AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bigg Boss Kannada Day 2: ಸ್ವಾರ್ಥದ ಹಾದಿ ಹಿಡಿದು ಸೇಫ್​ ಆದ ಪ್ರಶಾಂತ್​ ಸಂಬರಗಿ! ಡೇಂಜರ್​ ಝೋನ್​ನಲ್ಲಿ ವಿಶ್ವನಾಥ್​

Bigg Boss Kannada Season 8 (Day 2): ಮೊದಲ ವಾರವೇ ಬಿಗ್​ ಬಾಸ್​ ಮನೆಯಿಂದ ಯಾರು ಹೊರಬರುತ್ತಾರೆ ಎಂಬ ದೊಡ್ಡ ಕೌತುಕದ ಪ್ರಶ್ನೆ ಎಲ್ಲರ ಮನದಲ್ಲೂ ಕೊರೆಯುತ್ತಿದೆ. ನಾಮಿನೇಟ್​ ಆದವರ ಭವಿಷ್ಯ ಕೂಡ ಅಚ್ಚರಿಯ ರೀತಿಯಲ್ಲಿ ಬದಲಾಗುತ್ತಿದೆ.

Bigg Boss Kannada Day 2: ಸ್ವಾರ್ಥದ ಹಾದಿ ಹಿಡಿದು ಸೇಫ್​ ಆದ ಪ್ರಶಾಂತ್​ ಸಂಬರಗಿ! ಡೇಂಜರ್​ ಝೋನ್​ನಲ್ಲಿ ವಿಶ್ವನಾಥ್​
ವಿಶ್ವನಾಥ್ ಮತ್ತು ಪ್ರಶಾಂತ್​ ಸಂಬರಗಿ
ಆಯೇಷಾ ಬಾನು
ಆಯೇಷಾ ಬಾನು|

Updated on: Mar 03, 2021 | 12:39 PM

Share

ಬಿಗ್​ ಬಾಸ್​ ಮನೆಗೆ ಕಾಲಿಟ್ಟ ಮೊದಲ ವಾರವೇ ಪ್ರಶಾಂತ್​ ಸಂಬರಗಿ, ನಿಧಿ ಸುಬ್ಬಯ್ಯ, ಧನುಶ್ರೀ, ಮಂಜು ಪಾವಗಡ, ನಿರ್ಮಲಾ ನಾಮಿನೇಟ್​ ಆಗುವ ಮೂಲಕ ಹಿನ್ನಡೆ ಅನುಭವಿಸಿದ್ದರು. ಆದರೆ ಈಗ ಬಿಗ್​ ಬಾಸ್​ ಒಂದು ಟ್ವಿಸ್ಟ್​ ನೀಡಿದ್ದಾರೆ. ಪ್ರಶಾಂತ್​ ಸಂಬರಗಿ ಮತ್ತು ಮಂಜು ಪಾವಗಡ ವಿಶೇಷವಾದ ಟಾಸ್ಕ್​ ಗೆದ್ದು ಸೇಫ್​ ಆಗಿದ್ದಾರೆ. ಅವರ ಎದುರು ಟಾಸ್ಕ್​ನಲ್ಲಿ ಸೋತ ವಿಶ್ವನಾಥ್​ ಮತ್ತು ರಘು ಡೇಂಜರ್​ ಝೋನ್​ಗೆ ಹೋಗಿದ್ದಾರೆ.

‘ನನ್ನದು ಸ್ವಾರ್ಥ’ ಎಂದು ಒಪ್ಪಿಕೊಂಡ ಸಂಬರಗಿ! ನಾಮಿನೇಷನ್​ ತೂಗುಗತ್ತಿಯಿಂದ ತಪ್ಪಿಸಿಕೊಳ್ಳಲು ವಿಶೇಷ ಟಾಸ್ಕ್​ನಲ್ಲಿ ಪೈಪೋಟಿ ನೀಡಲು ತಮ್ಮ ಪ್ರತಿಸ್ಪರ್ಧಿಯನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವನ್ನು ಪ್ರಶಾಂತ್​ ಸಂಬರಗಿಗೆ ನೀಡಲಾಯಿತು. ಆಗ ಪ್ರಶಾಂತ್​ ಆಯ್ಕೆ ಮಾಡಿಕೊಂಡಿದ್ದು ವಿಶ್ವನಾಥ್​ ಅವರನ್ನು. ‘ನನ್ನ ಸ್ವಾರ್ಥಕ್ಕಾಗಿ ನಾನು ಒಬ್ಬ ವೀಕ್​ ಸ್ಪರ್ಧಿಯನ್ನು ಆಯ್ಕೆ ಮಾಡಿಕೊಂಡಿದ್ದೇನೆ’ ಎಂದು ಪ್ರಶಾಂತ್​ ಒಪ್ಪಿಕೊಂಡರು. ಅದರಂತೆ ಆಟದಲ್ಲಿ ವಿಶ್ವನಾಥ್​ರನ್ನು ಸೋಲಿಸಿ ತಾವು ಸೇಫ್​ ಆದರು.

