Retirement Savings Plan ನಿವೃತ್ತಿಯ ನಂತರದ ಆರ್ಥಿಕ ಸಬಲತೆಗೆ ಹೂಡಿಕೆಯ ಆಯ್ಕೆಗಳು ಇಲ್ಲಿವೆ

ನಿವೃತ್ತಿಯ ನಂತರ ಎಲ್ಲಿ ಹೂಡಿಕೆ ಮಾಡಬಹುದು? ಯಾವ ಯೋಜನೆಗಳು ಉತ್ತಮ ಎಂದು ನೀವು ಯೋಚಿಸಿದ್ದರೆ ಇಲ್ಲಿದೆ ಆಯ್ಕೆ

Retirement Savings Plan ನಿವೃತ್ತಿಯ ನಂತರದ ಆರ್ಥಿಕ ಸಬಲತೆಗೆ ಹೂಡಿಕೆಯ ಆಯ್ಕೆಗಳು ಇಲ್ಲಿವೆ
ಸಾಂದರ್ಭಿಕ ಚಿತ್ರ
Follow us
shruti hegde
|

Updated on:Feb 05, 2021 | 2:15 PM

ಬೆಂಗಳೂರು: ನಿವೃತ್ತಿ ಎಂದರೆ ದುಡಿಮೆಯ ಮೂಲಕ ಗಳಿಸುವ ಅವಧಿಯ ಅಂತ್ಯ ಎಂದು ಹೇಳಬಹುದು. ಹಾಗಿದ್ದಲ್ಲಿ, ನಿವೃತ್ತಿಯ ನಂತರ ಬಂಡವಾಳವನ್ನು ಹೂಡುವುದು ಅನೇಕರಿಗೆ ದೊಡ್ಡ ಸವಾಲಾಗಿದೆ. ಈ ನಿಟ್ಟಿನಲ್ಲಿ, ನಿವೃತ್ತರಿಗೆ ತಿಂಗಳ ವೆಚ್ಚಕ್ಕಾಗಿ ಹೂಡಿಕೆ ಆಯ್ಕೆಗಳು ಯಾವುದಿರಬಹುದು ಎಂಬ ಪ್ರಶ್ನೆ ಎಲ್ಲರಿಗೂ ಮೂಡುತ್ತದೆ.  ನಿವೃತ್ತಿಯ ಜೀವನದ ನಂತರ ಆರ್ಥಿಕ ಸಬಲತೆ ಕಾಣುವುದು ಹೇಗೆ ಎಂಬ ಗೊಂದಲಕ್ಕೆ ಪರಿಹಾರ ಇಲ್ಲಿದೆ.

ಹಿರಿಯ ನಾಗರಿಕರ ಉಳಿತಾಯ ಯೋಜನೆ (SCSS): ಸಾಮಾನ್ಯವಾಗಿ ನಿವೃತ್ತಿ ಜೀವನದ ನಂತರದಲ್ಲಿ ಮೊದಲ ಆಯ್ಕೆ SCSS. ಹೆಸರೇ ಸೂಚಿಸುವಂತೆ, ಈ ಯೋಜನೆ ಹಿರಿಯ ನಾಗರಿಕರಿಗೆ ಅಥವಾ  ನಿವೃತ್ತಿ ಅವಧಿಗೆ ಮುನ್ನವೇ  ನಿವೃತ್ತಿ ಘೋಷಿಸಿದನವರಿಗೆ ಮಾತ್ರ ಲಭ್ಯವಾಗುವಂಥದ್ದು. SCSS ಅನ್ನು 60 ವರ್ಷಕ್ಕಿಂತ ಮೇಲ್ಪಟ್ಟ ಯಾರಾದರೂ ಪೋಸ್ಟ್ ಆಫೀಸ್ ಅಥವಾ ಬ್ಯಾಂಕಿನಿಂದ ಪಡೆಯಬಹುದು. SCSS 5 ವರ್ಷಗಳ ಅವಧಿಯನ್ನು ಹೊಂದಿರುತ್ತದೆ.

ಪ್ರಸ್ತುತ, SCSSನಲ್ಲಿನ ಬಡ್ಡಿದರವು ವಾರ್ಷಿಕ ಶೇ 8.6 ರಷ್ಟಿದೆ. ದರಗಳನ್ನು ಪ್ರತಿ ತ್ರೈಮಾಸಿಕದಲ್ಲಿ ನಿಗದಿಪಡಿಸಲಾಗುತ್ತದೆ. ಹಾಗೂ ಒಬ್ಬರು ಒಂದಕ್ಕಿಂತ ಹೆಚ್ಚು ಖಾತೆಗಳನ್ನು ತೆರೆಯಬಹುದು.  ಹಾಗೂ SCSSನಲ್ಲಿನ ಹೂಡಿಕೆ ಸೆಕ್ಷನ್ 80 C ಯಲ್ಲಿ ತೆರಿಗೆ ಪ್ರಯೋಜನಗಳು ಅಧಿಕವಾಗಿವೆ.

ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ (POMIS) ಖಾತೆ: POMIS 5 ವರ್ಷಗಳ ಹೂಡಿಕೆಯಾಗಿದ್ದು, ಜಂಟಿ ಮಾಲೀಕತ್ವದಲ್ಲಿ ಗರಿಷ್ಠ 9 ಲಕ್ಷ ರೂ. ಮತ್ತು ಏಕ ಮಾಲೀಕತ್ವದಲ್ಲಿ 4.5 ಲಕ್ಷ ರೂ. ಆಗಿರುತ್ತದೆ. ಪ್ರತಿ ತ್ರೈಮಾಸಿಕದಲ್ಲಿ ಬಡ್ಡಿದರವನ್ನು ನಿಗದಿಪಡಿಸಲಾಗುತ್ತಿದ್ದು, ಪ್ರಸ್ತುತ ವಾರ್ಷಿಕ ಶೇ 7.8 ರಷ್ಟಿದೆ. POMIS ನಿಂದ ಹೂಡಿಕೆಯಲ್ಲಿ ಯಾವುದೇ ತೆರಿಗೆ ಪ್ರಯೋಜನ ಪಡೆಯಲು ಸಾಧ್ಯವಿಲ್ಲ. ಮತ್ತು ಬಡ್ಡಿಗೆ ಸಂಪೂರ್ಣವಾಗಿ ತೆರಿಗೆ ವಿಧಿಸಲಾಗುತ್ತದೆ.

ಪ್ರತಿ ತಿಂಗಳು ಅಂಚೆ ಕಚೇರಿಗೆ ಹೋಗುವ ಬದಲು, ಬಡ್ಡಿಯನ್ನು ನೇರವಾಗಿ ಅದೇ ಅಂಚೆ ಕಚೇರಿಯ ಉಳಿತಾಯ ಖಾತೆಗೆ ಜಮಾ ಮಾಡಬಹುದು. ಅಲ್ಲದೆ, ಉಳಿತಾಯ ಖಾತೆಯಿಂದ ಬಡ್ಡಿಯನ್ನು ಸ್ವಯಂಚಾಲಿತವಾಗಿ  ಠೇವಣಿಗೆ ವರ್ಗಾಯಿಸಬಹುದು.

ಬ್ಯಾಂಕ್ ಸ್ಥಿರ ಠೇವಣಿ (FD): FD ಕೂಡ ನಿವೃತ್ತಿ ನಂತರದ ಹೂಡಿಕೆಗೆ ಒಳ್ಳೆಯ ಆಯ್ಕೆ. ಹಾಗೂ ಹೆಚ್ಚು ಸುರಕ್ಷತೆಯೂ ಹೌದು. ಈ ಖಾತೆಯನ್ನು ಬಳಸುವುದರ ವಿಧಾನ ಕೂಡ ಸುಲಭ. ಆದರೆ, ಕಳೆದ ಕೆಲವು ವರ್ಷಗಳಿಂದ ಬಡ್ಡಿದರ ಕುಸಿಯುತ್ತಿದೆ. ಪ್ರಸ್ತುತ, ಇದು 1-10 ವರ್ಷಗಳ ಅವಧಿಯವರೆಗೆ ವಾರ್ಷಿಕ ಶೇ 7.25 ರಷ್ಟಿದೆ. ಹಿರಿಯ ನಾಗರಿಕರು ಬ್ಯಾಂಕನ್ನು ಅವಲಂಬಿಸಿ ವಾರ್ಷಿಕ ಶೇ 0.25-0.5 ರಷ್ಟು ಹೆಚ್ಚುವರಿ ಪಡೆಯಬಹುದಾಗಿದೆ. ಕೆಲವು ಬ್ಯಾಂಕುಗಳು ಹಿರಿಯರಿಗೆ ಶೇ 7.75 ರಷ್ಟು ದೀರ್ಘಾವಧಿಯ ಠೇವಣಿಗಳ ಮೇಲೆ ಬಡ್ಡಿ ನೀಡುತ್ತವೆ.

ತೆರಿಗೆ ಉಳಿಸಲು ಬಯಸುವವರಿಗೆ, 5 ವರ್ಷಗಳ ತೆರಿಗೆ ಉಳಿತಾಯ ಬ್ಯಾಂಕ್ FD ಉತ್ತಮ ಆಯ್ಕೆಯಾಗಿದೆ. ಇಲ್ಲಿ ಮಾಡಿದ ಹೂಡಿಕೆಯು ಸೆಕ್ಷನ್ 80 C ತೆರಿಗೆ ಪ್ರಯೋಜನ  ಪಡೆಯಬಹುದು. ಬಡ್ಡಿ ಆದಾಯವು ತೆರಿಗೆಗೆ ಒಳಪಟ್ಟಿದ್ದರೂ ಸಹ, ಕನಿಷ್ಠ ಹೂಡಿಕೆಯ ವರ್ಷದಲ್ಲಿ ಉಳಿಸಿದ ತೆರಿಗೆಯ ಮೊತ್ತವನ್ನು ನಿಗದಿಪಡಿಸಲಾಗಿದೆ. ಹೆಚ್ಚಿನ ಬ್ಯಾಂಕುಗಳು ತೆರಿಗೆ ರಹಿತ ಉಳಿತಾಯ ಠೇವಣಿ ದರಗಳಿಗಿಂತ ಸ್ವಲ್ಪ ಕಡಿಮೆ ದರವನ್ನು ನೀಡುತ್ತವೆ.

