ಕಾಲುವೆಯಲ್ಲಿ ಈಜುವ ವೇಳೆ ನೀರುಪಾಲಾದ ಬಾಲಕ

ಕಾಲುವೆಯಲ್ಲಿ ಈಜುವ ವೇಳೆ ಬಾಲಕ ನೀರುಪಾಲಾಗಿರುವ ದುರ್ಘಟನೆ ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕಿನ ಕಾಳಾಪುರ ಗ್ರಾಮದ ಬಳಿಯ ಕಾಲುವೆಯಲ್ಲಿ ನಡೆದಿದೆ.

ಕಾಲುವೆಯಲ್ಲಿ ಈಜುವ ವೇಳೆ ನೀರುಪಾಲಾದ ಬಾಲಕ
ಬಾಲಕನ ಶವಕ್ಕಾಗಿ ಶೋಧ ಕಾರ್ಯ ಮುಂದುವರಿದಿದೆ
Updated By: ಆಯೇಷಾ ಬಾನು

Updated on: Jan 01, 2021 | 9:50 AM

ರಾಯಚೂರು: ಕಾಲುವೆಯಲ್ಲಿ ಈಜುವ ವೇಳೆ ಬಾಲಕ ನೀರುಪಾಲಾಗಿರುವ ದುರ್ಘಟನೆ ನಡೆದಿದೆ. ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕಿನ ಕಾಳಾಪುರ ಗ್ರಾಮದ ಬಳಿಯ ಕಾಲುವೆಯಲ್ಲಿ ಈ ಘಟನೆ ನಡೆದಿದೆ.

8 ವರ್ಷದ ಬಸವರಾಜು ಈಜುವ ವೇಳೆ ನೀರುಪಾಲಾದ ಬಾಲಕ. ಬಾಲಕನ ಶವಕ್ಕಾಗಿ ಶೋಧ ಕಾರ್ಯ ಮುಂದುವರಿದಿದೆ. ಲಿಂಗಸುಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.