ಎಲ್ಲದರಲ್ಲೂ 90, ಒಂದರಲ್ಲಿ ಫೇಲ್.. ವಿದ್ಯಾರ್ಥಿ ಭವಿಷ್ಯದ ಜತೆ ಇದೆಂಥಾ ಚೆಲ್ಲಾಟ?

ಗದಗ: ಕಷ್ಟಪಟ್ಟು ಶ್ರದ್ಧೆಯಿಂದ ಓದಿ ಎಲ್ಲಾ ವಿಷಯಗಳಲ್ಲಿ ಉತ್ತೀರ್ಣನಾಗಿ ಒಂದೇ ಒಂದು ವಿಷಯದಲ್ಲಿ ಫೇಲ್ ಆದ ವಿದ್ಯಾರ್ಥಿಯ ಭವಿಷ್ಯ ಇಂದು ಅತಂತ್ರವಾಗಿದೆ. ವಿದ್ಯಾರ್ಥಿಯ ಭವಿಷ್ಯದ ಜೊತೆ ಪಿಯು ಪರೀಕ್ಷಾ ಮಂಡಳಿ ಚೆಲ್ಲಾಟವಾಡಿರುವುದೇ ಈ ದುರಂತಕ್ಕೆ ಕಾರಣವಾಗಿದೆ. ಇಡೀ ಕಾಲೇಜಿಗೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿ ಫೇಲ್ ಆಗಿದ್ದಾನೆ. ಪಿಯು ಪರೀಕ್ಷಾ ಮಂಡಳಿ ಯಡವಟ್ಟಿಗೆ ಆತನ ಭವಿಷ್ಯ ಮಣ್ಣು ಪಾಲಾಗಿದೆ. ಗದಗ ಜಿಲ್ಲೆಯ ನರಗುಂದ ತಾಲೂಕಿನ ಕೊಣ್ಣೂರ ಗ್ರಾಮದ ಕೆಇಎಸ್ ಪಿಯು ಕಾಲೇಜ್​ನಲ್ಲಿ ವ್ಯಾಸಂಗ ಮಾಡುತ್ತಿರುವ ಶಬ್ಬೀರ್ ಖಾಜಿ […]

ಎಲ್ಲದರಲ್ಲೂ 90, ಒಂದರಲ್ಲಿ ಫೇಲ್.. ವಿದ್ಯಾರ್ಥಿ ಭವಿಷ್ಯದ ಜತೆ ಇದೆಂಥಾ ಚೆಲ್ಲಾಟ?
Updated By: ಸಾಧು ಶ್ರೀನಾಥ್​

Updated on: Sep 02, 2020 | 10:15 AM

ಗದಗ: ಕಷ್ಟಪಟ್ಟು ಶ್ರದ್ಧೆಯಿಂದ ಓದಿ ಎಲ್ಲಾ ವಿಷಯಗಳಲ್ಲಿ ಉತ್ತೀರ್ಣನಾಗಿ ಒಂದೇ ಒಂದು ವಿಷಯದಲ್ಲಿ ಫೇಲ್ ಆದ ವಿದ್ಯಾರ್ಥಿಯ ಭವಿಷ್ಯ ಇಂದು ಅತಂತ್ರವಾಗಿದೆ. ವಿದ್ಯಾರ್ಥಿಯ ಭವಿಷ್ಯದ ಜೊತೆ ಪಿಯು ಪರೀಕ್ಷಾ ಮಂಡಳಿ ಚೆಲ್ಲಾಟವಾಡಿರುವುದೇ ಈ ದುರಂತಕ್ಕೆ ಕಾರಣವಾಗಿದೆ.

ಇಡೀ ಕಾಲೇಜಿಗೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿ ಫೇಲ್ ಆಗಿದ್ದಾನೆ. ಪಿಯು ಪರೀಕ್ಷಾ ಮಂಡಳಿ ಯಡವಟ್ಟಿಗೆ ಆತನ ಭವಿಷ್ಯ ಮಣ್ಣು ಪಾಲಾಗಿದೆ. ಗದಗ ಜಿಲ್ಲೆಯ ನರಗುಂದ ತಾಲೂಕಿನ ಕೊಣ್ಣೂರ ಗ್ರಾಮದ ಕೆಇಎಸ್ ಪಿಯು ಕಾಲೇಜ್​ನಲ್ಲಿ ವ್ಯಾಸಂಗ ಮಾಡುತ್ತಿರುವ ಶಬ್ಬೀರ್ ಖಾಜಿ ಕನಸುಗಳು ಬಿರುಕು ಬಿಟ್ಟಿವೆ. ಎಲ್ಲ ವಿಷಯದಲ್ಲಿ 90 ರ ಮೇಲ್ಪಟ್ಟು ಅಂಕ ಪಡೆದ ವಿದ್ಯಾರ್ಥಿ ಇಂಗ್ಲಿಷ್ ವಿಷಯದಲ್ಲಿ ಫೇಲ್ ಆಗಿದ್ದಾನೆ!

ಫೋಟೋ ಕಾಪಿ ತರಿಸಿ ನೋಡಿದ್ರೆ 56 ಅಂಕ ಬಂದಿದೆ. ಮರು ಮೌಲ್ಯ ಮಾಪನದಲ್ಲೂ ಈ ವಿದ್ಯಾರ್ಥಿ ಉತೀರ್ಣವಾಗಿರುವುದರ ಬಗ್ಗೆ ಮಾಹಿತಿ ಇಲ್ಲ. ಪಿಯು ಪರೀಕ್ಷಾ ಮಂಡಳಿ ಯಡವಟ್ಟಿಗೆ ಒಂದು ವರ್ಷ ವೇಸ್ಟ್ ಆಗಿದೆ.

ಸಾಲಸೋಲ ಮಾಡಿ ಫೋಟೋ ಕಾಪಿ ತರಿಸಿ ಗದಗ ಜಿಲ್ಲೆಯ ಶಿಕ್ಷಣ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೆ ಅವರೂ ತಲೆ ಕೆಡಿಸಿಕೊಳ್ಳುತ್ತಿಲ್ಲ. ದಯವಿಟ್ಟು ನನ್ನ ಭವಿಷ್ಯದ ಬಗ್ಗೆ ಶಿಕ್ಷಣ ಇಲಾಖೆ ಗಮನ ಹರಿಸಬೇಕು ಅಂತ ವಿದ್ಯಾರ್ಥಿ ಮನವಿ ಮಾಡಿಕೊಂಡಿದ್ದಾನೆ.