ನಿನ್ನೆ ರಾತ್ರಿ ಸಿಎಂ BSY ತೆರಳಿದ ನಂತರ.. ಅಮಿತ್ ಶಾ ಜೊತೆ ಅನೌಪಚಾರಿಕವಾಗಿ ಚರ್ಚೆ ಮಾಡಿದ್ದೇವೆ -ಕಟೀಲು

ನಿನ್ನೆ ರಾತ್ರಿ ಸಿಎಂ ಬಿ.ಎಸ್.ಯಡಿಯೂರಪ್ಪ ತೆರಳಿದ ನಂತರ ಅಮಿತ್ ಶಾ ಜೊತೆ ಅನೌಪಚಾರಿಕವಾಗಿ ಚರ್ಚೆ ಮಾಡಿದ್ದೇವೆ ಎಂದು ಸಾಂಬ್ರಾ ಏರ್​ಪೋರ್ಟ್​ನಲ್ಲಿ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲು ಹೇಳಿದ್ದಾರೆ.

  • TV9 Web Team
  • Published On - 22:02 PM, 17 Jan 2021
ನಿನ್ನೆ ರಾತ್ರಿ ಸಿಎಂ BSY ತೆರಳಿದ ನಂತರ.. ಅಮಿತ್ ಶಾ ಜೊತೆ ಅನೌಪಚಾರಿಕವಾಗಿ ಚರ್ಚೆ ಮಾಡಿದ್ದೇವೆ -ಕಟೀಲು
ನಳಿನ್ ಕುಮಾರ್ ಕಟೀಲು

ಬೆಳಗಾವಿ: ನಿನ್ನೆ ರಾತ್ರಿ ಸಿಎಂ ಬಿ.ಎಸ್.ಯಡಿಯೂರಪ್ಪ ತೆರಳಿದ ನಂತರ ಅಮಿತ್ ಶಾ ಜೊತೆ ಅನೌಪಚಾರಿಕವಾಗಿ ಚರ್ಚೆ ಮಾಡಿದ್ದೇವೆ ಎಂದು ಸಾಂಬ್ರಾ ಏರ್​ಪೋರ್ಟ್​ನಲ್ಲಿ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲು ಹೇಳಿದ್ದಾರೆ. ಬೆಂಗಳೂರಿನ ವಿಂಡ್ಸರ್ ಮ್ಯಾನರ್​ ಹೋಟೆಲ್​ನಲ್ಲಿ ನಿನ್ನೆ ಕೋರ್​ ಕಮಿಟಿ ಸಭೆ ಬಳಿಕ ಅಮಿತ್ ಶಾ ಜೊತೆ ಪ್ರತ್ಯೇಕ ಸಭೆ ನಡೆಸಿದ್ದ ಬಗ್ಗೆ ಕಟೀಲು ಸ್ಪಷ್ಟನೆ ನೀಡಿದ್ದಾರೆ.

ನಾಯಕತ್ವ ಬದಲಾವಣೆ ಪ್ರಶ್ನೆಯಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೇ ಸ್ಪಷ್ಟಪಡಿಸಿದ್ದಾರೆ. ಮುಂದಿನ ಎರಡೂವರೆ ವರ್ಷ ಬಿಜೆಪಿ ಸರ್ಕಾರ ಇರುತ್ತದೆ ಎಂದು ಕಟೀಲು ಹೇಳಿದರು.

ಇತ್ತ, ಸಂಪುಟದಲ್ಲಿ ಸ್ಥಾನ ಸಿಗದವರು ಭಾವನೆ ವ್ಯಕ್ತಪಡಿಸಿದ್ದಾರೆ. ತಮ್ಮ ನೋವು ವ್ಯಕ್ತಪಡಿಸಿದ ಶಾಸಕರನ್ನ ಕರೆದು ಮಾತಾಡ್ತೇವೆ ಎಂದು ಕಟೀಲು ಹೇಳಿದರು.

ಬೈಎಲೆಕ್ಷನ್​ನಲ್ಲಿ ಗೆಲುವಿನ ಬಗ್ಗೆ ಅಮಿತ್ ಶಾ ಚರ್ಚಿಸಿದ್ದಾರೆ. ರಾಜ್ಯ ಬಿಜೆಪಿ ಘಟಕದಲ್ಲಿ ಯಾವುದೇ ಅಸಮಾಧಾನವಿಲ್ಲ. ಯಾರು ಬೇಕಾದರೂ ದೆಹಲಿಗೆ ಹೋಗಬಹುದು. ಸೋತವರಿಗೆ ಮಂತ್ರಿಗಿರಿ ನೀಡಿದ್ದು ಸಿಎಂ ವಿವೇಚನೆಗೆ ಬಿಟ್ಟದ್ದು ಎಂದು ಕಟೀಲು ಹೇಳಿದರು.

ಸಿಎಂ BSY ಸಭೆಯಿಂದ ನಿರ್ಗಮಿಸಿದ ಬಳಿಕವೂ ಅಮಿತ್ ಶಾ ಜೊತೆ ಚರ್ಚೆ: ಕುತೂಹಲ ಕೆರಳಿಸಿದ ನಾಯಕರ ಮೀಟಿಂಗ್