Bigg Boss Kannada : ಈ 5 ಸವಾಲುಗಳನ್ನು ಎದುರಿಸಿ ಯಶಸ್ವಿ ಆಗುತ್ತಾ ಈ ಬಾರಿಯ ಕನ್ನಡ ಬಿಗ್​ ಬಾಸ್​​?

Bigg Boss Kannada Season 8 : ಕಿರುತೆರೆ ರಿಯಾಲಿಟಿ ಶೋಗಳ ಪೈಕಿ ಅತಿ ಹೆಚ್ಚು ಜನಪ್ರಿಯವಾಗಿರುವ ಬಿಗ್ ಬಾಸ್​ಗೆ ದೊಡ್ಡ ಪ್ರೇಕ್ಷಕವರ್ಗ ಇದೆ. ಆದರೆ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವುದು ಅಷ್ಟು ಸುಲಭವಲ್ಲ ಎಂಬುದು ಕೂಡ ನಿಜ.

Bigg Boss Kannada : ಈ 5 ಸವಾಲುಗಳನ್ನು ಎದುರಿಸಿ ಯಶಸ್ವಿ ಆಗುತ್ತಾ ಈ ಬಾರಿಯ ಕನ್ನಡ ಬಿಗ್​ ಬಾಸ್​​?
ಬಿಗ್​​ಬಾಸ್​​ ಕನ್ನಡ 8
Follow us
ರಾಜೇಶ್ ದುಗ್ಗುಮನೆ
|

Updated on:Mar 03, 2021 | 8:08 PM

‘ಬಿಗ್​ ಬಾಸ್​ ಕನ್ನಡ ಸೀಸನ್​ 8’ ಅದ್ದೂರಿಯಾಗಿ ಆರಂಭವಾಗಿದೆ. ಕೋವಿಡ್​-19 ಭೀತಿ ನಡುವೆಯೂ ಈ ರಿಯಾಲಿಟಿ ಶೋ ನಡೆಸಲಾಗುತ್ತಿದೆ. ಹಿಂದೆಂದಿಗಿಂತಲೂ ಹೆಚ್ಚು ಕಲರ್​ಫುಲ್​ ಆದಂತಹ ಮನೆಯಲ್ಲಿ 17 ಸ್ಪರ್ಧಿಗಳ ನಡುವೆ ಪೈಪೋಟಿ ಆರಂಭ ಆಗಿದೆ. ಬಜೆಟ್​ನ ದೃಷ್ಟಿಯಿಂದ ನೋಡಿದರೂ ಇದು ಬೇರೆಲ್ಲ ಶೋಗಳಿಗಿಂತ ದೊಡ್ಡ ಕಾರ್ಯಕ್ರಮ. ಆದರೆ ಬಿಗ್​ ಬಾಸ್​ನ ಪ್ರತಿ ಎಪಿಸೋಡ್​ನಲ್ಲಿಯೂ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವುದು ಸುಲಭವಲ್ಲ. ಅದಕ್ಕಾಗಿ ಎಲ್ಲಿಲ್ಲದ ಸರ್ಕಸ್​ ಮಾಡಬೇಕಾಗುತ್ತದೆ. ಇನ್ನು, ಈ ರಿಯಾಲಿಟಿ ಶೋಗೆ ಸವಾಲೊಡ್ಡುವ ಇತರೆ ಸಂಗತಿಗಳೂ ಇವೆ.

