ನಿನ್ನೆ-ಮೊನ್ನೆ ಬಂದ ಬಚ್ಚಾ ಎಂದಿದ್ದ ಶಂಕರ್​ ಅಶ್ವತ್ಥ್​ ವಿರುದ್ಧ ಮನೆ ಮಂದಿಯೆಲ್ಲಾ ಒಟ್ಟಾಗಿ ತಿರುಗಿ ಬಿದ್ರು!

ಎಲ್ಲವೂ ಸರಿ ಇದ್ದಂತೆ ಕಂಡರೂ ಶಂಕರ್​ ಅಶ್ವತ್ಥ್​ ಬಗ್ಗೆ ಮನೆಯ ಬಹುತೇಕರಿಗೆ ಅಸಮಾಧಾನ ಇದೆ. ಅವರಿಗೆ ವಯಸ್ಸಿನ ಕಾರಣ ನೀಡಿ ಅವರನ್ನು ಸೇಫ್​ ಮಾಡೋದು ಎಷ್ಟು ಸರಿ ಎನ್ನುವುದು ಅನೇಕರ ಪ್ರಶ್ನೆಯಾಗಿದೆ. 

ನಿನ್ನೆ-ಮೊನ್ನೆ ಬಂದ ಬಚ್ಚಾ ಎಂದಿದ್ದ ಶಂಕರ್​ ಅಶ್ವತ್ಥ್​ ವಿರುದ್ಧ ಮನೆ ಮಂದಿಯೆಲ್ಲಾ ಒಟ್ಟಾಗಿ ತಿರುಗಿ ಬಿದ್ರು!
ಶಂಕರ್​ ಅಶ್ವತ್ಥ್​
Edited By:

Updated on: Mar 22, 2021 | 7:29 AM

ಮೂರು ವಾರಗಳಲ್ಲಿ ಶಂಕರ್​ ಅಶ್ವಥ್​​ ಎರಡು ಬಾರಿ ಎಲಿಮಿನೇಷನ್​ಗೆ ನಾಮಿನೇಟ್​ ಆಗಿದ್ದರು. ಪ್ರತಿ ಬಾರಿ ಕ್ಯಾಪ್ಟನ್​ ಆದವರು ಅವರನ್ನು ಸೇವ್​ ಮಾಡಿದ್ದರು. ಈ ವಿಚಾರ ಬಿಗ್​ ಬಾಸ್​ ಮನೆಯಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಜೈಲಿನಿಂದ ಹೊರ ಬಂದ ಮೇಲೆ ಅವರು ಮನೆ ಮಂದಿಯ ವಿರುದ್ಧ ರಾಂಗ್​ ಆಗುತ್ತಿದ್ದಾರೆ. ಈಗ ಮನೆ ಮಂದಿ ಒಟ್ಟಾಗಿ ಅಶ್ವತ್ಥ್​ ವಿರುದ್ಧ ತಿರುಗಿ ಬಿದ್ದಿದ್ದಾರೆ.

ಬಿಗ್​ ಬಾಸ್​ ಜೈಲಿನಿಂದ ಹೊರ ಬಂದಿದ್ದ ಶಂಕರ್​, ಪ್ರಶಾಂತ್​ ಸಂಬರಗಿ ವಿರುದ್ಧ ಹರಿ ಹಾಯ್ದಿದ್ದರು. ನಾನು ಜೈಲಿನಿಂದ ಹೊರ ಬಂದಿದ್ದೇನೆ. ನಾನು ಏಳು ಕೆರೆ ನೀರು ಕುಡಿದು ಬಂದಿದ್ದೇನೆ. ಬಚ್ಚಲ ಮನೆ ನೀರು ಕುಡಿದು ಬಂದಿಲ್ಲ. ನಿನ್ನೆ-ಮೊನ್ನೆ ಬಂದ ಬಚ್ಚಾ ನನ್ನನ್ನು ಜಡ್ಜ್​ ಮಾಡುತ್ತೆ. ಅದು ಯಾವ ಆಧಾರದ ಮೇಲೆ ಎಂದು ಪ್ರಶ್ನೆ ಮಾಡಿದ್ದರು ಅವರು.

ಈಗ ವೀಕೆಂಡ್​ನಲ್ಲಿ ಈ ವಿಚಾರ ಚರ್ಚೆಗೆ ಬಂದಿದೆ. ಪ್ರತಿ ಬಾರಿ ಶಂಕರ್​ ಅಶ್ವತ್ಥ್​ಗೆ ಕ್ಯಾಪ್ಟನ್​ಗಳು ಸವಲತ್ತು ನೀಡಿದರು ಅನಿಸುತ್ತಿದೆಯೇ ಎಂದು ಕೇಳಲಾಯಿತು. ಶಂಕರ್​​ಗೆ ಸವಲತ್ತು ಜಾಸ್ತಿನೇ ಸಿಗುತ್ತಿದೆ ಎಂದು ನನಗನ್ನಿಸುತ್ತಿದೆ ಎಂದರು ರಘು ಗೌಡ. ಶಂಕರ್​ ಅವರನ್ನು ಸೇವ್​ ಮಾಡಿದಾಗ ರಾಜೀವ್​ ತುಂಬಾನೇ ಎಮೋಷನ್​ ಆದರು ಎಂದು ಪ್ರಶಾಂತ್​ ಸಂಬರಗಿ ಆರೋಪಿಸಿದರು. ಇದನ್ನು, ಮನೆಯ ಬಹುತೇಕರು ಒಪ್ಪಿಕೊಂಡರು. ಅಷ್ಟೇ ಅಲ್ಲ, ಶಂಕರ್​ಗೆ ಸವಲತ್ತು ಸಿಗುತ್ತಿದೆ ಎಂಬುದು ಮನೆಯ ಬಹುತೇಕರ ಆರೋಪವೇ ಆಗಿದೆ.

ಎಲ್ಲವೂ ಸರಿ ಇದ್ದಂತೆ ಕಂಡರೂ ಶಂಕರ್​ ಅಶ್ವತ್ಥ್​ ಬಗ್ಗೆ ಮನೆಯ ಬಹುತೇಕರಿಗೆ ಅಸಮಾಧಾನ ಇದೆ. ಬಿಗ್​ ಬಾಸ್​ ಮನೆಗೆ ಎಲ್ಲರೂ ಆಡೋಕೆ ಅಂತಾನೆ ಬಂದಿರುವುದು. ಹೀಗಿರುವಾಗ ಅವರಿಗೆ ವಯಸ್ಸಿನ ಕಾರಣ ನೀಡಿ ಅವರನ್ನು ಸೇಫ್​ ಮಾಡೋದು ಎಷ್ಟು ಸರಿ ಎನ್ನುವುದು ಅನೇಕರ ಪ್ರಶ್ನೆಯಾಗಿದೆ.

ಇದನ್ನೂ ಓದಿ: Bigg Boss Kannada 8 Elimination: ಬಿಗ್​ ಬಾಸ್​ ಮನೆಯಿಂದ ಗೀತಾ ಭಾರತಿ ಭಟ್​ ಔಟ್​; ಎಲಿಮಿನೇಷನ್​ಗೆ ಇಲ್ಲಿದೆ ಬಲವಾದ ಕಾರಣ

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us