ಮಹಿಳೆಯ ಯಡವಟ್ಟಿಗೆ ಸುಟ್ಟು ಕರಕಲಾದ ಕಾರು!

ಬೆಂಗಳೂರು: ಕಾರಿಗೆ ಗ್ಯಾಸ್‌ ತುಂಬುವಾಗ ಅಗ್ನಿ ಅವಘಡ ಸಂಭವಿಸಿ ಕಾರು ಭಸ್ಮವಾಗಿರುವ ಘಟನೆ ರಾಜಾಜಿನಗರದ ಮಂಜುನಾಥನಗರದಲ್ಲಿ ನಡೆದಿದೆ. ಓಮ್ನಿ ಕಾರ್​ಗೆ ಎಲ್‌ಪಿಜಿ ಸಿಲಿಂಡರ್‌ನಿಂದಲೇ ಗ್ಯಾಸ್ ತುಂಬಲು ಹೋಗಿ ಇಂತಹ ಅನಾಹುತಕ್ಕೆ ಕಾರಣವಾಗಿದೆ. ಮಹಿಳೆಯ ಯಡವಟ್ಟಿಗೆ ಕಾರ್ ಸುಟ್ಟು ಭಸ್ಮವಾಗಿದೆ.ಮಹಿಳೆಯೊಬ್ಬರು ಕಾರಿಗೆ ಗ್ಯಾಸ್ ತುಂಬಲು ಯತ್ನಿಸಿದ್ದಾರೆ. ಈ ವೇಳೆ ಕಾರ್​ಗೆ ಬೆಂಕಿ ಅಂಟಿಕೊಂಡಿದೆ. ಸ್ಥಳದಲ್ಲೇ ಇದ್ದ ಮಹಿಳೆ ಕೂದಲಳತೆ ಅಂತರದಿಂದ ಪಾರಾಗಿದ್ದಾರೆ. ಸ್ಥಳದಲ್ಲಿ ಇದ್ದ ಜನ ಬೆಂಕಿಯನ್ನು ಆರಿಸಿದ್ದಾರೆ. ಕೂಡಲೇ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಕಾರ್ಯಪ್ರವೃತರಾಗಿದ್ದಾರೆ. ಸ್ಥಳೀಯ […]

ಮಹಿಳೆಯ ಯಡವಟ್ಟಿಗೆ ಸುಟ್ಟು ಕರಕಲಾದ ಕಾರು!

Updated on: Aug 22, 2020 | 3:44 PM

ಬೆಂಗಳೂರು: ಕಾರಿಗೆ ಗ್ಯಾಸ್‌ ತುಂಬುವಾಗ ಅಗ್ನಿ ಅವಘಡ ಸಂಭವಿಸಿ ಕಾರು ಭಸ್ಮವಾಗಿರುವ ಘಟನೆ ರಾಜಾಜಿನಗರದ ಮಂಜುನಾಥನಗರದಲ್ಲಿ ನಡೆದಿದೆ.

ಓಮ್ನಿ ಕಾರ್​ಗೆ ಎಲ್‌ಪಿಜಿ ಸಿಲಿಂಡರ್‌ನಿಂದಲೇ ಗ್ಯಾಸ್ ತುಂಬಲು ಹೋಗಿ ಇಂತಹ ಅನಾಹುತಕ್ಕೆ ಕಾರಣವಾಗಿದೆ. ಮಹಿಳೆಯ ಯಡವಟ್ಟಿಗೆ ಕಾರ್ ಸುಟ್ಟು ಭಸ್ಮವಾಗಿದೆ.ಮಹಿಳೆಯೊಬ್ಬರು ಕಾರಿಗೆ ಗ್ಯಾಸ್ ತುಂಬಲು ಯತ್ನಿಸಿದ್ದಾರೆ. ಈ ವೇಳೆ ಕಾರ್​ಗೆ ಬೆಂಕಿ ಅಂಟಿಕೊಂಡಿದೆ.

ಸ್ಥಳದಲ್ಲೇ ಇದ್ದ ಮಹಿಳೆ ಕೂದಲಳತೆ ಅಂತರದಿಂದ ಪಾರಾಗಿದ್ದಾರೆ. ಸ್ಥಳದಲ್ಲಿ ಇದ್ದ ಜನ ಬೆಂಕಿಯನ್ನು ಆರಿಸಿದ್ದಾರೆ. ಕೂಡಲೇ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಕಾರ್ಯಪ್ರವೃತರಾಗಿದ್ದಾರೆ. ಸ್ಥಳೀಯ ಜನರ ರಕ್ಷಣೆಯಿಂದ ದೊಡ್ಡ ಅನಾಹುತ ತಪ್ಪಿದೆ. ಬೆಂಕಿಯಿಂದ ಓಮ್ನಿ ಕಾರು ಸಂಪೂರ್ಣ ಸುಟ್ಟು ಭಸ್ಮವಾಗಿದೆ.