರಂಟೈನ್ ರೂಲ್ಸ್ ಬ್ರೇಕ್ ಮಾಡ್ತಿರೋದು ಭಾರಿ ಆತಂಕ ಸೃಷ್ಟಿಸಿದೆ.

ಕೊರೊನಾ ಅಟ್ಟಹಾಸದ ನಡುವೆ ಬೆಂಗಳೂರಿಗೆ ಶಾಕ್.. ರಾಜಧಾನಿಯಲ್ಲಿ ಐಸಿಯು ಬೆಡ್​ಗಳಿಗೆ ಹಾಹಾಕಾರ
ಪ್ರಾತಿನಿಧಿಕ ಚಿತ್ರ
Follow us
ಆಯೇಷಾ ಬಾನು
| Updated By: KUSHAL V

Updated on:Jan 16, 2021 | 10:12 PM

ಬೆಂಗಳೂರು: ವಿಕ್ಟೋರಿಯಾ ಕೊರೊನಾ ರೋಗಿಗಳ ಹಾಟ್​ಸ್ಪಾಟ್ ಆಗಿತ್ತು. ಅತಿ ಹೆಚ್ಚು ಜನ ಕೊವೀಡ್ ಟೆಸ್ಟ್ ಮಾಡಿಸಿದ್ದು ಅಲ್ಲೇ, ಸೋಂಕಿತರು ಚಿಕಿತ್ಸೆ ಪಡೆದಿದ್ದೂ ಅಲ್ಲೇ. ಆದ್ರೀಗ ಈಡೀ ದೇಶಕ್ಕೆ ವ್ಯಾಕ್ಸಿನ್ ಎಂಟ್ರಿ ಕೊಟ್ಟಿದೆ. ಅದ್ರಂತೆ ಇಂದು ಕರುನಾಡಿನಲ್ಲೂ ಫ್ರಂಟ್ ಲೈನ್ ವಾರಿಯರ್ಸ್ ಲಸಿಕೆ ಪಡೆಯಲಿದ್ದಾರೆ. ಇಷ್ಟಾದ್ರೂ ಜನಕ್ಕೆ ಭಯ ಹೋಗಿಲ್ಲ. ಕಳೆದ 1 ತಿಂಗಳಿನಿಂದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಔಟ್ ಪೇಷೆಂಟ್​ಗಳಿಗೆ ಚಿಕಿತ್ಸೆ ನೀಡಲಾಗ್ತಿದೆ. ಆದ್ರೆ ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳು ಬರ್ತಿಲ್ಲ. ಎಲ್ರೂ ಜಯದೇವ ಆಸ್ಪತ್ರೆ ಕಡೆ ಮುಖ ಮಾಡಿದ್ದಾರೆ. ಮತ್ತೊಂದ್ಕಡೆ ಐಸಿಯು ಬೆಡ್​ಗಳಿಗೂ ಆಹಾಕಾರ ಎದುರಾಗಿಬಿಟ್ಟಿದೆ.

ವಿಕ್ಟೋರಿಯಾಗೆ ಹೋಗಲು ರೋಗಿಗಳ ಹಿಂದೇಟು! ಭಾರತದ ಅತಿ ದೊಡ್ಡ ಕಾರ್ಡಿಯಾಕ್ ಆಸ್ಪತ್ರೆ ಜಯದೇವ. 150 ಐಸಿಯು ಬೆಡ್​ಗಳು ಇಲ್ಲಿವೆ. ಆದ್ರೆ ಕಳೆದ 15 ದಿನದಿಂದ ಬೆಡ್​ಗಳು ಫುಲ್ ಆಗಿವೆ. ಬೆಂಗಳೂರು ಮೈಸೂರು, ಕಲಬುರಗಿಯಲ್ಲಿ ಐಸಿಯು ಬೆಡ್​ಗಳು ಕಂಪ್ಲೀಟ್ ಫಿಲ್ ಆಗಿದ್ದು, ನಿರ್ದೇಶಕರು ಸಹ ಒತ್ತಡ ಹೆಚ್ಚಾಗಿದೆ ಅಂತಿದ್ದಾರೆ. ಪ್ರತಿದಿನ 1500ಕ್ಕೂ ಹೆಚ್ಚು ರೋಗಿಗಳು ಆಸ್ಪತ್ರೆಗೆ ಬರ್ತಿದ್ದಾರೆ. ಶೇ 70 ರಷ್ಟು ಜನ ರೋಗಿಗಳು ಹೃದಯಸಂಬಂಧಿ ಕಾಯಿಲೆ ಇರೋರು ಬರ್ತಿದ್ದಾರೆ. ಅದೇ ರೀತಿ, ಶೇ 30ರಷ್ಟು ಜನ ಬೇರೆ ಬೇರೆ ಅಂಗಾಂಗದ ಆಪರೇಷನ್, ಬ್ರೈನ್ ಸರ್ಜರಿ, ಅರ್ನಿ ಆಪರೇಷನ್, ಇಎನ್​ಟಿ ಸರ್ಜರಿ, ಅಬ್ಡಾರ್ಮನಲ್ ಸರ್ಜರಿಗೆ ಜಯದೇವ ಆಸ್ಪತ್ರೆಗೆ ದಾಖಲಾಗ್ತಿದ್ದಾರೆ. ಬೇರೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯೋ ಮೊದಲು ಪ್ರತಿ ರೋಗಿಗೆ ಕಾರ್ಡಿಯಾಕ್ ಚೆಕಪ್ ಬೇಕು, ಹೀಗಾಗಿ ಎಲ್ರೂ ಜಯದೇವಗೆ ಬರ್ತಿದ್ದಾರಂತೆ.

