ಕೇಂದ್ರದ ಕೃಷಿ ಕಾಯ್ದೆ ವಿರುದ್ಧ ರೈತರ ರಣಕಹಳೆ, ಸಿಲಿಕಾನ್ ಸಿಟಿಗೆ ತಟ್ಟದ ಬಂದ್ ಬಿಸಿ
ಸಿಲಿಕಾನ್ ಸಿಟಿಗೆ ಶನಿವಾರವಷ್ಟೇ ಬಂದ್ ಬಿಸಿ ತಟ್ಟಿತ್ತು.. ಕನ್ನಡಪರ ಸಂಘಟನೆಗಳು ಗುಟುರು ಹಾಕಿದ್ವು. ಒಂದೆರಡು ಗಂಟೆ ಪ್ರತಿಭಟನೆ ನಡೆಸಿದ್ವು. ಇದರ ನಡುವೆ ಇಂದು ಮತ್ತೊಮ್ಮೆ ಬಂದ್ ಮಾಡಲಾಗಿದ್ದು ಇಂದು ಕೂಡ ನಗರದಲ್ಲಿ ಬಂದ್ ಬಿಸಿ ಕಾಣುತ್ತಿಲ್ಲ.
ಬೆಂಗಳೂರು: ಸಿಲಿಕಾನ್ ಸಿಟಿಗೆ ಶನಿವಾರವಷ್ಟೇ ಬಂದ್ ಬಿಸಿ ತಟ್ಟಿತ್ತು.. ಕನ್ನಡಪರ ಸಂಘಟನೆಗಳು ಗುಟುರು ಹಾಕಿದ್ವು. ಒಂದೆರಡು ಗಂಟೆ ಪ್ರತಿಭಟನೆ ನಡೆಸಿದ್ವು. ಇದರ ನಡುವೆ ಇಂದು ಮತ್ತೊಮ್ಮೆ ಬಂದ್ ಮಾಡಲಾಗಿದ್ದು ಇಂದು ಕೂಡ ನಗರದಲ್ಲಿ ಬಂದ್ ಬಿಸಿ ಅಷ್ಟಾಗಿ ಕಾಣುತ್ತಿಲ್ಲ.
ಕೃಷಿ ತಿದ್ದುಪಡಿ ಕಾಯ್ದೆ ವಾಪಸ್‌ಗೆ ಆಗ್ರಹಿಸಿ ಭಾರತ್ ಬಂದ್ ಮಾಡಲಾಗುತ್ತಿದೆ. ಆದರೆ ಬೆಂಗಳೂರಿನ ಮೆಜೆಸ್ಟಿಕ್‌ನಲ್ಲಿ ಬಸ್‌ಗಳ ಸಂಚಾರ ಯಥಾಸ್ಥಿತಿ ಇದೆ. ಎಂದಿನಂತೆ KSRTC, BMTC ಬಸ್‌ಗಳು ಸಂಚರಿಸುತ್ತಿವೆ. ಆಟೋ, ಓಲಾ, ಉಬರ್ ಸೇವೆಯೂ ಎಂದಿನಂತೆ ಲಭ್ಯವಿದೆ.
ಭಾರತ್ ಬಂದ್‌ಗೆ ಕೆ.ಆರ್.ಮಾರ್ಕೆಟ್ ಸಂಘಟನೆ ಬೆಂಬಲ ಸೂಚಿಸಿತ್ತು. ಆದ್ರೆ ಎಂದಿನಂತೆ ಕೆ.ಆರ್.ಮಾರುಕಟ್ಟೆ ಓಪನ್ ಆಗಿದೆ. ಬೆಳಂ ಬೆಳಗ್ಗೆಯೇ ಹೂವು, ಹಣ್ಣು, ತರಕಾರಿ ಖರೀದಿಯಲ್ಲಿ ಜನ ತೊಡಗಿದ್ದಾರೆ.
9 ಗಂಟೆ ಬಳಿಕ ಕೆ.ಆರ್. ಮಾರ್ಕೆಟ್ ಬಂದ್: ಇನ್ನು ರೈತರ ಹೋರಾಟಕ್ಕೆ ವ್ಯಾಪಾರಸ್ಥರ ಬೆಂಬಲವಿದೆ. ರೈತ ದೇಶದ ಬೆನ್ನೆಲುಬು. ರೈತ ಇದ್ರೆ ದೇಶ. ಸದ್ಯ ನಾವು ತಂದಿರೊ ಹೂವು, ಹಣ್ಣು, ತರಕಾರಿ ವ್ಯಾಪಾರ ಮಾಡ್ತಾ ಇದ್ದೀವಿ. 9 ಗಂಟೆ ಬಳಿಕ ಎಲ್ಲವನ್ನೂ ಬಂದ್ ಮಾಡ್ತೀವಿ. ಮದುವೆ ಸಮಾರಂಭ ಇರೊದಕ್ಕೆ ವ್ಯಾಪಾರ ಮಾಡ್ತಾ ಇದ್ದೀವಿ. ಬಳಿಕ ರೈತರ ಹೋರಾಟಕ್ಕೆ ಸಾಥ್ ನೀಡೊದಾಗಿ ವ್ಯಾಪಾರಸ್ಥರು ತಿಳಿಸಿದ್ದಾರೆ.
9 ಗಂಟೆಗೆ ವಿವಿಧ ಸಂಘಟನೆಗಳಿಂದ ಱಲಿ ನಡೆಯಲಿದೆ. ಟೌನ್ ಹಾಲ್, ಫ್ರೀಡಂ ಪಾರ್ಕ್, ಮೌರ್ಯ ಸರ್ಕಲ್, ಮೈಸೂರು ಬ್ಯಾಂಕ್ನಲ್ಲಿ ರೈತರು ಪ್ರತಿಭಟನೆ ನಡೆಸಲಿದ್ದಾರೆ.
Published On - 7:03 am, Tue, 8 December 20