ಐಪಿಎಲ್​ ಎದುರು ನಡೆಯುತ್ತಾ ಬಿಗ್​ ಬಾಸ್​ ಆಟ? ಐಪಿಎಲ್​ ಹವಾ ಯಾವ ರೀತಿ ಇರುತ್ತದೆ ಎಂಬುದನ್ನು ಹೊಸದಾಗಿ ಹೇಳಬೇಕಾಗಿಲ್ಲ. ಈ ಬಾರಿ ಐಪಿಎಲ್​ಗಾಗಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಐಪಿಎಲ್​ ಹರಾಜು ಪ್ರಕ್ರಿಯೆ ಕೂಡ ಮುಗಿದಿದ್ದು ಕ್ರಿಕೆಟ್ ಪ್ರೇಮಿಗಳು ತುದಿಗಾಲಿನಲ್ಲಿ ನಿಂತು ಕಾಯುತ್ತಿದ್ದಾರೆ. ಏ.11ರಂದು ಅದ್ದೂರಿಯಾಗಿ ಐಪಿಎಲ್​ ಪಂದ್ಯಗಳು ಆರಂಭ ಆಗಲಿವೆ. ಅಂದಾಜು 60 ಪಂದ್ಯಗಳು ನಡೆಯಲಿವೆ. ರಾತ್ರಿ ಪಂದ್ಯಗಳಿಗೆ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರು ಆಸಕ್ತಿ ತೋರಿಸುತ್ತಾರೆ. ಎಲ್ಲ ವಯೋಮಾನದವರೂ ಟಿವಿ ಮುಂದೆ ಕುಳಿತು ಕ್ರಿಕೆಟ್​ ಆಸ್ವಾಧಿಸುತ್ತಾರೆ. ಈ ವೇಳೆಯಲ್ಲಿ ಟಿಆರ್​ಪಿ ಗಿಟ್ಟಿಸಲು ಬಿಗ್​ ಬಾಸ್​ಗೆ ಹಿನ್ನಡೆ ಆಗುವ ಸಾಧ್ಯತೆ ಇದೆ. ಇದು ಈ ಬಾರಿ ಬಿಗ್​ ಬಾಸ್​ಗೆ ಇರುವ ಅತಿ ದೊಡ್ಡ ಸವಾಲು.

ಇಂಡಿಯಾ vs ಇಂಗ್ಲೆಂಡ್​ ಜೊತೆ ಬಿಗ್ ಬಾಸ್​ ಹಣಾಹಣಿ ಸದ್ಯ ನಡೆಯುತ್ತಿರುವ ಇಂಡಿಯಾ ವರ್ಸಸ್​ ಇಂಗ್ಲೆಂಡ್​ ಹಣಾಹಣಿಯಿಂದಲೂ ಬಿಗ್​ ಬಾಸ್​ಗೆ ಸವಾಲು ಎದುರಾಗಿದೆ. ಟೆಸ್ಟ್​ ಪಂದ್ಯಗಳ ಬಳಿಕ ಟಿ-20 ಅಬ್ಬರ ಶುರು ಆಗುತ್ತಿದೆ. ಎಲ್ಲ ಮ್ಯಾಚ್​ಗಳು ಸಂಜೆ 7 ಗಂಟೆಗೆ ಆರಂಭವಾಗಿ ರಾತ್ರಿ 10 ಅಥವಾ 10.30ರವರೆಗೆ ನಡೆಯುತ್ತವೆ. ಮಾ.12ರಿಂದ ಮಾ.20ರವರೆಗೂ ಒಟ್ಟು ಐದು T-20 ಪಂದ್ಯಗಳು ನಡೆಯಲಿದ್ದು, ಕ್ರಿಕೆಟ್​​ ಪ್ರೇಮಿಗಳಿಗೆ ಹಬ್ಬದ ವಾತಾವರಣ ಏರ್ಪಡುತ್ತದೆ. ನಂತರ 3 ಏಕದಿನ ಪಂದ್ಯಗಳು ಧೂಳೆಬ್ಬಿಸಲಿವೆ. ಮಾ.23, 26 ಮತ್ತು 28ರಂದು ಈ ಪಂದ್ಯಗಳು ಇರಲಿದ್ದು, ಆ ಸಂದರ್ಭದಲ್ಲಿಯೂ ಬಿಗ್​ ಬಾಸ್​ಗೆ ವೀಕ್ಷಕರ ಕೊರತೆ ಕಾಡುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಈ ಚಾಲೆಂಜ್​ ಎದುರಿಸಲು ಬಿಗ್​ ಬಾಸ್​ ತಂತ್ರ ರೂಪಿಸಿಕೊಳ್ಳಬೇಕಿದೆ.

