ಕನ್ನಡ ಬಿಗ್ ಬಾಸ್ ಎಂಟನೇ ಸೀಸನ್ನ ಮೊದಲೇ ವಾರದಲ್ಲಿ ಧನುಶ್ರೀ ನಾಮಿನೇಟ್ ಆಗಿ ಮನೆಯಿಂದ ಹೊರಹೋಗಿದ್ದರು. ಈಗ ಎರಡನೇ ವಾರದ ಎಲಿಮಿನೇಷನ್ ಪ್ರಕ್ರಿಯೆ ಆರಂಭವಾಗಿದೆ. ಈ ವಾರ ಎಂಟು ಜನರು ಬಿಗ್ ಬಾಸ್ ಮನೆಯಲ್ಲಿ ನಾಮಿನೇಟ್ ಆಗಿದ್ದಾರೆ. ಅವರ ಹೆಸರುಗಳ ಬಗ್ಗೆ ಇಲ್ಲಿದೆ ಮಾಹಿತಿ.
ಕಳೆದ ಬಾರಿ ನೇರವಾಗಿ ನಾಮಿನೇಟ್ ಆಗಿದ್ದ ನಿರ್ಮಲಾ ಈ ಬಾರಿಯೂ ಅತಿ ಹೆಚ್ಚು ಮತ ಪಡೆದು ನಾಮಿನೇಟ್ ಆಗಿದ್ದಾರೆ. ಭಿನ್ನಾಭಿಪ್ರಾಯ, ಎಲ್ಲರ ಜತೆ ಹೊಂದುಕೊಳ್ಳುತ್ತಿಲ್ಲ, ಅವರು ತೆಗೆದುಕೊಳ್ಳುವ ನಿರ್ಧಾರ ಸರಿ ಇರುವುದಿಲ್ಲ, ಅವರಿಂದ ಮನೆಯ ವಾತಾವರಣ ಬದಲಾಗಿದೆ ಎಂದು ಮನೆಯ ಸದಸ್ಯರು ಕಾರಣ ನೀಡಿದರು.
ಪ್ರಶಾಂತ್ ಸಂಬರಗಿ ಕೂಡ ಈ ಬಾರಿ ನಾಮಿನೇಟ್ ಆದರು. ಪ್ರಶಾಂತ್ ಡಾಮಿನೇಟ್ ಮಾಡುತ್ತಾರೆ. ಎಲ್ಲರನ್ನೂ ಪ್ರತ್ಯೇಕವಾಗಿ ಕರೆದುಕೊಂಡು ಹೋಗಿ ಮಾತನಾಡುತ್ತಾರೆ ಎನ್ನುವ ಕಾರಣ ನೀಡಿ ಅವರನ್ನು ಮನೆಯ ಸದಸ್ಯರು ನಾಮಿನೇಟ್ ಮಾಡಿದರು. ಎಲ್ಲರ ಜತೆ ಸರಿಯಾಗಿ ಬೆರೆಯುತ್ತಿಲ್ಲ, ಒಂಟಿಯಾಗಿ ಇರುತ್ತಾರೆ ಎನ್ನುವ ಕಾರಣ ನೀಡಿ ದಿವ್ಯಾ ಸುರೇಶ್ ನಾಮಿನೇಟ್ ಆದರು.
ಇವರ ಜತೆಗೆ ಗೀತಾ, ನಿಧಿ ಸುಬ್ಬಯ್ಯ, ವಿಶ್ವನಾಥ್ ಮತ್ತು ಚಂದ್ರಕಲಾ ಅವರ ಮೇಲೂ ಈ ಬಾರಿಯ ನಾಮಿನೇಟ್ ಕತ್ತಿ ತೂಗಾಡುತ್ತಿದೆ. ಇನ್ನು, ಮನೆಯ ಕ್ಯಾಪ್ಟನ್ ಬ್ರೋ ಗೌಡಗೆ ಒಬ್ಬರನ್ನು ನೇರವಾಗಿ ನಾಮಿನೇಟ್ ಮಾಡುವ ಅವಕಾಶ ನೀಡಲಾಯಿತು. ಅವರು ಶುಭಾ ಪೂಂಜಾ ಅವರನ್ನು ನಾಮಿನೇಟ್ ಮಾಡಿದರು.
ಇದನ್ನೂ ಓದಿ: BBK8: ನಾನು ಕ್ಯಾಪ್ಟನ್ ಆದ್ರೆ ನಿಂಗ್ ಐತೆ ಹಬ್ಬ; ಶಮಂತ್ಗೆ ಎಚ್ಚರಿಕೆ ನೀಡಿದ ಲ್ಯಾಗ್ ಮಂಜು
Published On - 10:35 pm, Mon, 8 March 21