ಬಡವರು ಹಾಗೂ ಮಧ್ಯಮ ವರ್ಗದವರು ಹೆಚ್ಚಾಗಿ ಸರ್ಕಾರಿ ಆಸ್ಪತ್ರೆ ಅವಲಂಬಿಸಿದ್ದಾರೆ. ಆದ್ರೀಗ ವಿಕ್ಟೋರಿಯ ಆಸ್ಪತ್ರೆಗೆ ರೋಗಿಗಳು ಹೋಗ್ತಿಲ್ಲ. ಅಲ್ಲಿ ಕೊವೀಡ್ ರೋಗಿಗಳೇ ಹೆಚ್ಚು ಇದ್ದ ಕಾರಣ ಯಾರೂ ಸಹ ವಿಕ್ಟೋರಿಯಾಗೆ ಹೋಗೋಕೆ ಮುಂದಾಗ್ತಿಲ್ಲ. ಹೀಗಾಗಿ ವಿಕ್ಟೋರಿಯಾಗೆ ಹೋಗ್ಬೇಕಿದ್ದ ರೋಗಿಗಳೆಲ್ಲಾ ಜಯದೇವಗೆ ಹೋಗುತ್ತಿದ್ದಾರೆ. ಅದೇ ರೀತಿ ಕೊರೊನಾ ಟೈಮಲ್ಲಿ ರೆಗ್ಯುಲರ್ ಚೆಕಪ್ ಮಾಡಿಸಿದ ರೋಗಿಗಳು ಸಹ ಒಟ್ಟೊಟ್ಟಿಗೆ ಆಸ್ಪತ್ರೆಗೆ ಹೋಗ್ತಿದ್ದಾರೆ. ಈ ಹಿನ್ನೆಲೆ ಬೆಡ್​ಗಳು ಫುಲ್ ಆಗಿವೆ.

ಕ್ವಾರಂಟೈನ್ ನಿಯಮದ ಬಗ್ಗೆ ಕೇರ್ ಇಲ್ಲ! ಚೀನಾ ಭೂತಕ್ಕೆ ವ್ಯಾಕ್ಸಿನ್ ಬಂದಿರೋ ಖುಷಿ ಬಂದ್ಕಡೆಯಾದ್ರೆ, ಬ್ರಿಟನ್ ವೈರಸ್ ಬೇಜಾನ್ ಕ್ವಾಟ್ಲೆ ಕೊಡ್ತಿದೆ. ಅದ್ರಲ್ಲೂ ರೂಪಾಂತರಿ ವೈರಸ್ ಹೊತ್ತು ಬೆಂಗಳೂರಿಗೆ ಬರ್ತಿರೋ ಬ್ರಿಟನ್ ರಿಟರ್ನ್ಸ್ ನಿದ್ದೆ ಮಾಡೋಕೂ ಆಗುತ್ತಿಲ್ಲ. ಮೊನ್ನೆಯಿಂದ ಬ್ರಿಟನ್ ಫ್ಲೈಟ್​ಗಳಿಗೆ ಗ್ರಿನ್ ಸಿಗ್ನಲ್ ನೀಡಿದ್ದು, ಬಂದವರನ್ನ ಏರ್​ಪೋರ್ಟ್ನಲ್ಲಿ ಟೆಸ್ಟ್ ಮಾಡಿ ಮನೆಗೆ ಕಳುಹಿಸುತ್ತಿದ್ದಾರೆ. ಹಾಗಂತ ಇವ್ರಿಗೆ ನೆಗೆಟಿವ್ ಬಂದಿಲ್ಲ, 14 ದಿನದಲ್ಲಿ ಮತ್ತೆ ಇವರಲ್ಲಿ ವೈರಸ್​ನ ಲಕ್ಷಣಗಳು ಕಂಡು ಬರಬಹುದು. ಹೀಗಾಗಿ 14 ದಿನಗಳು ಕ್ವಾರಂಟೈನ್ ಕಡ್ಡಾಯ ಅಂತಾ ಬಿಬಿಎಂಪಿ ಹೇಳಿ ಕಳುಹಿಸಿದ್ರು.

