ಬಿಜೆಪಿ ಸಭ್ಯತೆಯೂ ಗೊತ್ತಿರದ ಒಂದು ಅನಾಗರಿಕ ಪಕ್ಷ: ಎಚ್ ಡಿ ಕುಮಾರಸ್ವಾಮಿ
ಯಾರೋ ಒಬ್ಬರು ಅಪರಾತ್ರಿ 12.45ಕ್ಕೆ ಗೇಟ್ ಬಳಿಯಿದ್ದ ಸೆಕ್ಯು ರಿಟಿಯವನ ಕೈಯಲ್ಲಿ ಕಾರ್ಯಕ್ರಮದ ಇನ್ವಿಟೇಶನ್ ಕೊಟ್ಟು ಹೋಗುತ್ತಾರೆ. ಶಿಷ್ಟಾಚಾರ, ಸಭ್ಯತೆ, ನಾಗರಿಕತೆ ಅಂದರೆ ಇದೇನಾ ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ರಾಮನಗರ: ಅಸ್ಮಿತೆ, ಶಿಷ್ಟಾಚಾರ ಗೊತ್ತಿರದ ಬಿಜೆಪಿ ಒಂದು ಅನಾಗರಿಕ ಪಕ್ಷ (uncivilized party) ಎಂದು ಜೆಡಿ(ಎಸ್) ಪಕ್ಷದ ಧುರೀಣ ಎಚ್ ಡಿ ಕುಮಾರಸ್ವಾಮಿ (HD Kumaraswamy) ಕಿಡಿಕಾರಿದ್ದಾರೆ. ರಾಮನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತಾಡಿದ ಕುಮಾರಸ್ವಾಮಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು ಗುರುವಾರ ರಾತ್ರಿ 9-9.30 ಗಂಟೆಗೆ ದೇವೇಗೌಡರಿಗೆ (Devegowda) ಫೋನ್ ಮಾಡಿ ಮರುದಿನ ಬೆಳಗ್ಗೆಯ ಕೆಂಪೇಗೌಡರ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಆಹ್ವಾನಿಸುತ್ತಾರೆ. ಯಾರೋ ಒಬ್ಬರು ಅಪರಾತ್ರಿ 12.45ಕ್ಕೆ ಗೇಟ್ ಬಳಿಯಿದ್ದ ಸೆಕ್ಯು ರಿಟಿಯವನ ಕೈಯಲ್ಲಿ ಕಾರ್ಯಕ್ರಮದ ಇನ್ವಿಟೇಶನ್ ಕೊಟ್ಟು ಹೋಗುತ್ತಾರೆ. ಶಿಷ್ಟಾಚಾರ, ಸಭ್ಯತೆ, ನಾಗರಿಕತೆ ಅಂದರೆ ಇದೇನಾ ಎಂದು ಕುಮಾರಸ್ವಾಮಿ ಬಿಜೆಪಿ ನಾಯಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
Latest Videos