Bigg Boss Kannada Day 3: ಧನುಶ್ರೀ ಮೇಕಪ್​ ತೆಗೆಯೋಕೆ ಒಂದು ವರ್ಷ ಸ್ನಾನ ಮಾಡಬೇಕು ಎಂದ ಪ್ರಶಾಂತ್​ ಸಂಬರಗಿ

ಧನುಶ್ರೀ ಸ್ನಾನ ಮುಗಿಸಿ ಹೊರ ಬಂದಿದ್ದರು. ಧನುಶ್ರೀ ನೋಡಿ ಅಚ್ಚರಿ ಹೊರ ಹಾಕಿದ್ದರು ಮಂಜು! ಏಕೆಂದರೆ, ಧನುಶ್ರೀ ಮೇಕಪ್​ ಹಾಕಿಕೊಂಡಿದ್ದರು!

Bigg Boss Kannada Day 3: ಧನುಶ್ರೀ ಮೇಕಪ್​ ತೆಗೆಯೋಕೆ ಒಂದು ವರ್ಷ ಸ್ನಾನ ಮಾಡಬೇಕು ಎಂದ ಪ್ರಶಾಂತ್​ ಸಂಬರಗಿ
ಧನುಶ್ರೀ- ಪ್ರಶಾಂತ್​

Updated on: Mar 03, 2021 | 10:03 PM

ಬಿಗ್​ ಬಾಸ್​ ಮನೆಗೆ ಬಂದ ನಂತರ ಧನುಶ್ರೀ ಮೇಕಪ್​ ಇಲ್ಲದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್​ ಆಗಿತ್ತು. ಇದನ್ನು ನೋಡಿದ ಅಭಿಮಾನಿಗಳು, ಈ ಧನುಶ್ರೀ ಅದೆಷ್ಟು ಮೇಕಪ್​ ಮಾಡಿಕೊಳ್ಳುತ್ತಿದ್ರಪ್ಪ. ಅವರ ನಿಜವಾದ ಬಣ್ಣ ಈಗ ಬಯಲಾಗಿದೆ ಎಂದು ಅಚ್ಚರಿ ವ್ಯಕ್ತಪಡಿಸಿದ್ದರು. ಈಗ ಈ ವಿಚಾರ ಮನೆ ಒಳಗೂ ಚರ್ಚೆ ಆಗಿದೆ. ಧನುಶ್ರೀ ಮೇಕಪ್​ ತೆಗೆಯೋಕೆ ಒಂದು ವರ್ಷ ಸ್ನಾನ ಮಾಡಬೇಕು ಎಂದು ನಕ್ಕಿದ್ದಾರೆ.

ಬಿಗ್​ ಬಾಸ್​ ಮೂರನೇ ದಿನದಲ್ಲಿ ಬೆಳಗ್ಗೆ 8 ಗಂಟೆಗೆ ಸಾಂಗ್​ ಪ್ರಸಾರವಾಗಿತ್ತು. ಈ ವೇಳೆ ಮಂಜು ಹೊರಗೆ ಹಲ್ಲು ಉಜ್ಜುತ್ತಿದ್ದರು. ಆಗ ಧನುಶ್ರೀ ಸ್ನಾನ ಮುಗಿಸಿ ಹೊರ ಬಂದಿದ್ದರು. ಧನುಶ್ರೀ ನೋಡಿ ಅಚ್ಚರಿ ಹೊರ ಹಾಕಿದ್ದರು ಮಂಜು! ಏಕೆಂದರೆ, ಧನುಶ್ರೀ ಮೇಕಪ್​ ಹಾಕಿಕೊಂಡಿದ್ದರು!

ಸ್ನಾನದ ಮನೆಯಿಂದ ಮೇಕಪ್​ ಮಾಡಿಕೊಂಡು ಬಂದಿರೇ ಎಂದು ಧನುಶ್ರೀ ಅವರನ್ನು ಮಂಜು ಪ್ರಶ್ನೆ ಮಾಡಿದ್ದಾರೆ. ಆಗ ಧನುಶ್ರೀ, ಇಲ್ಲ, ನಾನು ಮೇಕಪ್​ ಮಾಡಿಕೊಂಡೇ ಸ್ನಾನ ಮಾಡೋಕೆ ಹೋಗಿದ್ದೆ ಎಂದಿದ್ದಾರೆ. ಇದನ್ನು ಕೇಳಿ ಮಂಜು ಶಾಕ್​ ಆಗಿದ್ದರು.

ಈ ವಿಚಾರದ ಬಗ್ಗೆ ಕೆಲ ನಿಮಿಷಗಳ ಕಾಲ ಚರ್ಚೆ ನಡೆದಿದೆ. ಆಗ ಮಧ್ಯೆ ಬಂದ ಪ್ರಶಾಂತ್​, ಆ ಮೇಕಪ್​ ತೆಗೆಯೋಕೆ ಏನಿಲ್ಲವೆಂದರೂ ಒಂದು ವರ್ಷ ಬೇಕು ಎಂದು ನಕ್ಕರು. ಇದನ್ನು ಕೇಳಿದ ಮನೆಯವರೆಲ್ಲರೂ ನಗೆಗಡಲಲ್ಲಿ ತೇಲಿದ್ದಾರೆ.

ಇದನ್ನೂ ಓದಿ: Bigg Boss Kannada : ಈ 5 ಸವಾಲುಗಳನ್ನು ಎದುರಿಸಿ ಯಶಸ್ವಿ ಆಗುತ್ತಾ ಈ ಬಾರಿಯ ಕನ್ನಡ ಬಿಗ್​ ಬಾಸ್​​?

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us