ಬಂಧನ ಬೆನ್ನಲ್ಲೇ ರೋಷನ್ ಮನೆ ಮೇಲೆ CBI ರೇಡ್, ಪುತ್ರ ರುಮಾನ್ ಕಚೇರಿ ಮೇಲೂ ದಾಳಿ

  • TV9 Web Team
  • Published On - 8:02 AM, 23 Nov 2020
ಬಂಧನ ಬೆನ್ನಲ್ಲೇ ರೋಷನ್ ಮನೆ ಮೇಲೆ CBI ರೇಡ್, ಪುತ್ರ ರುಮಾನ್ ಕಚೇರಿ ಮೇಲೂ ದಾಳಿ

ಬೆಂಗಳೂರು: ಮಾಜಿ ಸಚಿವ ರೋಷನ್‌ಬೇಗ್ ಮನೆ ಮೇಲೆ ಸಿಬಿಐ ದಾಳಿ ನಡೆಸಿದೆ. IMA ಕೇಸ್​ನಲ್ಲಿ ಸಿಬಿಐನಿಂದ ರೋಷನ್ ಬೇಗ್ ಬಂಧನವಾಗಿದೆ. ಆರ್​.ರೋಷನ್​ ಬೇಗ್​ರನ್ನು 14 ದಿನ ನ್ಯಾಯಾಂಗ​ ಬಂಧನಕ್ಕೆ ನೀಡಲಾಗಿದೆ.

ಇದೇ ಬೆನ್ನಲ್ಲೇ ಇಂದು ದೆಹಲಿ ಮೂಲದ ಸಿಬಿಐನ 7 ಅಧಿಕಾರಿಗಳ ತಂಡದಿಂದ ದಾಳಿ ನಡೆದಿದೆ. ರೋಷನ್ ಬೇಗ್ ಪತ್ನಿಗೆ ಅಧಿಕಾರಿಗಳು ರೇಡ್ ಸಂಬಂಧ ಮಾಹಿತಿ ನೀಡ್ತಿದ್ದು ಬೆಂಗಳೂರಿನ ಪುಲಿಕೇಶಿನಗರದ ಕೋಲ್ಸ್‌ ಪಾರ್ಕ್ ಬಳಿ ಇರುವ ನಿವಾಸದಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ.

ರೋಷನ್‌ಬೇಗ್ ಮನೆಯ ಎರಡನೇ ಮಹಡಿಯ ಕೋಣೆಗಳಲ್ಲಿ ಸಿಬಿಐ ಅಧಿಕಾರಿಗಳಿಂದ ಶೋಧ ಕಾರ್ಯ ನಡೆಯುತ್ತಿದೆ. ಮನೆಯ ಸದಸ್ಯರಿಗೆ ಕೋಣೆಯೊಂದರಲ್ಲಿ ಇರುವಂತೆ ಸೂಚನೆ ನೀಡಲಾಗಿದ್ದು ಮನೆಗೆಲಸದವರಿಂದ ಕಚೇರಿ ಕೀ ಪಡೆದ ಸಿಬಿಐ ಅಧಿಕಾರಿಗಳು ಬೇಗ್ ಮನೆಯ ಸೆಲ್ಲರ್​ನಲ್ಲಿರುವ ಕಚೇರಿಯಲ್ಲಿ ಪರಿಶೀಲನೆಯನ್ನು ಮುಂದುವರೆಸಿದ್ದಾರೆ.

ರೋಷನ್  ಪುತ್ರ ರುಮಾನ್ ಕಚೇರಿ ಮೇಲೂ ದಾಳಿ:  IMA ಯಿಂದ ಗ್ರಾಹಕರಿಗೆ ಬಹುಕೋಟಿ ರೂ. ವಂಚನೆ ಕೇಸ್​ನಲ್ಲಿ ರೋಷನ್ ಬೇಗ್ ಪುತ್ರ ರುಮಾನ್ ಕಚೇರಿ ಮೇಲೂ 2 ದಿನಗಳ ಹಿಂದೆ ದಾಳಿ ನಡೆದಿದೆ ಎಂದು ತಿಳಿದುಬಂದಿದೆ. ಬೆಂಗಳೂರಿನ ಜಯಮಹಲ್ ರಸ್ತೆಯಲ್ಲಿ ರುಮಾನ್ ಬೇಗ್ ಕಚೇರಿ ಇದೆ.

ಇದನ್ನೂ ಓದಿ: ರೋಷನ್​ ಬೇಗ್​ಗೆ 14 ದಿನ ನ್ಯಾಯಾಂಗ​ ಬಂಧನ