ಅವತ್ತೇ ಹೇಳಿದ್ದೇನೆ.. ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ಗೆ ನನ್ನ ಬಗ್ಗೆ ತುಂಬಾ ಪ್ರೀತಿ ಇದೆ -ಬಿ.ವೈ.ವಿಜಯೇಂದ್ರ

|

Updated on: Mar 15, 2021 | 5:46 PM

ನಾನು ಕೂಡ ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತ. ನಾನು ನರೇಂದ್ರ ಮೋದಿಯ ಬೆಂಬಲಿಗನೂ ಹೌದು ಎಂದು ನಗರದಲ್ಲಿ ಸಿಎಂ ಪುತ್ರ ವಿಜಯೇಂದ್ರ ಹೇಳಿದ್ದಾರೆ. ಆದರೆ, ನಾನು ಹಿಂದೂ ಕಾರ್ಯಕರ್ತನೂ ಹೌದು. ನನಗೆ ಹೆಮ್ಮೆ ಇದೆ ಎಂದು ಯತ್ನಾಳ್​ಗೆ ಪರೋಕ್ಷವಾಗಿ ಟಾಂಗ್​ ಕೊಟ್ಟಿದ್ದಾರೆ.

ಅವತ್ತೇ ಹೇಳಿದ್ದೇನೆ.. ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ಗೆ ನನ್ನ ಬಗ್ಗೆ ತುಂಬಾ ಪ್ರೀತಿ ಇದೆ -ಬಿ.ವೈ.ವಿಜಯೇಂದ್ರ
B.Y.ವಿಜಯೇಂದ್ರ
Follow us on

ಚಿಕ್ಕಮಗಳೂರು: ನಾನು ಪ್ರಧಾನಿ ನರೇಂದ್ರ ಮೋದಿಗೆ ಮಾತ್ರ ಬೆಂಬಲಿಗ ಎಂಬ ಶಾಸಕ ಯತ್ನಾಳ್​ ಹೇಳಿಕೆಗೆ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಪ್ರತಿಕ್ರಿಯಿಸಿದ್ದಾರೆ. ನಾನು ಕೂಡ ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತ. ನಾನು ನರೇಂದ್ರ ಮೋದಿಯ ಬೆಂಬಲಿಗನೂ ಹೌದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರ  ಪುತ್ರ ವಿಜಯೇಂದ್ರ ನಗರದಲ್ಲಿ ಹೇಳಿದ್ದಾರೆ. ಆದರೆ, ನಾನು ಹಿಂದೂ ಕಾರ್ಯಕರ್ತನೂ ಹೌದು. ನನಗೆ ಹೆಮ್ಮೆ ಇದೆ ಎಂದು ಯತ್ನಾಳ್​ಗೆ ಪರೋಕ್ಷವಾಗಿ ಟಾಂಗ್​ ಕೊಟ್ಟಿದ್ದಾರೆ.

ಶಾಸಕ ಬಸನಗೌಡ ಯತ್ನಾಳ್ ಅವರು ಹಿರಿಯರಿದ್ದಾರೆ. ಅವತ್ತೆ ಹೇಳಿದ್ದೇನೆ ನನ್ನ ಬಗ್ಗೆ ಅವರಿಗೆ ಪ್ರೀತಿ ಇದೆ ಅಂತ.
ಯತ್ನಾಳ್​​ ಪ್ರೀತಿಯಿಂದ ಮಾತನಾಡುತ್ತಾರೆ, ಬೇಸರವಿಲ್ಲ ಎಂದು ವಿಜಯೇಂದ್ರ ಹೇಳಿದರು.

ಅಂದ ಹಾಗೆ, ಈ ಹಿಂದೆ, ವಿಧಾನಸಭೆಯಲ್ಲಿ ನಾನು ಸಿಎಂ, ಬಿ.ವೈ.ವಿಜಯೇಂದ್ರ ಏಜೆಂಟ್ ಆಗಿಲ್ಲ. ಭ್ರಷ್ಟಾಚಾರಶಾಹಿ ಕುಟುಂಬದ ವಿರುದ್ಧ ನನ್ನ ಹೋರಾಟ. ನಿರಂತರವಾಗಿ ನನ್ನ ಹೋರಾಟ ಮುಂದುವರಿಯುತ್ತದೆ ಎಂದು ಬಿಜೆಪಿ ಶಾಸಕ ಯತ್ನಾಳ್ ಹೇಳಿದ್ದರು. ನಾನು ಪ್ರಧಾನಿ ನರೇಂದ್ರ ಮೋದಿಗೆ ಮಾತ್ರ ಬೆಂಬಲಿಗ. ಮೀಸಲಾತಿ ಹೋರಾಟಕ್ಕೆ ತಾತ್ಕಾಲಿಕವಾಗಿ ಬ್ರೇಕ್​ ಕೊಟ್ಟು ಭ್ರಷ್ಟಾಚಾರದ ವಿರುದ್ಧ ಮಾತ್ರ ಹೋರಾಟ ಮಾಡುತ್ತೇನೆ ಎಂದು ಬಿಜೆಪಿ ಶಾಸಕ ಯತ್ನಾಳ್ ಹೇಳಿದ್ದರು.