ತೆರಿಗೆ ರಹಿತ ಬಾಂಡ್‌ಗಳು: ತೆರಿಗೆ ಮುಕ್ತ ಬಾಂಡ್‌ಗಳು ಪ್ರಸ್ತುತ ಪ್ರಾಥಮಿಕ ಮಾರುಕಟ್ಟೆಯಲ್ಲಿ ಲಭ್ಯವಿಲ್ಲ. ಇವುಗಳನ್ನು ಮುಖ್ಯವಾಗಿ ಸರ್ಕಾರಿ ಬೆಂಬಲಿತ ಸಂಸ್ಥೆಗಳಾದ ಇಂಡಿಯನ್ ರೈಲ್ವೆ ಫೈನಾನ್ಸ್ ಕಾರ್ಪೊರೇಶನ್ ಲಿಮಿಟೆಡ್ (IRFC), ಪವರ್ ಫೈನಾನ್ಸ್ ಕಾರ್ಪೊರೇಶನ್ ಲಿಮಿಟೆಡ್ (PFC), ನ್ಯಾಷನಲ್ ಹೆದ್ದಾರಿ ಪ್ರಾಧಿಕಾರ (NHAI), ವಸತಿ ಮತ್ತು ನಗರಾಭಿವೃದ್ಧಿ ನಿಗಮ ಲಿಮಿಟೆಡ್ (HUDCO), ಗ್ರಾಮೀಣ ವಿದ್ಯುದ್ಧೀಕರಣ ನಿಗಮ ಲಿಮಿಟೆಡ್ (REC), ಎನ್‌ಟಿಪಿಸಿ ಲಿಮಿಟೆಡ್ ಮತ್ತು ಭಾರತೀಯ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ಸಂಸ್ಥೆ, ಮತ್ತು ಹೆಚ್ಚಿನ ಸುರಕ್ಷತಾ ರೇಟಿಂಗ್‌ಗಳನ್ನು ಹೊಂದಿವೆ.

ನಿವೃತ್ತಿ ಹೊಂದಿದವರು ತೆರಿಗೆ ರಹಿತ ಬಾಂಡ್‌ಗಳಲ್ಲಿ ಹೂಡಿಕೆ ಮಾಡುವ ಮೊದಲು ಅವು ದೀರ್ಘಕಾಲೀನ ಹೂಡಿಕೆಗಳಾಗಿವೆಯೇ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು. ದೀರ್ಘಾವಧಿಯವರೆಗೆ ನಿಮಗೆ ಹಣದ ಅಗತ್ಯವಿರುವುದಿಲ್ಲ ಎಂದು ನಿಮಗೆ ಖಚಿತವಾಗಿದ್ದರೆ ಮಾತ್ರ ಅವುಗಳಲ್ಲಿ ಹೂಡಿಕೆ ಮಾಡುವುದು ಉತ್ತಮ.

ತಕ್ಷಣದಿಂದ ಜಾರಿಯಾಗುವ ವರ್ಷಾಶನ ಯೋಜನೆ ನಿವೃತ್ತರು ಜೀವ ವಿಮಾ ಕಂಪನಿಗಳ ತಕ್ಷಣದ ವರ್ಷಾಶನ ಯೋಜನೆಗಳನ್ನು ಸಹ ಪರಿಗಣಿಸಬಹುದು. ಪಿಂಚಣಿಯು ಪ್ರಸ್ತುತ ವಾರ್ಷಿಕ 5-6ರಷ್ಟಿದೆ. ಮತ್ತು ಸಂಪೂರ್ಣವಾಗಿ ತೆರಿಗೆ ವಿಧಿಸುತ್ತದೆ. ಆದಾಗ್ಯೂ, ಹೂಡಿಕೆದಾರರಿಗೆ ಬಂಡವಾಳವನ್ನು ಹಿಂದಿರುಗಿಸುವ ಯಾವುದೇ ಅವಕಾಶವಿಲ್ಲ. ಸುಮಾರು 7-10 ವಿಭಿನ್ನ ಪಿಂಚಣಿ ಆಯ್ಕೆಗಳಿವೆ. ಇದರಲ್ಲಿ ಜೀವಿತಾವಧಿಯಲ್ಲಿ ಪಿಂಚಣಿ, ಮರಣದ ನಂತರ ಸಂಗಾತಿಗೆ ಹೀಗೆ ಅನೇಕ ಆಯ್ಕೆಗಳಿವೆ.

Budget 2021 Explainer | ಆದಾಯ ತೆರಿಗೆ ಉಳಿಸಲು ಇಷ್ಟೆಲ್ಲಾ ಮಾರ್ಗಗಳಿವೆ

Published On - 12:17 pm, Fri, 5 February 21

ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