ಬ್ರಿಟನ್​ನಿಂದ ಬಂದವರು ಕ್ವಾರಂಟೈನ್ ರೂಲ್ಸ್ ಬ್ರೇಕ್ ಮಾಡ್ತಿದ್ದಾರಂತೆ. ಬೇಕಾಬಿಟ್ಟಿಯಾಗಿ ಸಾರ್ವಜನಿಕರ ಮಧ್ಯೆ ಓಡಾಡ್ತಿದ್ದಾರೆ. ಈಗಾಗಲೇ ಬ್ರಿಟನ್​ನಿಂದ ಬೆಂಗಳೂರಿಗೆ ಬಂದವರ ಪೈಕಿ 27 ಜನರಿಗೆ ಕೊರೊನಾ ವೈರಸ್ ಇರೋದು ಪತ್ತೆಯಾಗಿದೆ. 6 ಜನರಲ್ಲಿ ಬ್ರಿಟನ್ ವೈರಸ್ ಇರೋದು ಪಕ್ಕಾ ಆಗಿದೆ. ನಗರದಲ್ಲಿ 1433 ಜನ ಕ್ವಾರಂಟೈನ್​ನಲ್ಲಿದ್ದು ಇನ್ನೂ ಕೆಲವರು ಬ್ರಿಟನ್ ನಿಂದ ಬೆಂಗಳೂರಿಗೆ ಬರ್ತಿದ್ದಾರೆ. ಬಟ್, ಕ್ವಾರಂಟೈನ್​ನಲ್ಲಿ ಇರಬೇಕಿದ್ದ ಜನರು, ರೂಲ್ಸ್ ಬ್ರೇಕ್ ಮಾಡಿ, ಸಾರ್ವಜನಿಕರ ನಡುವೆ ಎಗ್ಗಿಲ್ಲದೆ ಓಡಾಡ್ತಿದ್ದಾರೆ. ಇಂತಹವರ ಮೇಲೆ ಕಠಿನ ಕ್ರಮ ಜರುಗಿಸಲು ಬಿಬಿಎಂಪಿ ಸಜ್ಜಾಗಿದೆ.

ಒಟ್ನಲ್ಲಿ ಕೊರೊನಾ ಕಂಟಕದಿಂದ ಬಚಾವ್ ಆಗಲು ಶತಪ್ರಯತ್ನ ನಡೆಸುತ್ತಿದ್ದರೂ, ಕೆಲವರು ಮಾಡುತ್ತಿರುವ ತಪ್ಪಿನಿಂದ ಹಲವರು ಸಂಕಷ್ಟ ಅನುಭವಿಸುವಂತಾಗಿದೆ. ಒಂದ್ಕಡೆ ಐಸಿಯು ಬೆಡ್​ಗೂ ಕೊರತೆ ಎದುರಾಗುವ ಕಾಲ ಬಂದಿದ್ದರೂ, ಜನ ಕ್ವಾರಂಟೈನ್ ನಿಯಮದ ಬಗ್ಗೆ ಅಸಡ್ಡೆ ತೋರುತ್ತಿದ್ದಾರೆ. ಹೀಗಾಗಿ ಬಿಬಿಎಂಪಿ ಇಂತಹವರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದ್ದು, ಮುಂದೇನಾಗುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.

ಬೆಂಗಳೂರಿಗೆ ಕಾಡುತ್ತಿದೆ ICU ಕೊರತೆ, ಮುಂದೆ ಇದೆ ಕಂಟಕ..

Published On - 6:57 am, Sat, 16 January 21

ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!