ತುಮಕೂರು: ತಹಶೀಲ್ದಾರ್ ರಘುಮೂರ್ತಿ ಅಮಾನತಿಗೆ ಶಿಫಾರಸು ವಿಚಾರ ಸಂಬಂಧಿಸಿ ತಹಶೀಲ್ದಾರ್ ಪೋಸ್ಟಿಂಗ್ಗಾಗಿ ಬಿಜೆಪಿಗೆ 1.5 ಕೋಟಿ ಪೇಮೆಂಟ್ ಆಗಿದೆ ಎಂದು ಶಿರಾದಲ್ಲಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ತಹಶೀಲ್ದಾರ್ ಪೋಸ್ಟಿಂಗ್ಗಾಗಿ BJPಗೆ 1.5 ಕೋಟಿ ಪೇಮೆಂಟ್ ಆಗಿದೆ:
ನಾನು ಸಿಎಂ ಆಗಿದ್ದಾಗ ರಘುಮೂರ್ತಿಗೆ ಯಲಹಂಕದಲ್ಲಿ ಪೋಸ್ಟಿಂಗ್ ಮಾಡಲು ನನ್ನನ್ನು ಭೇಟಿಯಾಗಿ ಮನವಿ ಮಾಡಿದ್ದರು. ಒಂದು ಕೋಟಿ ರೂ. ಲಂಚ ನೀಡುವುದಾಗಿ ಆಮಿಷವೊಡ್ಡಿದ್ದರು. ರಘುಮೂರ್ತಿ ಕಡೆಯವರ ಆಮಿಷವನ್ನು ನಾನು ತಿರಸ್ಕರಿಸಿದ್ದೆ. ಸಮ್ಮಿಶ್ರ ಸರ್ಕಾರ ಪತನ ನಂತರ ಬಿಜೆಪಿ ಅಧಿಕಾರಕ್ಕೆ ಬಂತು. ಬಿಜೆಪಿ ಸರ್ಕಾರ ರಘುಮೂರ್ತಿಗೆ ಬೆಂಗಳೂರಿನ ಯಲಹಂಕ ತಹಶೀಲ್ದಾರ್ ಆಗಿ ಪೋಸ್ಟಿಂಗ್ ನೀಡಿತ್ತು.
ಯಲಹಂಕ ಶಾಸಕರಿಗೂ 50 ಲಕ್ಷ ಹಣ ಹೋಗಿದೆ
ಪೋಸ್ಟಿಂಗ್ಗಾಗಿ ಬಿಜೆಪಿಗೆ 1.5 ಕೋಟಿ ಪೇಮೆಂಟ್ ಆಗಿದೆ. ಯಲಹಂಕ ಕ್ಷೇತ್ರದ ಶಾಸಕರಿಗೂ 50 ಲಕ್ಷ ಹಣ ಹೋಗಿದೆ. ಇಂಥ ತಹಶೀಲ್ದಾರ್ ಸಸ್ಪೆಂಡ್ಗೆ ಈಗ ಶಿಫಾರಸು ಮಾಡಿದ್ದಾರೆ ಎಂದು ತುಮಕೂರು ಜಿಲ್ಲೆ ಶಿರಾದಲ್ಲಿ ಹೆಚ್.ಡಿ.ಕುಮಾರಸ್ವಾಮಿ ಬಿಜೆಪಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
Published On - 5:33 pm, Wed, 30 September 20