10 ಸಾವಿರ ರೂಪಾಯಿ ಒಳಗೆ ಸಿಗೋ ಅತ್ಯುತ್ತಮ ಮೊಬೈಲ್​​ಗಳು ಯಾವುವು? ಇಲ್ಲಿದೆ ಮಾಹಿತಿ

| Updated By: ಸಾಧು ಶ್ರೀನಾಥ್​

Updated on: Feb 04, 2021 | 3:29 PM

Best smartphones Under 10,000: ಇತ್ತೀಚೆಗೆ ಆ್ಯಂಡ್ರಾಯ್ಡ್​ ಬಳಕೆ ಹೆಚ್ಚುತ್ತಿದೆ. 10 ಸಾವಿರ ರೂಪಾಯಿ ಒಳಗೆ ಸಾಕಷ್ಟು ಮೊಬೈಲ್​ಗಳು ಸಿಗುತ್ತವೆ. ಹಾಗಾದರೆ, ಈ ರಿತಿ ಸಿಗುವ ಅತ್ಯುತ್ತಮ ಮೊಬೈಲ್​ಗಳು ಯಾವವು? ಆ ಬಗ್ಗೆ ಇಲ್ಲಿದೆ ಮಾಹಿತಿ.

10 ಸಾವಿರ ರೂಪಾಯಿ ಒಳಗೆ ಸಿಗೋ ಅತ್ಯುತ್ತಮ ಮೊಬೈಲ್​​ಗಳು ಯಾವುವು? ಇಲ್ಲಿದೆ ಮಾಹಿತಿ
ಸಾಂದರ್ಭಿಕ ಚಿತ್ರ
Follow us on

ಆ್ಯಂಡ್ರಾಯ್ಡ್​ ಮೊಬೈಲ್​ಗಳ ಬೆಲೆ ದಿನ ಕಳೆದಂತೆ ಕಡಿಮೆ ಆಗುತ್ತಲೇ ಇದೆ. ಅಧಿಕ ಫೀಚರ್​ ಇರುವ ಮೊಬೈಲ್​ಗಳು ನಿಮಗೆ ಕಡಿಮೆ ಬೆಲೆಯಲ್ಲಿ ಲಭ್ಯವಾಗುತ್ತಿದೆ. ಹೀಗಾಗಿಯೇ ಇತ್ತೀಚೆಗೆ ಆ್ಯಪಲ್​ಗಿಂತ ಆ್ಯಂಡ್ರಾಯ್ಡ್​ ಮೊಬೈಲ್​ಗೆ ಬೇಡಿಕೆ ಹೆಚ್ಚು. ಕೆಲವರು 10 ಸಾವಿರ ರೂಪಾಯಿ ಒಳಗೆ ಸಿಗುವ ಮೊಬೈಲ್​ ಕೊಂಡುಕೊಳ್ಳಲು ಆದ್ಯತೆ ನೀಡುತ್ತಾರೆ. ಆದರೆ, ಯಾವ ಮೊಬೈಲ್​ ಉತ್ತಮ ಎನ್ನುವ ಪ್ರಶ್ನೆಗೆ ಅವರಲ್ಲಿ ಉತ್ತರ ಇರುವುದಿಲ್ಲ. ಹಾಗಾದರೆ, 10 ಸಾವಿರ ರೂಪಾಯಿ ಒಳಗೆ ಸಿಗುವ ಅತ್ಯುತ್ತಮ ಮೊಬೈಲ್​ಗಳು ಯಾವುವು? ಆ ಬಗ್ಗೆ ಇಲ್ಲಿದೆ ಮಾಹಿತಿ.

Poco M2

10 ಸಾವಿರ ರೂಪಾಯಿ ಒಳಗೆ ಸಿಗುತ್ತಿರುವ ಅತ್ಯುತ್ತಮ ಮೊಬೈಲ್​ಗಳ ಪೈಕಿ Poco M2 ಕೂಡ ಒಂದು. ಈ ಮೊಬೈಲ್​ ಬೆಲೆ 9,999 ರೂಪಾಯಿ. 6.53 ಇಂಚಿನ ಡಿಸ್​ಪ್ಲೇ, ಎಫ್​ಎಚ್​ಡಿ+ಐಪಿಎಸ್​ ಎಲ್​ಸಿಡಿ ಸ್ಕ್ರೀನ್​ ಈ ಮೊಬೈಲ್​ಗೆ ಇದೆ. 6 ಜಿಬಿ RAM ಮತ್ತು 64 ಜಿಬಿ ಸ್ಟೋರೆಜ್​ ಈ ಮೊಬೈಲ್​ನಲ್ಲಿದೆ. 128 ಜಿಬಿ ಸ್ಟೋರೆಜ್​ ಬೇಕಾದರೆ, ನೀವು ಒಂದು ಸಾವಿರ ರೂಪಾಯಿ ಹೆಚ್ಚು ಪಾವತಿಸಬೇಕು.

