ಎಲ್ಪಿಜಿ ಸಿಲಿಂಡರ್ ಬುಕಿಂಗ್ ವೇಳೆ 700 ರೂಪಾಯಿ ಕ್ಯಾಶ್ಬ್ಯಾಕ್ ಪಡೆಯುವುದು ಹೇಗೆ?
ಮೊದಲ ಬಾರಿ ಪೇಟಿಎಂ ಬಳಸಿ ಗ್ಯಾಸ್ ಸಿಲಿಂಡರ್ ಬುಕ್ ಮಾಡುವವರಿಗೆ ಮಾತ್ರ ಈ ಆಫರ್ ಲಭ್ಯ. ಜನವರಿ 31ರವರೆಗಿದ್ದ ಈ ಆಫರ್ ಅನ್ನು ಇದೀಗ ಫೆಬ್ರುವರಿ 28ವರೆಗೆ ವಿಸ್ತರಣೆ ಮಾಡಲಾಗಿದೆ.
ಬೆಂಗಳೂರು: ಎಲ್ಪಿಜಿ ಸಿಲಿಂಡರ್ ರೀಫಿಲ್ಲಿಂಗ್ ಮಾಡಲು 692 ರೂಪಾಯಿ ಬೇಕು. ರೀಫಿಲ್ಲಿಂಗ್ ವೇಳೆ ₹ 700 ಕ್ಯಾಶ್ಬ್ಯಾಕ್ ಸಿಕ್ಕರೆ…! ಎಷ್ಟು ಖುಷಿ ಅಲ್ವಾ?
ಹೌದು, ಪೇಟಿಎಂ ಮೂಲಕ ಗ್ಯಾಸ್ ಸಿಲಿಂಡರ್ ಬುಕ್ ಮಾಡಿದರೆ ಕ್ಯಾಶ್ಬ್ಯಾಕ್ ಸಿಗುವ ಆಫರ್ ನೀಡಿದೆ ಪೇಟಿಎಂ. ಜನವರಿ 31ರವರೆಗಿದ್ದ ಈ ಆಫರ್ ಇದೀಗ ಫೆ.28ವರೆಗೆ ವಿಸ್ತರಣೆಯಾಗಿದೆ.
ಕ್ಯಾಶ್ಬ್ಯಾಕ್ ಪಡೆಯುವುದು ಹೇಗೆ? ಪೇಟಿಎಂ ಆ್ಯಪ್ ಡೌನ್ಲೋಡ್ ಮಾಡಿ, ಗ್ಯಾಸ್ ಸಿಲಿಂಡರ್ ಬುಕ್ ಮಾಡುವ ಮೂಲಕ ₹ 700 ಕ್ಯಾಶ್ಬ್ಯಾಕ್ ಪಡೆಯಬಹುದಾಗಿದೆ. ಈ ರೀತಿ ಕ್ಯಾಶ್ಬ್ಯಾಕ್ ಪಡೆಯಲು ಪೇಟಿಎಂನಲ್ಲಿ ರೀಚಾರ್ಜ್ ಆಯ್ಕೆ ಕ್ಲಿಕ್ ಮಾಡಿ. ಆಮೇಲೆ ಪೇ ಬಿಲ್ಸ್ ಕ್ಲಿಕ್ ಮಾಡಿ, ಸಿಲಿಂಡರ್ ಬುಕ್ ಮಾಡಿ. ಆನಂತರ ಗ್ಯಾಸ್ ಸಿಲಿಂಡರ್ ಬುಕಿಂಗ್ ಬಗ್ಗೆ ಮಾಹಿತಿಗಳನ್ನು ಭರ್ತಿ ಮಾಡಬೇಕು. ಈ ಮಾಹಿತಿಗಳನ್ನು ತುಂಬಿದ ನಂತರ ಕ್ಯಾಶ್ಬ್ಯಾಕ್ ಪಡೆಯುವುದಕ್ಕಾಗಿ ಪ್ರೊಮೊ ಕೋಡ್ FIRSTLPG ಎಂದು ನಮೂದಿಸಿ ಗ್ಯಾಸ್ ಸಿಲಿಂಡರ್ ಬುಕ್ ಮಾಡಿ.
ಗಮನಿಸಿ, ಮೊದಲ ಬಾರಿ ಪೇಟಿಎಂ ಬಳಸಿ ಗ್ಯಾಸ್ ಸಿಲಿಂಡರ್ ಬುಕ್ ಮಾಡುವವರಿಗೆ ಮಾತ್ರ ಈ ಆಫರ್ ಲಭ್ಯ. 14.2 ಕೆಜಿ ಎಲ್ಪಿಜಿ ಸಿಲಿಂಡರ್ ಬೆಲೆ 692 ಇದೆ. ಪೇಟಿಎಂನಲ್ಲಿ ಪ್ರೊಮೊ ಕೋಡ್ ಬಳಸಿ ಮೊದಲ ಬಾರಿ ಸಿಲಿಂಡರ್ ಬುಕ್ ಮಾಡಿದರೆ ಕ್ಯಾಶ್ಬ್ಯಾಕ್ ಹಣ ನಿಮ್ಮ ಪೇಟಿಎಂ ಖಾತೆಗೆ ಜಮೆ ಆಗುತ್ತದೆ.
ಪೇಟಿಎಂ ಮೂಲಕ ಗ್ಯಾಸ್ ಸಿಲಿಂಡರ್ ಬುಕ್ ಮಾಡಿದರೆ ಏನು ಲಾಭ? ಹೊಸವರ್ಷದಲ್ಲಿ ಮೊದಲ ಬಾರಿ ಗ್ಯಾಸ್ ಸಿಲಿಂಡರ್ ಬುಕ್ ಮಾಡುವವರಿಗೆ ಮಾತ್ರ ಈ ಕ್ಯಾಶ್ ಬ್ಯಾಕ್ ಸಿಗಲಿದೆ. ಬುಕಿಂಗ್ ಮೌಲ್ಯ ಕನಿಷ್ಠ ₹500 ಇರಬೇಕು. ಕ್ಯಾಶ್ಬ್ಯಾಕ್ ಪಡೆಯಬೇಕಾದರೆ ಹಣಪಾವತಿ ಮಾಡುವ ಹೊತ್ತಲ್ಲಿ ಸಿಗುವ ಸ್ಕ್ರ್ಯಾಚ್ ಕೂಪನ್ ತೆರೆಯಬೇಕು. ಬುಕಿಂಗ್ ಮಾಡಿದ 24 ಗಂಟೆಗಳೊಳಗೆಕ್ಯಾಶ್ಬ್ಯಾಕ್ಗಿರುವ ಸ್ಕ್ರ್ಯಾಚ್ ಕೂಪನ್ ಸಿಗುತ್ತದೆ. ಒಂದು ವೇಳೆ ನೀವು 24 ಗಂಟೆಗಳೊಳಗೆ ಸ್ಕ್ರ್ಯಾಚ್ ಕಾರ್ಡ್ ತೆರೆಯದೇ ಇದ್ದರೆ, ಕ್ಯಾಶ್ ಬ್ಯಾಕ್ ಮತ್ತು ಆಫರ್ ಸೆಕ್ಷನ್ ಗೆ ಹೋಗಿ ಇದನ್ನು ತೆರೆಯಬಹುದು. ಒಂದೇ ಒಂದು ಬಾರಿ ಮಾತ್ರ ಈ ಆಫರ್ ನ್ನು ಬಳಸಬಹುದು.
Published On - 2:58 pm, Wed, 3 February 21