Budget 2021 | ಬಜೆಟ್​ ಮಂಡನೆಗೂ ಮುನ್ನ ಷೇರು ಮಾರುಕಟ್ಟೆಯಲ್ಲಿ ಉತ್ಸಾಹ: ಏರಿಳಿತದ ನಿರೀಕ್ಷೆ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Feb 01, 2021 | 10:37 AM

ಸಾಕಷ್ಟು ಷೇರುಗಳು ಇಂದು ಏರಿಕೆ ಮಟ್ಟದಲ್ಲಿ ವಹಿವಾಟು ನಡೆಸುತ್ತಿದೆ. ಐಸಿಐಸಿಐ ಬ್ಯಾಂಕ್​, ಟೈಟಾನ್​ ಕಂಪೆನಿ, ಎಚ್​​ಡಿಎಫ್​ಸಿ, ಇನ್​ಫೋಸಿಸ್​ ಷೇರುಗಳು ಉತ್ತಮ ಪ್ರದರ್ಶನ ನೀಡುತ್ತಿವೆ.

Budget 2021 | ಬಜೆಟ್​ ಮಂಡನೆಗೂ ಮುನ್ನ ಷೇರು ಮಾರುಕಟ್ಟೆಯಲ್ಲಿ ಉತ್ಸಾಹ: ಏರಿಳಿತದ ನಿರೀಕ್ಷೆ
ಸಾಂದರ್ಭಿಕ ಚಿತ್ರ
Follow us on

ಮುಂಬೈ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಇಂದು ಬಜೆಟ್​ ಮಂಡನೆ ಮಾಡಲಿದ್ದಾರೆ. ಕೊರೊನಾ ವೈರಸ್​​ನಿಂದ ಸೊರಗಿದ್ದ ಆರ್ಥಿಕತೆ  ಚೇತರಿಸಿಕೊಳ್ಳುತ್ತಿದ್ದು, ಇಂದಿನ ಬಜೆಟ್​ನಲ್ಲಿ ಇದಕ್ಕೆ ಔಷಧ ಸಿಗುವ ನಿರೀಕ್ಷೆ ಇದೆ. ಹೀಗಾಗಿ, ಇಂದು ಷೇರುಪೇಟೆಯಲ್ಲಿ ಮುಂಜಾನೆಯೇ ಉತ್ಸಾಹದ ಮೂಡ್ ಕಾಣಿಸಿದೆ.

10 ಗಂಟೆ ಸುಮಾರಿಗೆ ಮುಂಬೈ ಷೇರುಪೇಟೆಯ ಸಂವೇದಿ ಸೂಚ್ಯಂಕ BSE 462 ಅಂಶಗಳಷ್ಟು ಏರಿಕೆ ಕಂಡಿದ್ದು 46,7483 ತಲುಪಿದೆ. ರಾಷ್ಟ್ರೀಯ ಸಂವೇದಿ ಸೂಚ್ಯಂಕ NIFTY 114.85 ಅಂಶಗಳಷ್ಟು ಏರಿಕೆ ದಾಖಲಿಸಿದೆ. 13,749.45ರ ಮಟ್ಟದಲ್ಲಿ ವಹಿವಾಟು ನಡೆಯುತ್ತಿದೆ. ಇನ್ನು ನಿಫ್ಟಿ ಬ್ಯಾಂಕ್​ 539 ಅಂಕ ಏರಿಕೆ ಕಂಡು 31,095 ಆಗಿದೆ.

ಇನ್ನು, ಸಾಕಷ್ಟು ಷೇರುಗಳು ಇಂದು ಏರಿಕೆ ಮಟ್ಟದಲ್ಲಿ ವಹಿವಾಟು ನಡೆಸುತ್ತಿದೆ. ಐಸಿಐಸಿಐ ಬ್ಯಾಂಕ್​, ಟೈಟಾನ್​ ಕಂಪೆನಿ, ಎಚ್​​ಡಿಎಫ್​ಸಿ, ಇನ್​ಫೋಸಿಸ್​ ಷೇರುಗಳು ಉತ್ತಮ ಪ್ರದರ್ಶನ ನೀಡುತ್ತಿವೆ.

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ 11 ಗಂಟೆಗೆ ಬಜೆಟ್​ ಮಂಡನೆ ಮಾಡಲಿದ್ದಾರೆ. ಈ ವೇಳೆ ಷೇರು ಮಾರುಕಟ್ಟೆಯಲ್ಲಿ ಭಾರೀ ಏರಿಳಿತ ಕಾಣುವ ನಿರೀಕ್ಷೆ ಇದೆ. ಕೇಂದ್ರ ಸರ್ಕಾರ ಆರ್ಥಿಕತೆಗೆ ಹೆಚ್ಚು ಒತ್ತು ನೀಡಿದರೆ, ಸ್ಟಾಕ್​ ಮಾರ್ಕೆಟ್​ನಲ್ಲಿ ಗೂಳಿ ಓಟ ನಿರೀಕ್ಷೆ ಮಾಡಬಹುದು. ಕಳೆದ ವಾರ ಷೇರು ಮಾರುಕಟ್ಟೆಯಲ್ಲಿ ಭಾರೀ ಇಳಿತ ಕಂಡಿತ್ತು.

Budget 2021 LIVE: ಇಂದು ಕೇಂದ್ರ ಬಜೆಟ್​.. ಸೊರಗಿರುವ ಆರ್ಥಿಕತೆಗೆ ನಿರ್ಮಲಾ ನೀಡಲಿದ್ದಾರಾ ಮದ್ದು?

Published On - 10:37 am, Mon, 1 February 21