AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೊನ್ನಾವರದ ಕಾಂಡ್ಲಾ ವಾಕ್ ಬೋರ್ಡ್​ಗೆ ಫಿದಾ.. ಸುಂದರ ಪರಿಸರದ ಮಧ್ಯೆ ಜನರ ವಾಕಿಂಗ್

ಉತ್ತರಕನ್ನಡ ಜಿಲ್ಲೆ ಅಂದ್ರೆ ಸಾಕು ಅದು ಪ್ರವಾಸಿಗರ ಹಾಟ್ ಸ್ಪಾಟ್ ಅನ್ನೋದ್ರಲ್ಲಿ ಎರಡು ಮಾತೇ ಇಲ್ಲ. ಅಂತಾ ಪ್ರವಾಸಿಗರ ಸ್ವರ್ಗದಲ್ಲೊಂದು ಕಾಂಡ್ಲಾ ವಾಕ್ ಶುರುವಾಗಿದ್ದು ಪ್ರವಾಸಿಗರನ್ನ ತನ್ನತ್ತ ಕೈಬೀಸಿ ಕರೆಯುತ್ತಿದೆ.

ಹೊನ್ನಾವರದ ಕಾಂಡ್ಲಾ ವಾಕ್ ಬೋರ್ಡ್​ಗೆ ಫಿದಾ.. ಸುಂದರ ಪರಿಸರದ ಮಧ್ಯೆ ಜನರ ವಾಕಿಂಗ್
Follow us
ಆಯೇಷಾ ಬಾನು
| Updated By: ಸಾಧು ಶ್ರೀನಾಥ್​

Updated on:Jan 01, 2021 | 9:53 AM

ಕಾರವಾರ: ನದಿ ಮತ್ತು ಸಮುದ್ರ ಸೇರೋ ಸಂಗಮ ತೀರದಲ್ಲಿ ಎತ್ತ ನೋಡಿದರತ್ತ ಸಮೃದ್ಧವಾಗಿ ಬೆಳೆದಿರುವ ಕಾಂಡ್ಲಾ ಜಾತಿಯ ಸಸ್ಯವನ. ಕಾಂಡ್ಲಾ ಗಿಡಗಳ ನಡುವೆ ನೀರಿನ ಮೇಲೆ ಸುಸಜ್ಜಿತವಾಗಿ ನಿರ್ಮಿಸಲ್ಪಟ್ಟ ವಾಕಿಂಗ್ ಪಾತ್. ಪ್ರಕೃತಿಯ ಸೌಂದರ್ಯ ವಿಯುತ್ತಾ ವಿಹರಿಸ್ತಿರೋ ಜನ. ಪಾತ್ ನಲ್ಲೇ ಸೆಲ್ಪಿ, ಫೋಟೋ ಕ್ರೇಜ್.

ಈ ದೃಶ್ಯಗಳು ಕಂಡುಬರೋದು ಉತ್ತರಕನ್ನಡ ಜಿಲ್ಲೆ ಹೊನ್ನಾವರ ತಾಲೂಕಿನ ಇಕೋ ಬೀಚ್ ಪ್ರದೇಶದಲ್ಲಿ ಇತ್ತೀಚೆಗೆ ನಿರ್ಮಾಣವಾಗಿರುವ ಮ್ಯಾಂಗ್ರೋ ಬೋರ್ಡ್ ವಾಕ್ ಪಾರ್ಕ್ ನಲ್ಲಿ. ಈ ಕಾಂಡ್ಲಾ ವಾಕ್ ಪ್ರವಾಸಿಗರನ್ನ ಕೈ ಬೀಸಿ ಕರೆಯುತ್ತಿದೆ.

ಸಮುದ್ರ ತಟದಲ್ಲಿ ಹುಲುಸಾಗಿ ಬೆಳೆಯುವ ಕಾಂಡ್ಲಾ ವನದ ನಡುವೆ ಮರದ ಹಾಸಿಗೆಯಿಂದ ವಾಕಿಂಗ್ ಪಾತ್ ಅನ್ನ ಜಿಲ್ಲಾಡಳಿತ ಮತ್ತು ಅರಣ್ಯ ಇಲಾಖೆಯ ಸಹಯೋಗದಲ್ಲಿ ನಿರ್ಮಿಸಲಾಗಿದೆ. ಇನ್ನು ಪಾತ್ ಅನ್ನ ಕಾಡು ಜಂಬೆ ಮರದ ಮೂಲಕ ನಿರ್ಮಿಸಲಾಗಿದ್ದು, ಇದು ಫೋಟೋ ಶೂಟ್ ಮತ್ತು ಸೆಲ್ಪಿ ಪ್ರಿಯರ ಹಾಟ್ ಸ್ಪಾಟ್ ಆಗಿದೆ.

ಒಟ್ನಲ್ಲಿ ವಿಶ್ವ ಮಾನ್ಯತೆ ಪಡೆದ ಇಕೋ ಬೀಚ್‌ನ ಕೂಗಳತೆ ದೂರದಲ್ಲೇ ಕಾಂಡ್ಲಾ ವಾಕ್ ಸಿದ್ದವಾಗಿದ್ದು, ಇಕೋ ಬೀಚ್​ಗೆ ಬರುವ ಪ್ರವಾಸಿಗರಂತೂ ಇಲ್ಲಿ ನಡೆಯದೇ ಮುಂದೆ ಸಾಗಲಾರರು.

ಮುರುಡೇಶ್ವರದಲ್ಲಿ ಸ್ಕೂಬಾ ಡೈವಿಂಗ್​: ಸಮುದ್ರದಾಳದ ಜಲಸಾಹಸಕ್ಕೆ ಪ್ರವಾಸಿಗರು ಫಿದಾ!

Published On - 8:55 am, Fri, 1 January 21