ಬೆಂಗಳೂರು: ಹಿರಿಯ ನಟಿ ಸುಧಾರಾಣಿ ಅವರ ತಂದೆ ವಿಧಿವಶರಾಗಿದ್ದಾರೆ. ಸುಧಾರಾಣಿ ಅವರ ತಂದೆ ಹೆಚ್.ಎಸ್.ಗೋಪಾಲಕೃಷ್ಣ (93) ವಿಧಿವಶರಾಗಿದ್ದಾರೆ. ನಟಿ ತಂದೆ ವಯೋಸಹಜ ಕಾಯಿಲೆಯಿಂದ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.
ನಗರದ ಮಲ್ಲೇಶ್ವರಂನ ನಿವಾಸದಲ್ಲಿ ಸುಧಾರಾಣಿ ತಂದೆ ನಿಧನರಾಗಿದ್ದು ನಾಳೆ ಮಧ್ಯಾಹ್ನ 12 ಗಂಟೆಗೆ ಅಂತ್ಯಸಂಸ್ಕಾರ ನೆರವೇರಿಸಲಾಗುವುದು ಎಂದು ತಿಳಿದುಬಂದಿದೆ. ಸತ್ಯ ಹರಿಶ್ಚಂದ್ರ ಘಾಟ್ನಲ್ಲಿ ನಾಳೆ ಅಂತ್ಯಸಂಸ್ಕಾರ ನೆರವೇರಿಸಲಾಗುವುದು ಎಂಬ ಮಾಹಿತಿ ಸಿಕ್ಕಿದೆ.