Bigg Boss Kannada 8

ಪ್ರಶಾಂತ್​ ಸಂಬರಗಿ

ಮಂಜು ಎದುರು ಸಮಬಲದ ಸ್ಪರ್ಧಿ! ಪ್ರಶಾಂತ್​ ಸಂಬರಗಿ ರೀತಿಯೇ ಮಂಜು ಪಾವಗಡ ಅವರಿಗೂ ಬಿಗ್​ ಬಾಸ್​ ಈ ರೀತಿ ಅವಕಾಶ ನೀಡಿದರು. ಆಗ ಮಂಜು ಆಯ್ಕೆ ಮಾಡಿಕೊಂಡಿದ್ದು ರಘು ಅವರನ್ನು. ಈ ಆಯ್ಕೆಗೆ ಮಂಜು ಸೂಕ್ತ ಕಾರಣವನ್ನೂ ನೀಡಿದರು. ‘ರಘು ನನಗೆ ಸರಿಯಾದ ಸ್ಪರ್ಧಿ. ಸಮನಾಗಿ ಸ್ಪರ್ಧಿಸುತ್ತಾರೆ ಎಂದುಕೊಂಡಿದ್ದೇನೆ. ಒಂದು ವೇಳೆ ನಾನು ಸೋತರೂ ಸಮಬಲದ ಸ್ಪರ್ಧಿಯ ಜೊತೆ ಸೋತೆ ಅಂತ ನನಗೆ ಗೌರವ ಸಿಗಬೇಕು ಎಂಬ ಕಾರಣಕ್ಕೆ ಅವರನ್ನು ಆಯ್ಕೆ ಮಾಡಿಕೊಂಡಿದ್ದೇನೆ’ ಎಂದು ಅವರು ನೀಡಿದ ಕಾರಣ ನಿಜಕ್ಕೂ ಮೆಚ್ಚುವಂಥದ್ದು. ಬಿಗ್​ ಬಾಸ್​ ನೀಡಿದ ಟಾಸ್ಕ್​ನಲ್ಲಿ ಮಂಜು ಗೆಲ್ಲುವ ಮೂಲಕ ಸೇಫ್ ಆಗಿದ್ದಾರೆ. ರಘು ಈಗ ಎಲಿಮಿನೇಷನ್​ ಭೀತಿಯಲ್ಲಿದ್ದಾರೆ.

Bigg Boss Kannada 8

ವಿಶ್ವನಾಥ್

ನಿಧಿ, ನಿರ್ಮಲಾ, ಧನುಶ್ರೀ ಪಾಡು ಏನಾಗಲಿದೆ? ಈ ವಾರದ ನಾಮಿನೇಷನ್​ ಪಟ್ಟಿಯಲ್ಲಿ ನಿಧಿ ಸುಬ್ಬಯ್ಯ, ಧನುಶ್ರೀ, ನಿರ್ಮಲಾ ಕೂಡ ಇದ್ದಾರೆ. ನಾಮಿನೇಷನ್​ನಿಂದ ಪಾರಾಗಲು ಅವರಿಗೂ ಕೂಡ ಬಿಗ್​ ಬಾಸ್​ ಅವಕಾಶ ನೀಡಲಿದ್ದಾರೆ. ತಮ್ಮ-ತಮ್ಮ ಪ್ರತಿಸ್ಪರ್ಧಿಯಾಗಿ ಅವರೆಲ್ಲ ಯಾರನ್ನು ಆಯ್ಕೆ ಮಾಡಿಕೊಳ್ಳಲಿದ್ದಾರೆ? ಯಾರಿಗೆ ಸೋಲು? ಯಾರಿಗೆ ಗೆಲುವು ಎಂಬ ಕೌತುಕ ವೀಕ್ಷಕರ ಮನದಲ್ಲಿ ಸೃಷ್ಟಿಯಾಗಿದೆ.

ಇದನ್ನೂ ಓದಿ: Bigg Boss Day 2: ಬಿಗ್​ ಬಾಸ್​ ಮನೆಯಲ್ಲೇ ಮದುವೆಯಾದ ಮಂಜು ಪಾವಗಡ – ದಿವ್ಯಾ ಸುರೇಶ್​!

