ಡಿಸಿ, ಎಸ್​ಪಿ ಜಾಗರಣೆ ನಡುವೆಯೂ ದೇವಿಗೆ ಕೋಣ ಬಲಿ ಕೊಟ್ಟ ಗ್ರಾಮಸ್ಥರು!

ದಾವಣಗೆರೆ: ಪ್ರಾಣಿ ಬಲಿ‌ ನಿಷೇಧದ ನಡುವೆಯೂ ದುಗ್ಗಮ್ಮ ಜಾತ್ರೆಯಲ್ಲಿ ಕೋಣ ಬಲಿ ನೀಡಿರುವ ಘಟನೆ ತಡರಾತ್ರಿ ನಡೆದಿದೆ. ದುಗ್ಗಮ್ಮ ಜಾತ್ರೆಯಲ್ಲಿ ‌ಕೋಣ ಬಲಿ ನೀಡುವುದೇ ವಿಶೇಷ. ಹಾಗಾಗಿ ಜಿಲ್ಲಾಡಳಿತ‌ ಕಟ್ಟು‌ ನಿಟ್ಟಿನ ಕ್ರಮದ ಹಿನ್ನೆಲೆಯಲ್ಲಿ ದೇವಸ್ಥಾನದಿಂದ ಸ್ವಲ್ಪ ದೂರದಲ್ಲಿ ಕೋಣವನ್ನು ಬಲಿ ನೀಡಿ, ಭಕ್ತರು ದೇವರಿಗೆ ನೈವೇದ್ಯಕ್ಕೆ ಇಟ್ಟಿದ್ದಾರೆ. ಇದಕ್ಕೂ ಮುನ್ನ ದೇವಿಗೆ ಕೋಣ ಬಲಿ ಕೊಡಲು ಭಕ್ತರು ಸಿದ್ಧತೆ ಮಾಡಿಕೊಂಡಿದ್ದರು. ಆದ್ರೆ ಕೋಣ ಬಲಿ ನೀಡಿದರೆ ಕ್ರಮ ಜರುಗಿಸುವುದಾಗಿ ಜಿಲ್ಲಾಡಳಿತ ಮತ್ತು ಪೊಲೀಸರು ಎಚ್ಚರಿಕೆ ನೀಡಿದ್ದರು. […]

ಡಿಸಿ, ಎಸ್​ಪಿ ಜಾಗರಣೆ ನಡುವೆಯೂ ದೇವಿಗೆ ಕೋಣ ಬಲಿ ಕೊಟ್ಟ ಗ್ರಾಮಸ್ಥರು!
ಸಾಧು ಶ್ರೀನಾಥ್​

Updated on: Mar 04, 2020 | 12:50 PM

ದಾವಣಗೆರೆ: ಪ್ರಾಣಿ ಬಲಿ‌ ನಿಷೇಧದ ನಡುವೆಯೂ ದುಗ್ಗಮ್ಮ ಜಾತ್ರೆಯಲ್ಲಿ ಕೋಣ ಬಲಿ ನೀಡಿರುವ ಘಟನೆ ತಡರಾತ್ರಿ ನಡೆದಿದೆ. ದುಗ್ಗಮ್ಮ ಜಾತ್ರೆಯಲ್ಲಿ ‌ಕೋಣ ಬಲಿ ನೀಡುವುದೇ ವಿಶೇಷ. ಹಾಗಾಗಿ ಜಿಲ್ಲಾಡಳಿತ‌ ಕಟ್ಟು‌ ನಿಟ್ಟಿನ ಕ್ರಮದ ಹಿನ್ನೆಲೆಯಲ್ಲಿ ದೇವಸ್ಥಾನದಿಂದ ಸ್ವಲ್ಪ ದೂರದಲ್ಲಿ ಕೋಣವನ್ನು ಬಲಿ ನೀಡಿ, ಭಕ್ತರು ದೇವರಿಗೆ ನೈವೇದ್ಯಕ್ಕೆ ಇಟ್ಟಿದ್ದಾರೆ.

ಇದಕ್ಕೂ ಮುನ್ನ ದೇವಿಗೆ ಕೋಣ ಬಲಿ ಕೊಡಲು ಭಕ್ತರು ಸಿದ್ಧತೆ ಮಾಡಿಕೊಂಡಿದ್ದರು. ಆದ್ರೆ ಕೋಣ ಬಲಿ ನೀಡಿದರೆ ಕ್ರಮ ಜರುಗಿಸುವುದಾಗಿ ಜಿಲ್ಲಾಡಳಿತ ಮತ್ತು ಪೊಲೀಸರು ಎಚ್ಚರಿಕೆ ನೀಡಿದ್ದರು. ಹೀಗಾಗಿ ಜಿಲ್ಲಾಧಿಕಾರಿ ಹಾಗೂ ಎಸ್‌ಪಿ ಸಮ್ಮುಖದಲ್ಲಿ ಸಿರಿಂಜ್ ಮೂಲಕ ದೇವಿಗೆ ಕೋಣದ ರಕ್ತ ಅರ್ಪಣೆ ಮಾಡಿದ್ದರು.

ಮತ್ತೆ ಗ್ರಾಮಸ್ಥರು ದೇವಿಗೆ ಕೋಣ ಬಲಿ ನೀಡುವ ಸಾಧ್ಯತೆ ಹಿನ್ನೆಲೆಯಲ್ಲಿ ದೇವಾಲಯದ 100 ಮೀಟರ್ ವ್ಯಾಪ್ತಿಯಲ್ಲಿ ಒಂದು ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಲಾಗಿತ್ತು. ಕೋಣ ಬಲಿ‌ ತಡೆಯಲು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನಮಂತರಾಯ ದೇವಸ್ಥಾನದ ಬಳಿ ಇಡೀ ರಾತ್ರಿ ಜಾಗರಣೆ ಇದ್ದರು. ಆದ್ರೂ ಸಹ ಅಧಿಕಾರಿಗಳ ಕಣ್ತಪ್ಪಿಸಿ ಭಕ್ತರು ದೇವಿಗೆ ಕೋಣವನ್ನು ಬಲಿ ನೀಡಿದ್ದಾರೆ.


Published On - 12:02 pm, Wed, 4 March 20

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Loading...
Unable to load recommendations.
Follow Us