ಮಂಡ್ಯ ನಗರದ ನಟ್ಟನಡುವೆ ಬಿರುಗಾಳಿಗೆ ಧರೆಗುರುಳಿದ ಬೃಹತ್ ಮರ!
ಮಂಡ್ಯ: ರಾಜ್ಯದಲ್ಲಿ ಮಳೆಯ ಅಬ್ಬರ ಜೋರಾಗಿದೆ. ಜೊತೆಗೆ ಬಿರುಗಾಳಿಯೂ ಬೀಸುತಿದೆ. ಭಾರಿ ಗಾಳಿ ಹಿನ್ನೆಲೆಯಲ್ಲಿ ಬೃಹತ್ ಮರವೊಂದು ಧರೆಗುರುಳಿದೆ. ಮಂಡ್ಯ ನಗರದ ಕೇಂದ್ರ ಭಾಗದ ವಿವಿ ರಸ್ತೆಯಲ್ಲಿ ಬೃಹತ್ ಮರ ಭೂಮಿಗೆ ಉರುಳಿದೆ. ಇದರಿಂದ ರಸ್ತೆ ಬದಿ ನಿಲ್ಲಿಸಿದ್ದ 1 ಕಾರು, 3 ಬೈಕ್ ಜಖಂಗೊಂಡಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಇನ್ನು ಮರ ಉರುಳಿದ್ರಿಂದ ಕೆಲಕಾಲ ವಿವಿ ರಸ್ತೆಯ ಸಂಚಾರ ಬಂದ್ ಆಗಿದೆ. ಪೊಲೀಸರು, ನಗರಸಭೆ ಸಿಬ್ಬಂದಿ ಮರ ತೆರವುಗೊಳಿಸುವ ಕಾರ್ಯ ಆರಂಭಿಸಿದ್ದಾರೆ. ರಾಜ್ಯದಲ್ಲಿ ಭಾರೀ […]
ಮಂಡ್ಯ: ರಾಜ್ಯದಲ್ಲಿ ಮಳೆಯ ಅಬ್ಬರ ಜೋರಾಗಿದೆ. ಜೊತೆಗೆ ಬಿರುಗಾಳಿಯೂ ಬೀಸುತಿದೆ. ಭಾರಿ ಗಾಳಿ ಹಿನ್ನೆಲೆಯಲ್ಲಿ ಬೃಹತ್ ಮರವೊಂದು ಧರೆಗುರುಳಿದೆ. ಮಂಡ್ಯ ನಗರದ ಕೇಂದ್ರ ಭಾಗದ ವಿವಿ ರಸ್ತೆಯಲ್ಲಿ ಬೃಹತ್ ಮರ ಭೂಮಿಗೆ ಉರುಳಿದೆ. ಇದರಿಂದ ರಸ್ತೆ ಬದಿ ನಿಲ್ಲಿಸಿದ್ದ 1 ಕಾರು, 3 ಬೈಕ್ ಜಖಂಗೊಂಡಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಇನ್ನು ಮರ ಉರುಳಿದ್ರಿಂದ ಕೆಲಕಾಲ ವಿವಿ ರಸ್ತೆಯ ಸಂಚಾರ ಬಂದ್ ಆಗಿದೆ. ಪೊಲೀಸರು, ನಗರಸಭೆ ಸಿಬ್ಬಂದಿ ಮರ ತೆರವುಗೊಳಿಸುವ ಕಾರ್ಯ ಆರಂಭಿಸಿದ್ದಾರೆ. ರಾಜ್ಯದಲ್ಲಿ ಭಾರೀ ಮಳೆಯಿಂದಾಗಿ ಇಂತಹ ಅನಾಹುತಗಳು ಸಂಭವಿಸುತ್ತಲೇ ಇವೆ.
