
ಬೆಂಗಳೂರು: ಕೊರೊನಾ ಸೋಂಕು ನಿಯಂತ್ರಣಕ್ಕೆ ಭಾರತ ಲಾಕ್‌ಡೌನ್ ಹಿನ್ನೆಲೆಯಲ್ಲಿ ವಿವಿಧ ಕಾಯಿಲೆಯಿಂದ ಬಳಲುತ್ತಿರುವವರಿಗೆ ರಕ್ತದ ಅಭಾವ ಹೆಚ್ಚಾಗಿದೆ. ರಕ್ತ ಸಿಗದೆ ಹಲವು ರೋಗಿಗಳು ಪರದಾಡುವ ಪರಿಸ್ಥಿತಿ ಉಂಟಾಗಿದೆ. ಹೀಗಾಗಿ ಕೆಪಿಟಿಸಿಎಲ್‌ನಿಂದ ರಕ್ತದಾನ ಶಿಬಿರ ಆಯೋಜನೆ ಮಾಡಲಾಗಿದೆ.
ಆನಂದ್ ರಾವ್ ಸರ್ಕಲ್ ಬಳಿ ಇರುವ ಕೆಪಿಟಿಸಿಎಲ್ ಕಚೇರಿ ಬಳಿ ಕೆಪಿಟಿಸಿಎಲ್ ಹಾಗೂ ರೆಡ್‌ಕ್ರಾಸ್ ಸಹಯೋಗದೊಂದಿಗೆ ರಕ್ತದಾನ ಶಿಬಿರ ಏರ್ಪಡಿಸಲಾಗಿದೆ. ಸ್ವತಃ ತಾವೇ ರಕ್ತದಾನ ಮಾಡುವ ಮೂಲಕ ಕೆಪಿಟಿಸಿಎಲ್ ಎಂಡಿ ಎನ್.ಮಂಜುಳ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ರು. 100ಕ್ಕೂ ಹೆಚ್ಚು ಅಧಿಕಾರಿಗಳು, ಸಿಬ್ಬಂದಿಯಿಂದ ರಕ್ತದಾನ ಮಾಡಲಾಗುತ್ತಿದೆ. ಆದರೆ ವೈದ್ಯರ ತಪಾಸಣೆ ಬಳಿಕವಷ್ಟೇ ರಕ್ತದಾನಕ್ಕೆ ಅವಕಾಶ ನೀಡಲಾಗುತ್ತಿದೆ.
Published On - 12:24 pm, Thu, 30 April 20