ಸವಾಲೊಡ್ಡುವ ದೊಡ್ಡ ಸಿನಿಮಾಗಳು! ಈಗಂತೂ ಕಿರುತೆರೆ ವರ್ಸಸ್​ ಹಿರಿತೆರೆ ಎಂಬ ವಾತಾವರಣ ನಿರ್ಮಾಣ ಆಗಿದೆ. ಕಳೆದ ವರ್ಷ ಲಾಕ್​ಡೌನ್​ನಿಂದ ರಿಲೀಸ್​ ಡೇಟ್​ ಮುಂದೂಡಿಕೊಂಡಿದ್ದ ಸಿನಿಮಾಗಳೆಲ್ಲ ಈಗ ಬ್ಯಾಕ್​ ಟು ಬ್ಯಾಕ್​ ಬಿಡುಗಡೆ ಆಗುತ್ತಿವೆ. ಅದರಲ್ಲೂ ದೊಡ್ಡ ದೊಡ್ಡ ಸ್ಟಾರ್​ ಸಿನಿಮಾಗಳು ಮಾರ್ಚ್​, ಏಪ್ರಿಲ್​ ಮತ್ತು ಮೇ ತಿಂಗಳ ಸಮಯದಲ್ಲಿ ಚಿತ್ರಮಂದಿರಕ್ಕೆ ಬರುತ್ತಿವೆ. ರಾಬರ್ಟ್​ (ಮಾ.11) , ಯುವರತ್ನ, (ಏ.1), ಸಲಗ (ಏ.15), ಕೋಟಿಗೊಬ್ಬ 3 (ಏ.29) ಚಿತ್ರಗಳನ್ನು ನೈಟ್​ ಶೋನಲ್ಲಿ ನೋಡಲು ಜನರು ಮುಗಿಬೀಳುವುದು ಗ್ಯಾರಂಟಿ. ವೀಕೆಂಡ್​ನ ಸಂಜೆಗಳಲ್ಲೂ ಜನರು ಥಿಯೇಟರ್​ನತ್ತ ಹೆಜ್ಜೆ ಹಾಕುವವರ ಸಂಖ್ಯೆ ಹೆಚ್ಚಿರುತ್ತದೆ. ಹಾಗಾಗಿ ಈ ಎಲ್ಲ ಸಿನಿಮಾಗಳ ಹವಾ ಎದುರು ಬಿಗ್​ ಬಾಸ್​ ಹಣಾಹಣಿ ನಡೆಸಬೇಕಿದೆ.

ಸ್ಪರ್ಧಿಗಳ ಆಯ್ಕೆಯಲ್ಲಿ ಎಡವಿದ ಬಿಗ್​ ಬಾಸ್​? ತುಂಬ ಜನಪ್ರಿಯವಾಗಿರುವ ಸ್ಪರ್ಧಿಗಳು ಬಿಗ್​ ಬಾಸ್​ನಲ್ಲಿ ಭಾಗವಹಿಸಿದರೆ ಜನರ ಆಸಕ್ತಿ ಕೂಡ ದೊಡ್ಡ ಮಟ್ಟದಲ್ಲಿ ಇರುತ್ತದೆ. ಆದರೆ ಈ ಬಾರಿ ಸ್ಪರ್ಧಿಗಳ ಆಯ್ಕೆ ವಿಚಾರದಲ್ಲಿ ಬಿಗ್​ ಬಾಸ್​ ಆಯೋಜಕರು ಎಡವಿದ್ದಾರೇನೂ ಎಂಬ ಅನುಮಾನ ಕಾಡುತ್ತಿದೆ. ಸಿನಿಮಾ, ಕಿರುತೆರೆ, ಕ್ರೀಡೆ ಮತ್ತು ಸೋಷಿಯಲ್​ ಮೀಡಿಯಾದಲ್ಲಿ ಖ್ಯಾತಿ ಪಡೆದವರನ್ನು ಆಯ್ಕೆ ಮಾಡಲಾಗಿದೆಯಾದರೂ ಕೂಡ ಅವರಲ್ಲಿ ಕೆಲವರನ್ನು ವೀಕ್ಷಕರು ಇಷ್ಟಪಟ್ಟಿಲ್ಲ. ಈ ಬಾರಿಯ ಸ್ಪರ್ಧಿಗಳ ಆಯ್ಕೆ ಬಗ್ಗೆ ವೀಕ್ಷಕರಿಗೆ ಅಸಮಾಧಾನ ಇದೆ ಎಂಬುದಕ್ಕೆ ಸಾಕ್ಷಿಯಾಗಿ ಹಲವು ಮೀಮ್​ಗಳು ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿವೆ. ಇಂಥ ಸ್ಪರ್ಧಿಗಳನ್ನು ಇಟ್ಟುಕೊಂಡು ಪ್ರೇಕ್ಷಕರನ್ನು ಸೆಳೆಯುವುದು ಬಿಗ್​ ಬಾಸ್​ ಮುಂದಿರುವ ಇನ್ನೊಂದು ಪ್ರಮುಖ ಸವಾಲು.