ಇನ್ನು, ಕ್ಯಾಮೆರಾ ವಿಚಾರಕ್ಕೆ ಬರುವುದಾದರೆ, ಮುಖ್ಯ ಕ್ಯಾಮೆರಾ 13ಎಂಪಿ ಇದೆ. ಫ್ರಂಟ್​ ಕ್ಯಾಮೆರಾ 8ಎಂಪಿ ಇದೆ. ಹೀಗಾಗಿ ಉತ್ತಮ ಫೋಟೋಗಳನ್ನು ನೀವು ಇದರಲ್ಲಿ ನಿರೀಕ್ಷಿಸಬಹುದು. 5,000 Gadಎಂಎಎಚ್​ ಬ್ಯಾಟರಿ ಇದರಲ್ಲಿ ಲಭ್ಯವಿದೆ.

Realme Narzo 20A
ರಿಯಲ್​ ಮಿ Narzo 20A ಉತ್ತಮ ಬಜೆಟ್​ ಫೋನ್​. ಗೇಮ್​ ಆಡಲು ಈ ಮೊಬೈಲ್​ ಹೇಳಿ ಮಾಡಿಸಿದಂತಿದೆ. ಈ ಮೊಬೈಲ್​ನ ಬೆಲೆ ಕೇವಲ 8,499 ರೂಪಾಯಿ. ಈ ಮೊಬೈಲ್​ 6.5 ಇಂಚಿನ ಎಚ್​​ಡಿ ಡಿಸ್​ಪ್ಲೇ ಹೊಂದಿದೆ. 3/4 RAM ಎರಡರಲ್ಲೂ ಮೊಬೈಲ್​ ಲಭ್ಯವಿದೆ. 3GB/32GB ಮೊಬೈಲ್​ಗೆ 8,499 ರೂಪಾಯಿ ಹಾಗೂ 4GB/64GBಗೆ 9,499 ರೂಪಾಯಿ.

Narzo 20A ಉತ್ತಮ ಕ್ಯಾಮೆರಾ ಹೊಂದಿದೆ. ಮುಖ್ಯ ಕ್ಯಾಮೆರಾ 12ಎಂಪಿ ಇದ್ದರೆ, ಫ್ರಂಟ್​ ಕ್ಯಾಮೆರಾ 8ಎಂಪಿ ಇದೆ. ವಿಶೇಷ ಎಂದರೆ ಈ ಮೊಬೈಲ್​ ಮೂಲಕ ನೀವು 4ಕೆ ವಿಡಿಯೋವನ್ನು ಶೂಟ್​ ಮಾಡಬಹುದು.

Samsung Galaxy M02s
ಸ್ಯಾಮ್​ಸಂಗ್​ ಮೊಬೈಲ್​ನಲ್ಲಿ ಸಿಗುತ್ತಿರುವ ಕಡಿಮೆ ಬೆಲೆಯ ಅತ್ಯುತ್ತಮ ಮೊಬೈಲ್​ಗಳ ಸಾಲಿನಲ್ಲಿ Galaxy M02s ಕೂಡ ಒಂದು. 3GB/32GB ಪಿಚರ್​ ಇರುವ ಮೊಬೈಲ್​ಗೆ 8,999 ರೂಪಾಯಿ ಇದ್ದರೆ, 4GB/64GB ಫೀಚರ್​ ಇರುವ ಮೊಬೈಲ್​ಗೆ 9,999 ರೂಪಾಯಿ. 6.5 ಇಂಚಿನ ಎಚ್​ಡಿ+ಪಿಎಲ್​ಎಸ್​ ಐಪಿಎಸ್​ ಸ್ಕ್ರೀನ್​ಅನ್ನು ಇದು ಹೊಂದಿದೆ.

ಕ್ಯಾಮೆರಾ ವಿಚಾರಕ್ಕೆ ಬಂದರೆ 13ಎಂಪಿ ಪ್ರೈಮರಿ ಕ್ಯಾಮೆರಾ ಜತೆಗೆ 2ಎಂಪಿ ಮ್ಯಾಕ್ರೋ ಸೆನ್ಸಾರ್​ ಮತ್ತು ಎಂಪಿ ಆಳ ಸೆನ್ಸಾರ್​ ಇದಕ್ಕಿದೆ. 5 ಎಂಪಿ ಫ್ರಂಟ್​ ಕ್ಯಾಮೆರಾ ಇದಕ್ಕಿದೆ. 5000ಎಂಎಎಚ್​ ಬ್ಯಾಟರಿ ಇದಕ್ಕಿದೆ.

 

ಲಕ್ಷಾಂತರ Airtel​ ಮೊಬೈಲ್​ ಗ್ರಾಹಕರ ಮಾಹಿತಿ ಸೋರಿಕೆ.. ಖಾಸಗಿ ಡೇಟಾ ಮಾರಾಟಕ್ಕೆ ಇಟ್ಟ ಹ್ಯಾಕರ್ಸ್​