ಸಿಕ್ಕಾಪಟ್ಟೆ ಹಾರಾಡೋ​ ಮಂಜುಗೆ ಅಲ್ಲಿ ಸರ್ಜರಿ ಮಾಡಿಸಬೇಕು; ಸೈಲೆಂಟ್​ ವೈಷ್ಣವಿ ಕೊಟ್ರು ಖಡಕ್​ ಟಾಂಗ್​!

ವೈಷ್ಣವಿ ಮನೆಯಲ್ಲಿ ತುಂಬಾನೇ ಸೈಲೆಂಟ್​ ಆಗಿದ್ದಾರೆ. ಈ ವಿಚಾರ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಈ ವಿಚಾರ ಬಿಗ್​ ಬಾಸ್​ ವೀಕೆಂಡ್​ನಲ್ಲೂ ಚರ್ಚೆಗೆ ಬಂದಿದೆ.

ಸಿಕ್ಕಾಪಟ್ಟೆ ಹಾರಾಡೋ​ ಮಂಜುಗೆ ಅಲ್ಲಿ ಸರ್ಜರಿ ಮಾಡಿಸಬೇಕು; ಸೈಲೆಂಟ್​ ವೈಷ್ಣವಿ ಕೊಟ್ರು ಖಡಕ್​ ಟಾಂಗ್​!
ವೈಷ್ಣವಿ-ಮಂಜು

Updated on: Mar 13, 2021 | 10:20 PM

ಲ್ಯಾಗ್​ ಮಂಜು ಮನೆಯಲ್ಲಿ ತುಂಬಾನೇ ಫ್ಲರ್ಟ್​ ಮಾಡುತ್ತಿರುತ್ತಾರೆ. ದಿವ್ಯಾ ಉರುಡುಗ ಮತ್ತು ದಿವ್ಯಾ ಸುರೇಶ್​ ಜತೆ ತುಂಬಾನೇ ಆಪ್ತರಾಗಿ ನಡೆದುಕೊಳ್ಳುತ್ತಿದ್ದಾರೆ. ಇನ್ನು, ಟಾಸ್ಕ್​ ನಡೆಯುವ ವೇಳೆ ಮಂಜು ಎಲ್ಲೆಲ್ಲೋ ಮುಟ್ಟುತ್ತಾರೆ ಎನ್ನುವ ಆರೋಪ ಕೂಡ ಕೇಳಿ ಬಂದಿತ್ತು. ಈಗ ಲ್ಯಾಗ್​ ಮಂಜುಗೆ ಖಡಕ್​ ಟಾಂಗ್​ ನೀಡಿದ್ದಾರೆ!

ದಿವ್ಯಾ ಉರುಡುಗ ಜತೆ ಮಂಜು ಫ್ಲರ್ಟ್​ ಮಾಡಿದ್ದ ವಿಚಾರ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಮಂಜು ಮಾಡಿದ ಫ್ಲರ್ಟ್ ನೋಡಿ ದಿವ್ಯಾ ಸುರೇಶ್​ ಮುಖ ತಿರುಗಿಸಿಕೊಂಡಿದ್ದರು. ಇಷ್ಟು ದಿನ ದಿವ್ಯಾ ಸುರೇಶ್​ ಕಡೆಗೆ ಆಸಕ್ತಿ ತೋರಿಸುತ್ತಿದ್ದ ಮಂಜು ನಿಧಾನವಾಗಿ ದಿವ್ಯಾ ಉರುಡುಗ ಕಡೆಗೆ ವಾಲುತ್ತಿದ್ದಾರೆ ಎನ್ನುವ ಮಾತು ಕೇಳಿ ಬಂದಿತ್ತು. ಈಗ ಲ್ಯಾಗ್​ ಮಂಜು ಹೋಗಿ ಬ್ಯಾಕಪ್​ ಮಂಜು ಎನ್ನುವ ಹೊಸ ಹೆಸರು ನಾಮಕರಣಗೊಂಡಿತ್ತು. ಇವರಿಗೆ ವೈಷ್ಣವಿ ತಿರುಗೇಟು ನೀಡಿದ್ದಾರೆ.

ವೈಷ್ಣವಿ ಮನೆಯಲ್ಲಿ ತುಂಬಾನೇ ಸೈಲೆಂಟ್​ ಆಗಿದ್ದಾರೆ. ಈ ವಿಚಾರ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಈ ವಿಚಾರ ಬಿಗ್​ ಬಾಸ್​ ವೀಕೆಂಡ್​ನಲ್ಲೂ ಚರ್ಚೆಗೆ ಬಂದಿದೆ. ಈ ಬಗ್ಗೆ ನಿಧಿ ಮಾತನಾಡಿದ್ದಾರೆ. ವೈಷ್ಣವಿ ಸೈಲೆಂಟ್​ ಅಲ್ಲವೇ ಅಲ್ಲ. ಅವರು ಸೈಲೆಂಟ್​ ಆಗಿ ಟಾಂಗ್​ ಕೊಡ್ತಾರೆ. ಲ್ಯಾಗ್​ ಮಂಜು ಆಪರೇಷನ್​ ಮಾಡಿಸಿಕೊಳ್ಳಬೇಕು ಎಂದು ಹೇಳಿದ್ದರು ಎಂದಿದ್ದಾರೆ!

ಇದನ್ನೂ ಓದಿ: ಬಿಗ್​ ಬಾಸ್​ ಸಾಕಾಗಿದೆ.. ನನಗೆ ಮನೆಯಿಂದ ಹೊರಬರಬೇಕು ಅನಿಸ್ತಾ ಇದೆ 

Bigg Boss Kannada Elimination: ಈ ವಾರ ಬಿಗ್​ ಬಾಸ್​​ ಮನೆಯಿಂದ ಹೊರಹೋಗುತ್ತಿರುವ ಸ್ಪರ್ಧಿ ಯಾರು?

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us