12 ಐಎಎಸ್ ಅಧಿಕಾರಿಗಳ​ ವರ್ಗ: ಶಿಖಾ ಇನ್ನು ಬಿಎಂಟಿಸಿ ಸಾರಥಿ

ರಾಜ್ಯ ಸರ್ಕಾರ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಶುಕ್ರವಾರ ಆದೇಶಿಸಿದೆ. ಈ ವೇಳೆಬೆಂಗಳೂರು ನಗರದಲ್ಲಿ 2 ಪ್ರಮುಖ ಹುದ್ದೆಗಳಿಗೆ ಮಹಿಳಾ ಐಎಎಸ್ ಅಧಿಕಾರಿಗಳನ್ನು ನೇಮಕ ಮಾಡಿ ಆದೇಶಿಸಿದೆ. ಸಿ.ಶಿಖಾ ಅವರನ್ನು ಎನ್.ವಿ.ಪ್ರಸಾದ್ ಅವರ ಸ್ಥಾನಕ್ಕೆ ಬಿಎಂಟಿಸಿ ಎಂಡಿಯಾಗಿ ನೇಮಕ ಮಾಡಲಾಗಿದೆ. ಜೊತೆಗೆ ಶಿಖಾ ಅವರಿಗೆ ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮದ ಎಂಡಿ ಆಗಿಯೂ ಉಸ್ತುವಾರಿ ವಹಿಸಲಾಗಿದೆ. ಮತ್ತೋರ್ವ ಮಹಿಳಾ ಐಎಎಸ್ ಅಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಅವರನ್ನು ಬೆಂಗಳೂರು ಸ್ಮಾರ್ಟ್ ಸಿಟಿ ಕಾರ್ಪೊರೇಶನ್ […]

12 ಐಎಎಸ್ ಅಧಿಕಾರಿಗಳ​ ವರ್ಗ: ಶಿಖಾ ಇನ್ನು ಬಿಎಂಟಿಸಿ ಸಾರಥಿ

Updated on: Sep 10, 2019 | 6:27 PM

ರಾಜ್ಯ ಸರ್ಕಾರ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಶುಕ್ರವಾರ ಆದೇಶಿಸಿದೆ. ಈ ವೇಳೆಬೆಂಗಳೂರು ನಗರದಲ್ಲಿ 2 ಪ್ರಮುಖ ಹುದ್ದೆಗಳಿಗೆ ಮಹಿಳಾ ಐಎಎಸ್ ಅಧಿಕಾರಿಗಳನ್ನು ನೇಮಕ ಮಾಡಿ ಆದೇಶಿಸಿದೆ.

ಸಿ.ಶಿಖಾ ಅವರನ್ನು ಎನ್.ವಿ.ಪ್ರಸಾದ್ ಅವರ ಸ್ಥಾನಕ್ಕೆ ಬಿಎಂಟಿಸಿ ಎಂಡಿಯಾಗಿ ನೇಮಕ ಮಾಡಲಾಗಿದೆ. ಜೊತೆಗೆ ಶಿಖಾ ಅವರಿಗೆ ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮದ ಎಂಡಿ ಆಗಿಯೂ ಉಸ್ತುವಾರಿ ವಹಿಸಲಾಗಿದೆ.

ಮತ್ತೋರ್ವ ಮಹಿಳಾ ಐಎಎಸ್ ಅಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಅವರನ್ನು ಬೆಂಗಳೂರು ಸ್ಮಾರ್ಟ್ ಸಿಟಿ ಕಾರ್ಪೊರೇಶನ್ ಲಿಮಿಟೆಡ್ ಎಂಡಿ ಆಗಿ ನೇಮಕ ಮಾಡಲಾಗಿದೆ. ಒಟ್ಟಾರೆಯಾಗಿ 12 ಐಎಎಸ್​ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ.

Published On - 2:38 pm, Sat, 7 September 19