Follow Us
ಆಯೇಷಾ ಬಾನು
ಆಯೇಷಾ ಬಾನು

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

ರಾತ್ರಿಯಿಡೀ ಮಳೆ ಅಬ್ಬರ: ಮಲ್ಲೇಶ್ವರಂನಲ್ಲಿ ಮರಬಿದ್ದು 2 ಕಾರುಗಳು ಜಖಂ
ರಾತ್ರಿಯಿಡೀ ಮಳೆ ಅಬ್ಬರ: ಮಲ್ಲೇಶ್ವರಂನಲ್ಲಿ ಮರಬಿದ್ದು 2 ಕಾರುಗಳು ಜಖಂ
ಇಂದು ಸಂಕಷ್ಟ ಚತುರ್ಥಿ; ಗಜಗೌರಿ ವ್ರತ ಮಾಡುವವರಿಗೆ ಮಹತ್ವದ ದಿನ
ಇಂದು ಸಂಕಷ್ಟ ಚತುರ್ಥಿ; ಗಜಗೌರಿ ವ್ರತ ಮಾಡುವವರಿಗೆ ಮಹತ್ವದ ದಿನ
ವಿದ್ಯಾರ್ಥಿಗಳಿಗೆ ಟಂಟಂಗಳೇ ಆಸರೆ: ಸ್ವಲ್ಪ ಯಾಮಾರಿದ್ರೂ ಪ್ರಾಣಕ್ಕೇ ಕುತ್ತು
ವಿದ್ಯಾರ್ಥಿಗಳಿಗೆ ಟಂಟಂಗಳೇ ಆಸರೆ: ಸ್ವಲ್ಪ ಯಾಮಾರಿದ್ರೂ ಪ್ರಾಣಕ್ಕೇ ಕುತ್ತು
ಸ್ಪೀಕರ್​ನಲ್ಲಿ ಭಜನೆ ಹಾಕಿದ್ದಕ್ಕೆ ಪಕ್ಕದ ಮನೆಯವರಿಂದ ಅರ್ಚಕನ ಮೇಲೆ ಹಲ್ಲೆ
ಸ್ಪೀಕರ್​ನಲ್ಲಿ ಭಜನೆ ಹಾಕಿದ್ದಕ್ಕೆ ಪಕ್ಕದ ಮನೆಯವರಿಂದ ಅರ್ಚಕನ ಮೇಲೆ ಹಲ್ಲೆ
ಈ ಬಾರಿ ಮೈಸೂರು ದಸರಾದಲ್ಲಿ ಏರ್ ಶೋ, ಸೇನಾ ಪರೇಡ್
ಈ ಬಾರಿ ಮೈಸೂರು ದಸರಾದಲ್ಲಿ ಏರ್ ಶೋ, ಸೇನಾ ಪರೇಡ್
ಬಂಗಾಳದ ಪ್ರವಾಸದ ವೇಳೆ ಝಲ್ಮುರಿ ಸವಿದ ಬಿಜೆಪಿ ಅಧ್ಯಕ್ಷ ನಿತಿನ್ ನವೀನ್
ಬಂಗಾಳದ ಪ್ರವಾಸದ ವೇಳೆ ಝಲ್ಮುರಿ ಸವಿದ ಬಿಜೆಪಿ ಅಧ್ಯಕ್ಷ ನಿತಿನ್ ನವೀನ್
ನೇಪಾಳದಲ್ಲಿ ಭಾರೀ ಹಿಮಪಾತ; 4 ಮೃತದೇಹಗಳ ಪತ್ತೆ, 12 ಜನ ನಾಪತ್ತೆ
ನೇಪಾಳದಲ್ಲಿ ಭಾರೀ ಹಿಮಪಾತ; 4 ಮೃತದೇಹಗಳ ಪತ್ತೆ, 12 ಜನ ನಾಪತ್ತೆ
ದಸರಾ ರಜೆ: ಕ್ರಿಶ್ಚಿಯನ್ ಶಾಲೆಗಳಿಗೆ ಪ್ರಮೋದ್ ಮುತಾಲಿಕ್ ಖಡಕ್ ಎಚ್ಚರಿಕೆ
ದಸರಾ ರಜೆ: ಕ್ರಿಶ್ಚಿಯನ್ ಶಾಲೆಗಳಿಗೆ ಪ್ರಮೋದ್ ಮುತಾಲಿಕ್ ಖಡಕ್ ಎಚ್ಚರಿಕೆ
ಕಾಂಗ್ರೆಸ್ ಮುಖಂಡನ ಮನೆ ಮುಂದೆ ವಾಮಾಚಾರ: ಲಗ್ನ ಪತ್ರಿಕೆ, ಮೂಳೆ ಬಳಕೆ
ಕಾಂಗ್ರೆಸ್ ಮುಖಂಡನ ಮನೆ ಮುಂದೆ ವಾಮಾಚಾರ: ಲಗ್ನ ಪತ್ರಿಕೆ, ಮೂಳೆ ಬಳಕೆ
ಬಿಳಿಗಿರಿ ಟೈಗರ್ ರಿಸರ್ವ್ ಫಾರೆಸ್ಟ್​​ನಲ್ಲಿ ಗಾಂಜಾ ಘಮಲು!
ಬಿಳಿಗಿರಿ ಟೈಗರ್ ರಿಸರ್ವ್ ಫಾರೆಸ್ಟ್​​ನಲ್ಲಿ ಗಾಂಜಾ ಘಮಲು!