‘ಯಾವ ಗಣ್ಯ ನಾಯಕರ ಕೈವಾಡವಿದೆ ಎಂಬುದರ ಬಗ್ಗೆ ತನಿಖೆ ನಂತರ ಗೊತ್ತಾಗುತ್ತೆ’
ರಮೇಶ್​ ಸಿಡಿ ಪ್ರಕರಣದ ಬಗ್ಗೆ SIT ತನಿಖೆ ನಡೆಯುತ್ತಿದೆ. ಪ್ರಕರಣದ ತನಿಖೆ ನಂತರ ಸತ್ಯಾಸತ್ಯತೆ ಹೊರ ಬರಲಿದೆ ಎಂದು ವಿಜಯೇಂದ್ರ ಹೇಳಿದರು. ಪ್ರಕರಣದ ಹಿಂದೆ ಯಾರಿದ್ದಾರೆ, ಯಾರ ಕೈವಾಡವಿದೆ. ಯಾವ ಗಣ್ಯ ನಾಯಕರ ಕೈವಾಡವಿದೆ ಎಂಬುದರ ಬಗ್ಗೆ ತನಿಖೆ ನಂತರ ಗೊತ್ತಾಗುತ್ತೆ. ಅಲ್ಲಿಯವರೆಗೂ ಕಾಯಬೇಕಾಗುತ್ತೆ ಎಂದು ವಿಜಯೇಂದ್ರ ಹೇಳಿದರು.

ತರೀಕೆರೆ ಶಾಸಕನ ವಿರುದ್ಧ ಸಿಎಂ ಬಿಎಸ್​ವೈ ಪುತ್ರನಿಗೆ ದೂರು
ಈ ನಡುವೆ, ನಗರದಲ್ಲಿ ಖಾಸಗಿ ಕಾರ್ಯಕ್ರಮಕ್ಕೆ ಭೇಟಿಕೊಟ್ಟಿದ್ದ ಬಿ.ವೈ.ವಿಜಯೇಂದ್ರ ಮುಂದೆ ಮಹಿಳೆಯೊಬ್ಬರು ಕಣ್ಣೀರಿಟ್ಟ ಘಟನೆ ಸಹ ನಡೆಯಿತು. ತರೀಕೆರೆ ಶಾಸಕನ ವಿರುದ್ಧ ಸಿಎಂ ಬಿಎಸ್​ವೈ ಪುತ್ರನಿಗೆ ಮಹಿಳೆ ದೂರು ನೀಡಿದರು.

ನ್ಯಾಯಕ್ಕಾಗಿ ವಿಜಯೇಂದ್ರ ಮುಂದೆ ಮಹಿಳೆ ಮತ್ತು ಆಕೆಯ ಕುಟುಂಬದವರು ಕಣ್ಣೀರು ಹಾಕಿದರು. ನ್ಯಾಯ ಕೊಡಿ ಇಲ್ಲವೇ ದಯಾಮರಣ ನೀಡುವಂತೆ ಮನವಿ ಮಾಡಿದರು. ವಿಜಯೇಂದ್ರನ ಕಾರಿನ ಬಳಿ ಬಂದು ಕುಟುಂಬಸ್ಥರು ಕಣ್ಣೀರು ಹಾಕಿದರು. ಪೊಲೀಸ್ ಠಾಣೆಗೆ ದೂರು ನೀಡಿದರೆ ನ್ಯಾಯ ಸಿಗುತ್ತಿಲ್ಲ. ಹಾಗಾಗಿ, ಸೂಕ್ತ ನ್ಯಾಯ ನೀಡುವಂತೆ ಸಿಎಂ BSY ಪುತ್ರನಿಗೆ ಮನವಿ ಮಾಡಿದರು.

ಮಹಿಳೆಯ ಕಣ್ಣೀರಿಗೆ ಕಾರಣವೇನು?
ಅಂದ ಹಾಗೆ, ಚಿಕ್ಕಮಗಳೂರು ಮೂಲದ ಪ್ರಸನ್ನ ಎಂಬುವವರು ತರೀಕೆರೆ ತಾಲೂಕಿನ ಲಕ್ಕವಳ್ಳಿ ಸಮೀಪ 7 ವರ್ಷಗಳ ಹಿಂದೆ ಭೂಮಿ ಖರೀದಿ ಮಾಡಿದ್ದರು. ಆದರೆ, ಜಮೀನು ಕುರಿತು ತರೀಕೆರೆ ಕ್ಷೇತ್ರದ ಬಿಜೆಪಿ ಶಾಸಕ ಸುರೇಶ್​ರಿಂದ ದೌರ್ಜನ್ಯ ಎಸಗಲಾಗುತ್ತಿದೆ. ಪ್ರಕರಣ ಕೋರ್ಟ್​ನಲ್ಲಿದ್ದರೂ ಶಾಸಕರ ಬೆಂಬಗಲಿಗರಿಂದ ದೌರ್ಜನ್ಯ, ಹಲ್ಲೆ ನಡೆದಿದೆ. ಈ ಕುರಿತು, ಠಾಣೆಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಹಾಗಾಗಿ, ನಮಗೆ ನ್ಯಾಯ ಕೊಡಿಸಿ ಎಂದು ಮಹಿಳೆ ವಿಜಯೇಂದ್ರ ಬಳಿ ಅಲವತ್ತುಕೊಂಡರು.

ಇದನ್ನೂ ಓದಿ: ನಾನು ಅಪ್ಪ-ಮಗನಿಗೆ ಏಜೆಂಟ್ ಅಲ್ಲ.. ನಾನು ಮೋದಿ ಬೆಂಬಲಿಗ ಅಷ್ಟೇ : ಬಸನಗೌಡ ಪಾಟೀಲ್ ಯತ್ನಾಳ್

Published On - 5:42 pm, Mon, 15 March 21