ಮಾಜಿ ಸಚಿವೆ ಉಮಾಶ್ರೀ ಅವರ ಕಾರು ಅಪಘಾತ, ಇಬ್ಬರು ಸ್ಥಳದಲ್ಲಿಯೇ ದುರ್ಮರಣ
ಹುಬ್ಬಳ್ಳಿ: ತಡರಾತ್ರಿ ನಡೆದ ಎರಡು ಕಾರುಗಳ ನಡುವಿನ ಮುಖಾಮುಖಿ ಡಿಕ್ಕಿಯಲ್ಲಿ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಹುಬ್ಬಳ್ಳಿ ತಾಲೂಕಿನ ಬಂಡಿವಾಡ ಬಳಿ ನಡೆದಿದೆ. ಅಪಘಾತ ನಡೆದ ಇನ್ನೋವಾ ಕಾರು ನಟಿ ಮಾಚಿ ಸಚಿವೆ ಉಮಾಶ್ರೀಗೆ ಸೇರಿದ್ದು, ಇನ್ನೋವಾ ಹಾಗೂ ಎದುರಿನಿಂದ ಬಂದ ಮತ್ತೊಂದು ಕಾರಿನ ಮಧ್ಯೆ ಈ ಅಪಘಾತ ನಡೆದಿತ್ತು. ಆದ್ರೆ ಕಾರಿನಲ್ಲಿ ನಟಿ ಉಮಾಶ್ರೀ ಇರಲಿಲ್ಲ. ಅಪಘಾತದಲ್ಲಿ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಒರ್ವ ವೈದ್ಯೆಯ ಸ್ಥಿತಿ ಗಂಭೀರವಾಗಿದೆ. ಸಧ್ಯ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯೆಗೆ ಚಿಕಿತ್ಸೆ […]
ಹುಬ್ಬಳ್ಳಿ: ತಡರಾತ್ರಿ ನಡೆದ ಎರಡು ಕಾರುಗಳ ನಡುವಿನ ಮುಖಾಮುಖಿ ಡಿಕ್ಕಿಯಲ್ಲಿ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಹುಬ್ಬಳ್ಳಿ ತಾಲೂಕಿನ ಬಂಡಿವಾಡ ಬಳಿ ನಡೆದಿದೆ.
ಅಪಘಾತ ನಡೆದ ಇನ್ನೋವಾ ಕಾರು ನಟಿ ಮಾಚಿ ಸಚಿವೆ ಉಮಾಶ್ರೀಗೆ ಸೇರಿದ್ದು, ಇನ್ನೋವಾ ಹಾಗೂ ಎದುರಿನಿಂದ ಬಂದ ಮತ್ತೊಂದು ಕಾರಿನ ಮಧ್ಯೆ ಈ ಅಪಘಾತ ನಡೆದಿತ್ತು. ಆದ್ರೆ ಕಾರಿನಲ್ಲಿ ನಟಿ ಉಮಾಶ್ರೀ ಇರಲಿಲ್ಲ. ಅಪಘಾತದಲ್ಲಿ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಒರ್ವ ವೈದ್ಯೆಯ ಸ್ಥಿತಿ ಗಂಭೀರವಾಗಿದೆ. ಸಧ್ಯ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯೆಗೆ ಚಿಕಿತ್ಸೆ ನೀಡಲಾಗುತ್ತಿದೆ. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Published On - 9:29 am, Sat, 21 November 20