ಸೀರಿಯಲ್​ಗಳ​ ಪೈಪೋಟಿ ಪ್ರತಿ ರಾತ್ರಿ 9.30ಕ್ಕೆ ಕಲರ್ಸ್​ ಕನ್ನಡ ವಾಹಿನಿಯಲ್ಲಿ ಬಿಗ್​ ಬಾಸ್​ ಪ್ರಸಾರ ಆಗುತ್ತದೆ. ಇದೇ ಸಮಯಕ್ಕೆ ಸರಿಯಾಗಿ ಬೇರೆ ಬೇರೆ ಚಾನೆಲ್​ಗಳಲ್ಲಿ ಧಾರಾವಾಹಿಗಳ ಹವಾ ಕೂಡ ಹೆಚ್ಚಿರುತ್ತದೆ. ಜೀ ಕನ್ನಡದಲ್ಲಿ ‘ನಾಗಿಣಿ’ (ರಾ.9.45), ಸ್ಟಾರ್​ ಸುವರ್ಣದಲ್ಲಿ ‘ಮನಸೆಲ್ಲಾ ನೀನೇ’ (ರಾ.9.30) ‘ರಾಧಾ ಕೃಷ್ಣ’ (ರಾ.10), ಉದಯ ಟಿವಿಯ ಹೊಸ ಧಾರಾವಾಹಿ ‘ನಯನತಾರಾ’ ಸೇರಿದಂತೆ ಅನೇಕ ಸೀರಿಯಲ್​ಗಳು ಬಿಗ್​ ಬಾಸ್​ಗೆ ಪೈಪೋಟಿ ನೀಡುತ್ತಿವೆ. ಇದರ ನಡುವೆಯೂ ಪ್ರೇಕ್ಷಕರನ್ನು ತನ್ನತ್ತ ಸೆಳೆದುಕೊಳ್ಳಬೇಕಿರುವ ಸವಾಲು ಬಿಗ್​ ಬಾಸ್​ನ ಮುಂದಿದೆ.

ಇದನ್ನೂ ಓದಿ: ಸ್ವಾರ್ಥದ ಹಾದಿ ಹಿಡಿದು ಸೇಫ್​ ಆದ ಪ್ರಶಾಂತ್​ ಸಂಬರಗಿ! ಡೇಂಜರ್​ ಝೋನ್​ನಲ್ಲಿ ವಿಶ್ವನಾಥ್​

ಇದನ್ನೂ ಓದಿ: ಬಿಗ್​ ಬಾಸ್​ ಮನೆಯಲ್ಲೇ ಮದುವೆಯಾದ ಮಂಜು ಪಾವಗಡ-ದಿವ್ಯಾ ಸುರೇಶ್​!

Published On - 7:25 pm, Wed, 3 March 21

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್