ಸಿಂಗಲ್ ಚಾರ್ಜ್​ನಲ್ಲಿ ದೂರ ಪ್ರಯಾಣ ಮಾಡಿ: ಸೆಡಾನ್ ಮೇ ಕಾರ್

ಸಿಂಗಲ್ ಚಾರ್ಜ್​ನಲ್ಲಿ ಒಂದು ರಾತ್ರಿಯಿಡೀ ಪ್ರಯಾಣ ಮಾಡಬಹುದಾದಂಥ ಸೇಡನ್ ಮೇ ಕಾರುಗಳು 2021ರ ಹೊತ್ತಿಗೆ ಬೆಂಗಳೂರು ಮತ್ತು ದೆಹಲಿಯಲ್ಲಿ ಲಭ್ಯವಾಗಲಿವೆ.

ಸಿಂಗಲ್ ಚಾರ್ಜ್​ನಲ್ಲಿ ದೂರ ಪ್ರಯಾಣ ಮಾಡಿ: ಸೆಡಾನ್ ಮೇ ಕಾರ್
ಸೆಡಾನ್ ಕಾರ್
Follow us
guruganesh bhat
|

Updated on: Dec 18, 2020 | 3:26 PM

ಸಿಂಗಲ್ ಚಾರ್ಜ್​ನಲ್ಲಿ ಒಂದು ರಾತ್ರಿಯಿಡೀ ಪ್ರಯಾಣ ಮಾಡಬಹುದಾದಂಥ ಸೆಡಾನ್ ಮೇ ಕಾರುಗಳು 2021ರ ಹೊತ್ತಿಗೆ ಬೆಂಗಳೂರು ಮತ್ತು ದೆಹಲಿಯಲ್ಲಿ ಲಭ್ಯವಾಗಲಿವೆ.

ಸಿಂಗಲ್ ಚಾರ್ಜ್​ನಲ್ಲಿ 504 ಕಿ.ಮೀ. ಕ್ರಮಿಸಬಹುದಾದ ಈ ಎಲೆಕ್ಟ್ರಿಕ್ ಕಾರನ್ನು ಬೆಂಗಳೂರಿನ ಸ್ಟಾರ್ಟಪ್ ಕಂಪೆನಿಯೊಂದು ತಯಾರಿಸಿದೆ. ಒಂದು ತಾಸಿಗೆ 196 ಕಿ.ಮೀ. ವೇಗದಲ್ಲಿ ಚಲಿಸಬಹುದಾದ ಈ ಕಾರು 96 ಕಿಲೋ ವ್ಯಾಟ್ಸ್ ಲಿಥಿಯಂ ಅಯಾನ್ ಬ್ಯಾಟರಿ ಪ್ಯಾಕ್, 200 ಬ್ರೇಕ್ ಹಾರ್ಸ್​ ಪವರ್ ಅನ್ನು (ಬಿಎಚ್​ಪಿ) ಹೊಂದಿದೆ.

ಒಮ್ಮೆ ಬ್ಯಾಟರಿ ಚಾರ್ಜ್ ಮಾಡಿದರೆ 508 ಕಿ.ಮೀ ತನಕವೂ ಕಾರಿನಲ್ಲಿ ಕ್ರಮಿಸಬಹುದಾಗಿದೆ. ‘ನಮ್ಮ ಬ್ಯಾಟರಿ ಪ್ಯಾಕ್ ಟೆಸ್ಟಿಂಗ್ ಸಮಯದಲ್ಲಿ 600 ಕಿ.ಮೀ ತನಕವೂ ಓಡಿದೆ. ಗ್ರಾಹಕರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಅಧಿಕ ಸಾಮರ್ಥ್ಯವುಳ್ಳ ಬ್ಯಾಟರಿ ರೂಪಿಸುವಲ್ಲಿ ಬಹಳ ಶ್ರಮಿಸಿದ್ದೇವೆ. ಈ ಬ್ಯಾಟರಿ ಪ್ಯಾಕ್ 5,000 ಸೆಲ್​ಗಳನ್ನು ಹೊಂದಿದ್ದು ವರ್ಲ್ಡ್ ಲೀಡಿಂಗ್ ಸೇಫ್ಟಿ ಸ್ಟ್ಯಾಂಡರ್ಡ್ ಹೊಂದಿದೆ’ ಎನ್ನುತ್ತಾರೆ ಪ್ರವೈಗ್ ಡೈನಮಿಕ್ಸ್​ನ ಸಹಸಂಸ್ಥಾಪಕರಾದ ಸಿದ್ಧಾರ್ಥ ಬಗ್ರಿ.

ಈ ಕಾರಿನ ತಯಾರಿಕೆಗೆ ತುಸು ಹೆಚ್ಚೇ ಖರ್ಚಾಗುತ್ತದೆ ನಿಜ. ಆದರೆ ತಯಾರಿಸುವ ಪ್ರಕ್ರಿಯೆಗೆ ಕಡಿಮೆ ಸಮಯ ತೆಗೆದುಕೊಳ್ಳುತ್ತದೆ. ಕಾರಿನಲ್ಲೇ ನೀವು ಆಫೀಸ್ ಕೆಲಸವನ್ನು ಮಾಡಬಹುದು. 15 ಇಂಚಿನ ಲ್ಯಾಪ್​ಟಾಪ್​ಗೆ ಅನುಕೂಲವಾಗುವಂಥ ಡೆಸ್ಕ್, ಪವರ್ ಪಾಯಿಂಟ್, ಎರಡು ಯುಎಸ್​ಬಿ ಪೋರ್ಟ್​ ಹೊಂದಿದ್ದು ಆಫೀಸು ತಲುಪುವ ತನಕವೂ ನಿರಾಯಾಸವಾಗಿ ಕೆಲಸ ಮಾಡಬಹುದಾಗಿದೆ.

ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?