ಲಾಕ್​ಡೌನ್​ ವೇಳೆ ಪೊಲೀಸರ ಕಾರ್ಯಕ್ಕೆ ಶ್ಲಾಘನೆ, ದೊಡ್ಡ ಗಣೇಶ ದೇವಸ್ಥಾನದಲ್ಲಿ ವಿಶೇಷ ಪೂಜೆ

ಬೆಂಗಳೂರು: ಮಹಾಮಾರಿ ಕೊರೊನಾ ವೈರಸ್​ ಲಾಕ್​ಡೌನ್ ವೇಳೆ ಪೊಲೀಸರು ಮಾಡಿರುವ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಬಸವನಗುಡಿಯ ದೊಡ್ಡ ಗಣೇಶ ದೇವಸ್ಥಾನದಲ್ಲಿ ಪೊಲೀಸರ ಶ್ಲಾಘನೀಯ ಕೆಲಸಕ್ಕೆ ಪುರೋಹಿತ ವೃಂದದವರು ವಿಶೇಷ ಪೂಜೆ ಮಾಡಿದ್ದಾರೆ. ಇದೇ ವೇಳೆ ನಗರದ ಪೊಲೀಸ್ ಆಯುಕ್ತ ಭಾಸ್ಕರ್ ರಾವ್​ಗೆ ಆಶೀರ್ವದಿಸಿದ್ದಾರೆ. ದೊಡ್ಡ ಗಣಪತಿ ದೇವಸ್ಥಾನಕ್ಕೂ, ನನಗೂ ಬಾಲ್ಯದಿಂದಲೂ ಸಂಬಂಧವಿದೆ. ಕೊರೊನಾ ಗಂಡಾಂತರದ ಒಂದು ಹಂತದಿಂದ ಪಾರು ಆಗಿದ್ದೇವೆ. ಹೀಗಾಗಿ ಪೊಲೀಸರ ಪರವಾಗಿ ಹಾಗೂ ನನ್ನ ಪರವಾಗಿ ಧನ್ಯವಾದ ಹೇಳಲು ಬಂದಿದ್ದೇನೆ ಎಂದು ಪೊಲೀಸ್ […]

ಲಾಕ್​ಡೌನ್​ ವೇಳೆ ಪೊಲೀಸರ ಕಾರ್ಯಕ್ಕೆ ಶ್ಲಾಘನೆ, ದೊಡ್ಡ ಗಣೇಶ ದೇವಸ್ಥಾನದಲ್ಲಿ ವಿಶೇಷ ಪೂಜೆ
Follow us
ಸಾಧು ಶ್ರೀನಾಥ್​
|

Updated on: Jun 09, 2020 | 4:01 PM

ಬೆಂಗಳೂರು: ಮಹಾಮಾರಿ ಕೊರೊನಾ ವೈರಸ್​ ಲಾಕ್​ಡೌನ್ ವೇಳೆ ಪೊಲೀಸರು ಮಾಡಿರುವ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಬಸವನಗುಡಿಯ ದೊಡ್ಡ ಗಣೇಶ ದೇವಸ್ಥಾನದಲ್ಲಿ ಪೊಲೀಸರ ಶ್ಲಾಘನೀಯ ಕೆಲಸಕ್ಕೆ ಪುರೋಹಿತ ವೃಂದದವರು ವಿಶೇಷ ಪೂಜೆ ಮಾಡಿದ್ದಾರೆ. ಇದೇ ವೇಳೆ ನಗರದ ಪೊಲೀಸ್ ಆಯುಕ್ತ ಭಾಸ್ಕರ್ ರಾವ್​ಗೆ ಆಶೀರ್ವದಿಸಿದ್ದಾರೆ.

ದೊಡ್ಡ ಗಣಪತಿ ದೇವಸ್ಥಾನಕ್ಕೂ, ನನಗೂ ಬಾಲ್ಯದಿಂದಲೂ ಸಂಬಂಧವಿದೆ. ಕೊರೊನಾ ಗಂಡಾಂತರದ ಒಂದು ಹಂತದಿಂದ ಪಾರು ಆಗಿದ್ದೇವೆ. ಹೀಗಾಗಿ ಪೊಲೀಸರ ಪರವಾಗಿ ಹಾಗೂ ನನ್ನ ಪರವಾಗಿ ಧನ್ಯವಾದ ಹೇಳಲು ಬಂದಿದ್ದೇನೆ ಎಂದು ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ತಿಳಿಸಿದ್ದಾರೆ.