ಬಿಎಸ್​ಎಫ್​ ಯೋಧನಿಗೆ ಕೊರೊನಾ, ಆಟೋ ಚಾಲಕನಿಗಾಗಿ ಹುಡುಕಾಟ

|

Updated on: Jun 13, 2020 | 3:51 PM

ಆನೇಕಲ್: ದೆಹಲಿ ಮೂಲದ ಬಿಎಸ್​ಎಫ್​ ಯೋಧನಿಗೆ ಕೊರೊನಾ ಸೋಂಕು ತಗುಲಿದೆ. ಒಂದು ತಿಂಗಳು ರಜೆ ಇದ್ದಿದ್ದರಿಂದ ನಿನ್ನೆ ಸಂಬಂಧಿಕರ ಮನೆಗೆಂದು ಆನೇಕಲ್ ತಾಲೂಕಿನ ಅನಂತನಗರಕ್ಕೆ ಬಂದಿದ್ದ ‌ಯೋಧನಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ದೆಹಲಿ ಮೂಲದ ಬಿಎಸ್​ಎಫ್​ ಯೋಧ ತನಗೆ ಒಂದು ತಿಂಗಳ ರಜೆ ಸಿಕ್ಕಿದೆ ಎಂದು ನಿನ್ನೆ ಟ್ರೈನ್ ಮೂಲಕ ತಮ್ಮ ಸಂಬಂಧಿಕರ ಮನೆಗೆ ಬಂದಿದ್ದರು. ನಿನ್ನೆ ಬಂದ ತಕ್ಷಣ ಕೊರೊನಾ ನಾರಾಯಣ ಹೃದಯಾಲಯದಲ್ಲಿ ಕೊರೊನಾ ಟೆಸ್ಟ್ ಮಾಡಿಸಿದ್ದಾರೆ. ಈ ವೇಳೆ ಅವರಿಗೆ ಸೋಂಕು ಇರುವುದು ಗೊತ್ತಾಗಿದೆ. […]

ಬಿಎಸ್​ಎಫ್​ ಯೋಧನಿಗೆ ಕೊರೊನಾ, ಆಟೋ ಚಾಲಕನಿಗಾಗಿ ಹುಡುಕಾಟ
Follow us on

ಆನೇಕಲ್: ದೆಹಲಿ ಮೂಲದ ಬಿಎಸ್​ಎಫ್​ ಯೋಧನಿಗೆ ಕೊರೊನಾ ಸೋಂಕು ತಗುಲಿದೆ. ಒಂದು ತಿಂಗಳು ರಜೆ ಇದ್ದಿದ್ದರಿಂದ ನಿನ್ನೆ ಸಂಬಂಧಿಕರ ಮನೆಗೆಂದು ಆನೇಕಲ್ ತಾಲೂಕಿನ ಅನಂತನಗರಕ್ಕೆ ಬಂದಿದ್ದ ‌ಯೋಧನಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.

ದೆಹಲಿ ಮೂಲದ ಬಿಎಸ್​ಎಫ್​ ಯೋಧ ತನಗೆ ಒಂದು ತಿಂಗಳ ರಜೆ ಸಿಕ್ಕಿದೆ ಎಂದು ನಿನ್ನೆ ಟ್ರೈನ್ ಮೂಲಕ ತಮ್ಮ ಸಂಬಂಧಿಕರ ಮನೆಗೆ ಬಂದಿದ್ದರು. ನಿನ್ನೆ ಬಂದ ತಕ್ಷಣ ಕೊರೊನಾ ನಾರಾಯಣ ಹೃದಯಾಲಯದಲ್ಲಿ ಕೊರೊನಾ ಟೆಸ್ಟ್ ಮಾಡಿಸಿದ್ದಾರೆ. ಈ ವೇಳೆ ಅವರಿಗೆ ಸೋಂಕು ಇರುವುದು ಗೊತ್ತಾಗಿದೆ. ಇದೀಗ‌ ಹೆಚ್ಚಿನ ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಯೋಧ ರೈಲ್ವೆ ನಿಲ್ದಾಣದಿಂದ ಆಟೋದಲ್ಲಿ ಬಂದಿದ್ದು, ಚಾಲಕನಿಗಾಗಿ ಹುಡುಕಾಟ ಶುರುವಾಗಿದೆ.

Published On - 10:09 am, Sat, 13 June 20